ಇಂಡಿಯಾ ಕೂಟವನ್ನು ಕಟ್ಟಿದ್ಯಾಕೆ..! ಒಡೆದಿದ್ಯಾಕೆ..!

By Suvarna NewsFirst Published Jan 28, 2024, 12:12 PM IST
Highlights

ಮೋದಿಗೆ ಸಡ್ಡು ಹೊಡೆಯಬೇಕು, ಮೋದಿ ಅಧಿಕಾರಕ್ಕೆ ಬರಬಾರದು ಎನ್ನುವ ಉದ್ದೇಶದಿಂದ 'ಭಾರತದ ಮಕ್ಕಳಲೆಲ್ಲಾ ಒಂದಾಗಿ ಬನ್ನಿ' ಅಂಥ ಗುಡ್ಡೆ ಹಾಕಿದ ದೀದಿ, ತಾವೇ ಕಟ್ಟಿದ್ದ ಕೋಟೆಯನ್ನು ಒಡೆದು ಹಾಕಿದ್ದಾರೆ.

ವರದಿಗಾರರ ಡೈರಿ: ಡೆಲ್ಲಿ ಮಂಜು

ನಿಷ್ಟೂರ ಮಾತುಗಾತಿ ಬಂಗಾಳಿಗಳ ಅಕ್ಕ, ರಾಜಕೀಯದ ಸುಂಟರಗಾಳಿ ಮಮತಾ ದೀದಿಗೆ ವಾರೆನೋಟಿಗರು ಕೇಳುತ್ತಿರುವ ಪ್ರಶ್ನೆ ಇದು.  ರಾಜಕಾರಣ ಅಂದ್ರೆ ಸ್ವಾರ್ಥ. ಅಧಿಕಾರ ಅದರಲ್ಲೂ ನಾನು ಕುರ್ಚಿ ಬಿಡಲ್ಲ ಅನ್ನೋದಕ್ಕೆ ದೀದಿ ಕೂಡ ಬಿನ್ನ ಇಲ್ಲ.

ಮೋದಿಗೆ ಸಡ್ಡು ಹೊಡೆಯಬೇಕು, ಮೋದಿ ಅಧಿಕಾರಕ್ಕೆ ಬರಬಾರದು ಎನ್ನುವ ಒನ್ ಲೇನ್ ಉದ್ದೇಶ ಇಟ್ಟುಕೊಂಡು 'ಭಾರತದ ಮಕ್ಕಳಲೆಲ್ಲಾ ಒಂದಾಗಿ ಬನ್ನಿ' ಅಂಥ ಗುಡ್ಡೆ ಹಾಕಿದ ದೀದಿ, ಇದೀಗ ಅವರು ನನ್ನ ಮಾತುಕೇಳಲಿಲ್ಲ ಅಂಥ ಕಟ್ಟಿದ್ದ ಕೋಟೆಯನ್ನು ತಾನೇ ಹೊಡೆಯುವುದು ಎಷ್ಡು ಸರಿ? ಹೇಳಿ.

'ಇಂಡಿಯಾ' ಅಂತ ಕೂಟಕ್ಕೆ ಹೆಸರು ಕೊಟ್ರು.. ಖರ್ಗೆ ನಮ್ಮ ಪ್ರಧಾನಿ ಅಭ್ಯರ್ಥಿ ಎಂದ್ರು ಇನ್ನೇನು ನಿಮ್ಮ ಸೀಟು ಎಷ್ಟು? ನಮ್ಮ ಸೀಟು ಎಷ್ಟು ? ಅಂಥ ಪ್ತಶ್ನೆ ಕೇಳಿದ ಕೂಡಲೇ ನಿಮಗು ನಮಗೂ ಸಂಬಂಧವೇ ಇಲ್ಲ ಅಂಥ 'ಟೂ' ಬಿಟ್ರು..  ದೇಶ ಎಲ್ಲ ಸುತ್ತಿ ಮೋದಿ ವಿರೋಧಿ ಗುಂಪು ಕಟ್ಟಿದ್ದ ದೀದಿ, ಉದ್ದೇಶ ಸಫಲವಾಗುವ ಮುನ್ನವೇ ತಾವಾಗಿಯೇ ಗುಂಪು ಹೊಡೆದು ಹೊರ ಬಂದಿದ್ದಕ್ಕೆ ಅವಕಾಶವಾದಿ ರಾಜಕಾರಣ ಎನ್ನಬೇಕಾ? ಅಥವಾ ಏನ್ನಬೇಕು ಅಂಥ ಆ ಕಾಳಿ ಮಾತೆಯನ್ನೇ ಕೇಳಬೇಕಿದೆ. ಹಾಗಾಗಿ ಕಟ್ಟಿದ್ಯಾಕೆ? ಹೊಡೆದಿದ್ಯಾಕೆ? ಅನ್ನೋ ಗೊಂದಲ ರಾಜಕೀಯ ಪ್ರಿಯರಲ್ಲಿ ಗಿರ್ಕಿ ಹೊಡೆಯುತ್ತಲೇ ಇದೆ.

ಇನ್ನು ಬಿಹಾರ ರಾಜಕೀಯ ಭಾರಿ ಕುತೂಹಲ ಕೆರಳಿಸಿದ್ದು, ನಿತೀಶ್‌ ಕುಮಾರ್‌ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಹಾರ ರಾಜ್ಯಪಾಲರನ್ನು ಭೇಟಿ ಮಾಡಿದ ನಿತೀಶ್‌ ಕುಮಾರ್‌ ಅಧಿಕೃತವಾಗಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಆರ್‌ಜೆಡಿ, ಕಾಂಗ್ರೆಸ್‌, ಎಡರಂಗ ಹಾಗೂ ಜೆಡಿಯು ಮೈತ್ರಿ ಸರ್ಕಾರ ಪತನಗೊಂಡಿದೆ. ಇನ್ನೊಂದೆಡೆ, ಬಿಜೆಪಿ ಜತೆಗೆ ಸೇರಿ ಇಂದು ಸಂಜೆ ಮತ್ತೆ ಜೆಡಿಯು - ಬಿಜೆಪಿ ಸರ್ಕಾರ ರಚನೆಯಾಗೋದು ಸಹ ಬಹುತೇಕ ಖಚಿತವಾಗಿದೆ. ಭಾನುವಾರ ಸಂಜೆ 4 ಗಂಟೆ ಅಥವಾ 5 ಗಂಟೆಯ ವೇಳೆಗೆ ನಿತೀಶ್‌ ಕುಮಾರ್‌ ಮತ್ತೆ ಸಿಎಂ ಆಗ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿದ ನಂತರ ನಿತೀಶ್ ಕುಮಾರ್ ಭಾನುವಾರ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜನತಾ ದಳ (ಯುನೈಟೆಡ್) ಅನುಭವಿ ಈಗ ಬಿಜೆಪಿಯೊಂದಿಗೆ ಹೊಸ ಸರ್ಕಾರ ರಚಿಸಲು ಹಕ್ಕು ಸಾಧಿಸಲಿದೆ ಎಂದು ತಿಳಿದುಬಂದಿದೆ. ಬಿಹಾರ ರಾಜ್ಯಪಾಲರ ಜತೆ ಮಾತನಾಡಿದ ನಿತೀಶ್‌ ಕುಮಾರ್‌, ರಾಜ್ಯದಲ್ಲಿನ ಮಹಾಘಟಬಂಧನ ಸರ್ಕಾರಕ್ಕೆ (ಆರ್‌ಜೆಡಿ, ಕಾಂಗ್ರೆಸ್‌) ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾಗಿ ಹೇಳಿ ರಾಜೀನಾಮೆ ನೀಡಿದ್ದಾರೆ.

click me!