ಕೇರಳದಲ್ಲಿ ಮತ್ತೆ ಕಂಪ್ಲೀಟ್ ಲಾಕ್‌ಡೌನ್, ಮಾಸ್ ಟೆಸ್ಟಿಂಗ್‌ಗೆ ಸಿದ್ಧತೆ

By Suvarna NewsFirst Published Jul 21, 2021, 7:18 PM IST
Highlights
  • ಕೇರಳದಲ್ಲಿ ಹೆಚ್ಚಿದ ಕೊರೋನಾ ಪ್ರಕರಣ
  • ಮತ್ತೆ ಕಂಪ್ಲೀಟ್ ಲಾಕ್‌ಡೌನ್, ಮಾಸ್ ಟೆಸ್ಟಿಂಗ್‌ಗೆ ಸಿದ್ಧತೆ

ನವದೆಹಲಿ(ಜು.21): ಕೇರಳ ಸರ್ಕಾರ ಜುಲೈ 23 ಮತ್ತು 24 ರಂದು ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಆದೇಶಿಸಿದೆ. ದಿನಕ್ಕೆ 3 ಲಕ್ಷ ಕೊರೋನಾ ಟೆಸ್ಟ್ ಗುರಿಯಾಗಿಟ್ಟುಕೊಂಡು ಸಾಮೂಹಿಕ ಪರೀಕ್ಷಾ ಅಭಿಯಾನವನ್ನು ನಡೆಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ.

2021 ರ ಜುಲೈ 24 ಮತ್ತು 25 ರಂದು ಸಂಪೂರ್ಣ ಲಾಕ್‌ಡೌನ್ ಆಗಲಿದ್ದು, 2021 ರ ಜೂನ್ 12 ಮತ್ತು 13 ರಂದು ಹೊರಡಿಸಿದ ಮಾರ್ಗಸೂಚಿಗಳೊಂದಿಗೆ ರಾಜ್ಯ ಸರ್ಕಾರ ತಿಳಿಸಿದೆ.

ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ: ಜು. 21ರ ಅಂಕಿ-ಸಂಖ್ಯೆ ನೋಡಿ

ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆ (ಎಲ್‌ಎಸ್‌ಜಿಐ) ಎಲ್ಲಾ ಜಿಲ್ಲೆಗಳಲ್ಲಿನ ಸೂಕ್ಷ್ಮ ವಲಯಗಳನ್ನು ಗುರುತಿಸಲಿದೆ. ಹೊಸ ಪ್ರಕರಣಗಳನ್ನು ಶೀಘ್ರವಾಗಿ ನಿಲ್ಲಿಸಲು ವಿಶೇಷ ತೀವ್ರವಾದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲು ನಿರ್ದೇಶಿಸಲಾಗಿದೆ.

ಜೂನ್ 16 ರಂದು ರಾಜ್ಯ ಸರ್ಕಾರವು ತನ್ನ ರಾಜ್ಯವ್ಯಾಪಿ ಲಾಕ್‌ಡೌನ್ ಅನ್ನು ಹಿಂತೆಗೆದುಕೊಂಡ ನಂತರ ಮತ್ತು ಬಕ್ರೀದ್‌ಗೆ COVID-19 ನಿರ್ಬಂಧದಲ್ಲಿ ಮೂರು ದಿನಗಳ ವಿನಾಯಿತಿ ನೀಡಿತ್ತು. ಈ ಹಿನ್ನೆಲೆ ಜವಳಿ ಅಂಗಡಿಗಳು, ಆಭರಣಗಳು, ಪಾದರಕ್ಷೆಗಳ ಅಂಗಡಿಗಳು ಭಾನುವಾರದಿಂದ ಮೂರು ದಿನಗಳವರೆಗೆ ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು.

ಜುಲೈ 19 ರಂದು ಸುಪ್ರೀಂ ಕೋರ್ಟ್ ಮೂರು ದಿನಗಳ ಲಾಕ್‌ಡೌನ್ ವಿನಾಯಿತಿ ವಿರುದ್ಧ ಅರ್ಜಿಯ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ.

ಉನ್ನತ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ  ಜನರ ಬದುಕುವ ಹಕ್ಕನ್ನು ಗಮನದಲ್ಲಿರಿಸಿಕೊಳ್ಳಿ ಎಂದು ನಿರ್ದೇಶಿಸಿದೆ. ನಿರ್ಬಂಧಗಳನ್ನು ಸಡಿಲಗೊಳಿಸಿ ಕೊರೋನವೈರಸ್ ಮತ್ತಷ್ಟು ಹೆಚ್ಚಾದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ವಿವಾದಾತ್ಮಕ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದೆ.

click me!