Zoomನಲ್ಲಿ 900 ಜನರ ವಜಾ ಮಾಡಿದವನಿಂದ ಭಾರತದಲ್ಲಿ 1000 ಸಿಬ್ಬಂದಿ ನೇಮಕ!

Published : Feb 16, 2022, 07:24 AM ISTUpdated : Feb 16, 2022, 02:25 PM IST
Zoomನಲ್ಲಿ 900 ಜನರ ವಜಾ ಮಾಡಿದವನಿಂದ ಭಾರತದಲ್ಲಿ 1000 ಸಿಬ್ಬಂದಿ ನೇಮಕ!

ಸಾರಾಂಶ

* 1000 ಭಾರತೀಯ ಸಿಬ್ಬಂದಿ ನೇಮಿಸಿಕೊಂಡ ಬೆಟರ್‌ ಡಾಟ್‌ ಕಾಂ * ಝೂಮ್‌ನಲ್ಲಿ 900 ಜನರ ವಜಾ ಮಾಡಿದವನಿಂದ ಭಾರತದಲ್ಲಿ 1000 ಸಿಬ್ಬಂದಿ ನೇಮಕ!

ನವದೆಹಲಿ(ಫೆ.16): ಕಳೆದ ವರ್ಷ ಝೂಮ್‌ ಕಾಲ್‌ನಲ್ಲಿಯೇ (Zoom Call) 900 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿ ಟೀಕೆಗೆ ಒಳಗಾಗಿದ್ದ ಅಮೆರಿಕದ ಬೆಟರ್‌ ಡಾಟ್‌ಕಾಂ (Better.com) ಕಂಪನಿ ಮುಖ್ಯಸ್ಥ ವಿಶಾಲ್‌ ಗರ್ಗ್‌ (Vishal Garg) 1000 ಕ್ಕೂ ಹೆಚ್ಚು ಭಾರತೀಯರನ್ನು ಉದ್ಯೋಗಿಯಾಗಿ ನೇಮಿಸಿಕೊಂಡಿದ್ದಾರೆ.

ಅಮೆರಿಕ ಮೂಲದ ಆನ್ಲೈನ್‌ ಅಡಮಾನ ಕಂಪನಿಯು ಇತರೆ ಕಂಪನಿಗಳ ಪೈಪೋಟಿಯಿಂದಾಗಿ 1365 ಕೋಟಿ ರು ನಷ್ಟಕ್ಕೆ ಒಳಗಾಗಿತ್ತು. ಹೀಗಾಗಿ ಕಂಪನಿಯು ವೆಚ್ಚವನ್ನು ಕಡಿತಗೊಳಿಸಿ ಲಾಭವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಕಾರ್ಯಕ್ಷಮತೆಯುಳ್ಳ ಭಾರತೀಯರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಕಳೆದ ವರ್ಷ ಜೂನ್‌ 30 ರಂದು ಕಂಪನಿಯಲ್ಲಿ 5000 ಅಮೆರಿಕನ್ನರು ಹಾಗೂ 3,100 ಭಾರತೀಯರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ವರ್ಷಾಂತ್ಯ ಬಿಡುಗಡೆ ಮಾಡಿದ ಸಿಬ್ಬಂದಿ ಪಟ್ಟಿಅನ್ವಯ ಕಂಪನಿಯಲ್ಲಿ 5200 ಅಮೆರಿಕನ್ನರು ಹಾಗೂ 4100 ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಕಂಪನಿಯು ಈ ಮೊದಲು ಕಡಿಮೆ ಕಾರ್ಯಕ್ಷಮತೆಯಿರುವ 900 ಸಿಬ್ಬಂದಿಯನ್ನು ಏಕಕಾಲಕ್ಕೆ ವಜಾಗೊಳಿಸಿತ್ತು. ಈ ಕ್ರಮ ಕೈಗೊಂಡಿದ್ದಕ್ಕೆ ಭಾರತೀಯ ಮೂಲದ ಸಿಇಒ ವಿಶಾಲ್‌ ಗರ್ಗ್‌ ವಿರುದ್ಧ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಸಾಫ್ಟ್‌ಬ್ಯಾಂಕ್ (Soft Bank) ಬೆಂಬಲಿತ ಕಂಪನಿಯು ವೀಡಿಯೊ ಕರೆ (Video Call) ಮೂಲಕ ತನ್ನ ಸುಮಾರು 9 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದಾದ ನಂತರ ಸಿಇಓ ವಿಶಾಲ್ ಗಾರ್ಗ್  ತೀವ್ರ ಟೀಕೆಗೆ ಒಳಗಾಗಿದ್ದರು. "ವಜಾಗೊಳಿಸುವಿಕೆಯನ್ನು ತಿಳಿಸುವಲ್ಲಿ ನಾವು ಎಡವಿದ್ದು ಇದನ್ನು ಕಾರ್ಯಗತಗೊಳಿಸುವಲ್ಲಿ ಪ್ರಮಾದವಾಗಿದೆ" ಎಂದು ಅವರು ಹೇಳುವ ಮೂಲಕ ಈಗ ಕ್ಷಮೆಯಾಚಿಸಿದ್ದಾರೆ. "ನಾನು ಈ ಸುದ್ದಿಯನ್ನು ತಿಳಿಸಲು  ಬಳಸಿದ ವಿಧಾನವು ಕಠಿಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ಗಾರ್ಗ್ ಮಂಗಳವಾರ (ಡಿ. 7) ಪತ್ರದ ಮೂಲಕ ತಿಳಿಸಿದ್ದರು.

ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ

ವಿಡಿಯೋ ಮೀಟಿಂಗ್‌ನಲ್ಲಿ, ನೀವು ಕೇಳ ಬಯಸಿದ ಸುದ್ದಿ ಇದಲ್ಲ. ನೀವೆಲ್ಲಾ ವಜಾಗೊಳಿಸುತ್ತಿರುವ ಸಿಬ್ಬಂದಿಗಳ ಗುಂಪಿನ ಭಾಗವಾಗಿದ್ದೀರಿ. ಈ ಕಂಪನಿ ಜೊತೆಗಿನ ನಿಮ್ಮ ಉದ್ಯೋಗ ಇಲ್ಲಿಗೆ ಅಂತ್ಯವಾಗುತ್ತಿದೆ ಎಂದು ಇಂಡೋ ಅಮೆರಿಕನ್ ಸಿಇಓ ವಿಶಾಲ್ ಗರ್ಗ್ ಝೂಮ್ ವಿಡಿಯೋ ಕಾಲ್‌ನಲ್ಲಿ ಹೇಳಿದ್ದರು. ಸಿಬ್ಬಂದಿಗಳನ್ನು ವಜಾಗೊಳಿಸಲು ಇದು ಸರಿಯಾದ ವಿಧಾನವಲ್ಲ ಎಂದು ಹಲವರು ಹೇಳಿದ್ದರು. ವಿಶಾಲ ಗಾರ್ಗ್‌ ಈ ನಡೆ ಭಾರೀ ಟಿಕೇಗೆ ಗುರಿಯಾಗಿತ್ತು.

3 ನಿಮಿಷದ ವಿಡಿಯೋ ಕಾಲ್‌ನಲ್ಲಿ 900 ಸಿಬ್ಬಂದಿಗಳು ಕಂಪನಿಯಿಂದ ಹೊರ ಹಾಕಲಾಗಿತ್ತು. ಇದಕ್ಕೆ ವಿಶಾಲ್ ಗರ್ಗ್ ಕಾರಣವನ್ನೂ ನೀಡಿದ್ದರು. ಈ ಉದ್ಯೋಗಿಗಳು ದಿನದಲ್ಲಿ ಗರಿಷ್ಠ 2 ಗಂಟೆ ಕೆಲಸ ಮಾಡಿಲ್ಲ. ಸಮರ್ಥವಾಗಿ ಕೆಲಸ ನಿರ್ವಹಿಸಲು ಅಸಾಧ್ಯರಾಗಿದ್ದಾರೆ. ಕಂಪನಿಯ ವೇತನ, ಇತರ ಸೌಲಭ್ಯ ಪಡೆದು ಕಂಪನಿಗೆ ಒಂದು ರೂಪಾಯಿ ಆದಾಯವನ್ನು ತಂದುಕೊಟ್ಟಿಲ್ಲ. ಹೀಗಾಗಿ ಕಂಪನಿ ಅಸಮರ್ಥ ಸಿಬ್ಬಂದಿಗಳನ್ನು ವಜಾಗೊಳಿಸುತ್ತಿದೆ ಎಂದಿದ್ದರು.

 

 

ಕೊರೋನಾ ವೈರಸ್‌ನಿಂದ (Corona Virus) ಈಗಾಗಲೇ ಕಂಪನಿ ಆರ್ಥಿಕ ಹೊಡೆತ (Economic Blow) ಅನುಭವಿಸಿದೆ. ಎಲ್ಲಾ ಅಡೆ ತಡೆ ನಿವಾರಿಸಿಕೊಂಡು ಮುನ್ನಗ್ಗುತ್ತಿರುವ ಬೆಟ್ಟರ್ ಕಂಪನಿಗೆ ಉದ್ಯೋಗಿಗಳೇ ಹಿನ್ನಡೆ ತರುತ್ತಿದ್ದಾರೆ. ಹಲವರು ಕೊರೋನಾದಿಂದ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಸಿಗಲು ಪರದಾಡುತ್ತಿದ್ದಾರೆ. 

ಆದರೆ ಇರುವ ಉದ್ಯೋಗವನ್ನು ಬೇಕಾಬಿಟ್ಟಿ ಮಾಡಿದರೆ ಯಾವ ಕಂಪನಿಯೂ ಸಹಿಸುವುದಿಲ್ಲ. ಸಂಕಷ್ಟ ಸಮಯದಲ್ಲಿ ಉತ್ತಮ ಕೆಲಸ ಮಾಡಿ ಕಂಪನಿ ಹಾಗೂ ಸಿಬ್ಬಂದಿಗಳ ಏಳಿಗೆಗೆ ಶ್ರಮವಹಿಸಬೇಕು. ಆದರೆ ವಜಾಗೊಳಿಸುವ ಸಿಬ್ಬಂದಿಗಳು ಹಾಗೇ ಮಾಡಲಿಲ್ಲ ಎಂದು ವಿಶಾಲ್ ಗರ್ಗ್ ಹೇಳಿದ್ದರು. ಸಿಬ್ಬಂದಿಗಳನ್ನು ವಜಾಗೊಳಿಸಲು ತಾವು ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂದು ಅರಿತ ಸಿಇಓ ವಿಶಾಲ್‌ ಗಾರ್ಗ್‌ ಈಗ ಕ್ಷಮೆ ಯಾಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ