ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. 39 ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸಲಾಗಿದೆ.
ನವದೆಹಲಿ(ಮಾ.08) ಲೋಕಸಭಾ ಚುನಾವಣ ದಿನಾಂಕ ಘೋಷಣೆಗೆ ಕೆಲ ದಿನ ಮಾತ್ರ ಬಾಕಿ. ಚುನಾವಣೆ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇಂಡಿಯಾ ಮೈತ್ರಿಯ ಸೀಟು ಹಂಚಿಕೆ ಮಾತುಕತೆ ಅಂತಿಮಗೊಳಿಸಿರುವ ಕಾಂಗ್ರೆಸ್ ಇದೀಗ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ, ಭೂಪೇಶ್ ಬಾಘೆಲ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಚುನಾವಣಾ ಸಮಿತಿಯ ಪವನ್ ಖೇರಾ, ಕೆಸಿ ವೇಣುಗೋಪಾಲ್, ಅಜಯ್ ಮಾಕೇನ್ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ದೇಶದ 39 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ರಾಹುಲ್ ಗಾಂಧಿ ವಾಯನಾಡು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಶಶಿ ತರೂರ್ ತಿರುವನಂತಪುರಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಪೈಕಿ ಕರ್ನಾಟಕದ 7 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ.
ತೆರಿಗೆ ಕೇಸ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ, ಅಕೌಂಟ್ ಫ್ರೀಜ್‌ಗೆ ತಡೆ ನೀಡುವ ಮನವಿ ತಿರಸ್ಕಾರ
ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಬಿಜಾಪುರ-ರಾಜು ಅಲಗೋರ್
ಹಾವೇರಿ: ಅನಂದ್‌ಸ್ವಾಮಿ ಗಡ್ಡೇವರ ಮಠ
ತುಮಕೂರು: ಎಸ್‌ಪಿ ಮುದ್ದಹನುಮೇಗೌಡ
ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್
ಶಿವಮೊಗ್ಗ-ಗೀತಾ ಶಿವರಾಜ್‌ಕುಮಾರ್
ಹಾಸನ್: ಶ್ರೇಯಸ್ ಪಟೇಲ್
ಕೇರಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ವಯನಾಡ್ (ಕೇರಳ): ರಾಹುಲ್ ಗಾಂಧಿ
ಕಾಸರಗೋಡು (ಕೇರಳ): ರಾಜಮೋಹನ್ ಉಣ್ಣಿತ್ತಾನ್
ಕಣ್ಣೂರು (ಕೇರಳ): ಕೆ ಸುಧಾಕರನ್
ವಡಕರ (ಕೇರಳ): ಶಫಿ ಪರಂಬಿಲ್
ಕೋಝಿಕ್ಕೋಡ್ (ಕೇರಳ): ಎಂಕೆ ರಾಘವನ್
ಪಾಲಕ್ಕಾಡ್ (ಕೇರಳ): ವಿಕೆ ಶ್ರೀಕಂಠನ್
ಅಲತೂರ್(ಎಸ್‌ಸಿ) (ಕೇರಳ): ರೆಮ್ಯಾ ಹರಿದಾಸ್
ತ್ರಿಶೂರ್ (ಕೇರಳ): ಕೆ ಮರಳೀಧರನ್
ಚಾಲಕ್ಕುಡಿ (ಕೇರಳ): ಬೆನ್ನಿ ಬಹನ್ನಾನ್
ಎರ್ನಾಕುಲಂ(ಕೇರಳ): ಹಿಬಿ ಇಡೆನ್
ಇಡುಕ್ಕಿ(ಕೇರಳ): ಡೀನ್ ಕುರಿಯಾಕೋಸ್
ಮಾವೇಲಿಕರ(ಎಸ್‌ಸಿ)(ಕೇರಳ): ಕೋಡಿಕುನ್ನಿಲ್ ಸುರೇಶ್
ಪಟ್ಟಣಂತಿಟ್ಟ(ಕೇರಳ): ಆ್ಯಂಟೋ ಆ್ಯಂಟೋನಿ
ಅತ್ತಿಂಗಲ್(ಕೇರಳ): ಅಡೂರ್ ಪ್ರಕಾಶ್
ಕಾಂಗ್ರೆಸ್ ಪಕ್ಷಕ್ಕೆ ಜನರ ಸಾಥ್ ಗ್ಯಾರಂಟಿ: ಸಚಿವ ಈಶ್ವರ್ ಖಂಡ್ರೆ
ಚತ್ತೀಸಘಡ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಜಾಂಗೀರ್ ಚಂಪಾ: ಡಾ. ಶಿವಕುಮಾರ್ ದಹರಿಯಾ
ಕೋಬ್ರಾ; ಜ್ಯೋತ್ಸನಾ ಮಹಾಂತ್
ರಾಜನಂದಗಾಂವ್: ಭೂಪೇಶ್ ಭಾಘೆಲ್
ದುರ್ಗ್ : ರಾಜೇಂದ್ರ ಸಾಹು
ರಾಯ್‌ಪುರ್:ವಿಕಾಸ್ ಉಪಾಧ್ಯಾಯ್
ಮಹಾಸಮಂದ್: ತಮ್ರಧ್ವಾಜ್ ಸಾಹು
ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಜಹೀರಾಬಾದ್: ಸುರೇಶ್ ಕುಮಾರ್ ಶೆಟ್ಕರ್
ನಾಲ್ಗೊಂಡ:ರಘುವೀರ್ ಕುಂದುರು
ಮಹಾಬುಬ್ನಗರ್ :ಚಲ್ಲ ವಂಶಿ ಚಂದ್ ರೆಡ್ಡಿ
ಮಹಾಬುಬಾಬಾದ್ ಎಸ್‌ಟಿ: ಬಾಲ್‌ರಾಮ್ ನಾಯ್ಕ್ ಪೊರಿಕಾ
ಸುದ್ದಿಗೋಷ್ಠಿ ಆರಂಭದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತು ಮಾತನಾಡಿದ ಕೆಸಿ ವೇಣುಗೋಪಾಲ್, ಎಲ್ಲಾ ಇಂಡಿಯಾ ಮೈತ್ರಿ ಪಕ್ಷಗಳು ಸಹಕಾರ ನೀಡಿದೆ ಎಂದರು. ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ವೇಳೆ ಕಾಂಗ್ರೆಸ್ ಲೋಕಸಭಾ ಚುನಾವಣಾ ಪ್ರಣಾಳಿಕೆ ಕುರಿತು ಮತ್ತೆ ಬೆಳಕು ಚೆಲ್ಲಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 30 ಲಕ್ಷ ಉದ್ಯೋಗ ನೀಡಲಿದೆ ಎಂದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಕಾಂಗ್ರೆಸ್ ಹೊಸ ನಿಯಮ ರೂಪಿಸಲಿದೆ. ಸ್ಟಾರ್ಟ್ ಅಪ್ ಸೇರಿದಂತೆ ಯಾವುದೇ ಸ್ವ ಉದ್ಯೋಗ ಮಾಡುವರಿಗೆ ವಿಶೇಷ ನೆರವು ನೀಡಲಾಗುತ್ತದೆ ಎಂದರು. ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಸಮಿತಿ ಮಾಚ್೯ 11 ರಂದು 2ನೇ ಸಿಇಸಿ ನಡೆಸಲಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.