ಮರಾಠಾ ಒಬಿಸಿ ಮೀಸಲಿಗೆ ಮಹಾರಾಷ್ಟ್ರ ಸರ್ಕಾರ ಅಸ್ತು: ಹೋರಾಟಗಾರನ ಉಪವಾಸ ಅಂತ್ಯ

By Kannadaprabha NewsFirst Published Jan 28, 2024, 10:58 AM IST
Highlights

ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಶುಕ್ರವಾರ ರಾತ್ರಿ ಜಾರಂಗೆ ಅವರ ಜೊತೆ ಸಮಾಲೋಚನೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ.

ಮುಂಬೈ (ಜನವರಿ 28, 2024): ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಬಿಸಿ ಮೀಸಲಿಗೆ ಒತ್ತಾಯಿಸಿ ಕಳೆದೆರಡು ದಿನಗಳಿಂದ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದ ಮರಾಠಾ ಸಮುದಾಯಕ್ಕೆ ಮಹಾರಾಷ್ಟ್ರ ಸರ್ಕಾರ ಮಣಿದಿದ್ದು, ಬೇಡಿಕೆಗಳಿಗೆ ಒಪ್ಪಿಕೊಂಡಿದೆ. ಹೀಗಾಗಿ ಸಮುದಾಯದ ಮುಖಂಡ ಮನೋಜ್‌ ಜಾರಂಗೆ ಪಾಟೀಲ್‌ ಅವರು ಮುಷ್ಕರ ಹಿಂಪಡೆದುಕೊಂಡಿದ್ದಾರೆ.
ಜಾರಂಗೆ ನೇತೃತ್ವದಲ್ಲಿ ಮರಾಠ ಸಮುದಾಯ ಮುಂಬೈ ಹೊರವಲಯದಲ್ಲಿ ಕಳೆದೆರಡು ದಿನಗಳಿಂದ ಮರಾಠರು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದರು. ಅಲ್ಲದೆ ಬೇಡಿಕೆ ಈಡೇರಿಸದಿದ್ದರೆ ಮುಂಬೈನ ಆಜಾ಼ದ್‌ ಮೈದಾನದಲ್ಲಿ ದೊಡ್ಡ ಆಂದೋಲನ ನಡೆಸುವುದಾಗಿ ಬೆದರಿಕೆ ಒಡ್ಡಿದ್ದರು.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಶುಕ್ರವಾರ ರಾತ್ರಿ ಜಾರಂಗೆ ಅವರ ಜೊತೆ ಸಮಾಲೋಚನೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ.

ಬೆಳಗಾವಿಯಲ್ಲಿ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರ ವೈದ್ಯಕೀಯ ನೆರವು

 

ಈ ಹಿನ್ನೆಲೆಯಲ್ಲಿ ಮರಾಠ ಸಮುದಾಯ ಮುಂಬೈನ ವಾಶಿಯಲ್ಲಿ ವಿಜಯ ಯಾತ್ರೆಯನ್ನು ಕೈಗೊಂಡಿತು. ಮರಾಠ ಸಮುದಾಯವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಬೇಕೆಂದು ಆಗ್ರಹಿಸಿತ್ತು. ಜೊತೆಗೆ ಮರಾಠಾ ಸಮುದಾಯದವರಿಗೆ ಕುಣಬಿ ಸಮಾಜಕ್ಕೆ ನೀಡುವ ಒಬಿಸಿ ಜಾತಿ ಪತ್ರಗಳನ್ನು ನೀಡಿ ಸಮುದಾಯವನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡಿದ್ದರು.

ಬೆಳಗಾವಿಯಲ್ಲಿ ಹೆಚ್ಚಾಯ್ತು ಮರಾಠಿಗರ ಪುಂಡಾಟ: ಕನ್ನಡ ಬಾವುಟ ಹಾರಿಸಿದ ಕನ್ನಡಿಗರ ಮೇಲೆ ಹಲ್ಲೆ!

click me!