ನವದೆಹಲಿ: ಜಿಹಾದಿ ಪರಿಕಲ್ಪನೆ ಕೇವಲ ಇಸ್ಲಾಂನಲ್ಲಿ ಮಾತ್ರ ಇಲ್ಲ. ಇಂಥ ಪರಿಕಲ್ಪನೆ ಭಗವದ್ಗೀತೆ ಮತ್ತು ಕ್ರೈಸ್ತರಲ್ಲೂ ಇದೆ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಗುರುವಾರ ಇಲ್ಲಿ ನಡೆದ ಮಾಜಿ ಕೇಂದ್ರ ಸಚಿವ ಮೊಹ್ಸೀನಾ ಕಿದ್ವಾಯಿ (Mohsina Kidwai) ಅವರ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಪಾಟೀಲ್ (Shivraj Patil) ‘ಇಸ್ಲಾಂನಲ್ಲಿನ ಜಿಹಾದ್ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಉತ್ತಮ ಉದ್ದೇಶದಿಂದ, ಉತ್ತಮ ಕೆಲಸಗಳನ್ನು ಮಾಡಿದಾಗಲೂ ಅದನ್ನು ಯಾರು ಅರ್ಥ ಮಾಡಿಕೊಳ್ಳದೇ ಇದ್ದಾಗ ನೀವು ಬಲಪ್ರಯೋಗ ಮಾಡಬಹುದು ಎಂದು ಧರ್ಮದಲ್ಲಿ ಹೇಳಲಾಗುತ್ತದೆ. ಇಂಥ ಪರಿಕಲ್ಪನೆ ಕೇವಲ ಇಸ್ಲಾಂನಲ್ಲಿ (Islam) ಮಾತ್ರವಲ್ಲ. ಮಹಾಭಾರತ, ಭಗವದ್ಗೀತೆಯಲ್ಲೂ ಇದೆ. ಮಹಾಭಾರತದ ಯುದ್ಧದ ವೇಳೆ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ (ಧರ್ಮಯುದ್ಧ) ಬಗ್ಗೆ ಪಾಠ ಮಾಡುತ್ತಾನೆ. ಇಂಥ ಪರಿಕಲ್ಪನೆ ಕ್ರೈಸ್ತರಲ್ಲೂ ಇದೆ ಎಂದು ಹೇಳಿದ್ದಾರೆ.
ಮಗೆ ಎಲ್ಲವನ್ನೂ ವಿವರಿಸಿದ ಮೇಲೂ, ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದಾದರೆ, ನಿಮ್ಮ ವಿರುದ್ಧ ಶಸ್ತ್ರ ಹಿಡಿದು ಬಂದಾಗ ನೀವು ಓಡಿಹೋಗಲಾರಿರಿ. ಜೊತೆಗೆ ಅದನ್ನು ನೀವು ಜಿಹಾದ್ (Jihad) ಎಂದು ಕೂಡಾ ಹೇಳಲಾಗದು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಪಾಟೀಲ್ ತಮ್ಮ ಹೇಳಿಕೆ ನೀಡಿದ್ದಾರೆ.
ಉಡುಪಿ: ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಹೇಳಿಕೆ: ನಟ ಚೇತನ್ ವಿರುದ್ಧ ದೂರು
ಬಿಜೆಪಿ ಟೀಕೆ:
ಈ ಬಗ್ಗೆ ಕಿಡಿಕಾರಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ (Shehzad Poonawala)‘ಕಾಂಗ್ರೆಸ್‌ನವರೇ ಮೊದಲಿಗೆ ಹಿಂದೂ/ ಕೇಸರಿ ಉಗ್ರವಾದ ಎಂಬ ಪದ ಹುಟ್ಟು ಹಾಕಿದರು, ರಾಮಮಂದಿರ ನಿರ್ಮಾಣ ವಿರೋಧಿಸಿದರು, ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದರು, ಹಿಂದುತ್ವವೆಂದರೆ ಐಸಿಸ್ ಎಂದು ಬಣ್ಣಿಸಿದರು. ಇದೀಗ ಶ್ರೀಕೃಷ್ಣ (Sri Krishna) ಅರ್ಜುನನಿಗೆ ಜಿಹಾದ್ (Jihad) ಬೋಧಿಸಿದ ಎಂದು ಹೊಸ ವಾದ ಮಂಡಿಸಿದೆ’ ಎಂದು ಕಿಡಿಕಾರಿದ್ದಾರೆ.
ನಿಷ್ಕ್ರಿಯ ಸಚಿವ
160ಕ್ಕೂ ಹೆಚ್ಚು ಜನರ ಬಲಿ ಪಡೆದ ಮುಂಬೈ ಸರಣಿ ಬಾಂಬ್ ಸ್ಫೋಟ, ನೂರಾರು ಜನರ ಬಲಿ ಪಡೆದ ಮುಂಬೈ ರೈಲು ಸ್ಫೋಟ ಪ್ರಕರಣದ ವೇಳೆ ಕೇಂದ್ರ ಗೃಹ ಸಚಿವರಾಗಿದ್ದ (Union Home Minister) ಪಾಟೀಲ್, ತಮ್ಮ ಅವಧಿಯುದ್ದಕ್ಕೂ ನಿಷ್ಕ್ರಿಯತೆಯಿಂದ ಕುಖ್ಯಾತಿ ಪಡೆದು, ಬಳಿಕ ಅದೇ ಕಾರಣಕ್ಕೆ ಹುದ್ದೆಯಿಂದ ತೆಗೆದು ಹಾಕಲ್ಪಟ್ಟಿದ್ದರು. ಅವರ ಈ ಹೇಳಿಕೆಯನ್ನು ಬಿಜೆಪಿ ವೋಟ್‌ಬ್ಯಾಂಕ್ ರಾಜಕೀಯ ಎಂದು ಕಿಡಿಕಾರಿದೆ.
ಕಾಂತಾರ ಚಿತ್ರ ವಿವಾದ: ನಟ ಚೇತನ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ