ಈದ್ಗಾ ಬಳಿ ಕಾಂಪೌಂಡ್ ನಿರ್ಮಾಣ; ಎರಡು ಗುಂಪುಗಳ ನಡುವೆ ಗಲಾಟೆ; ಪೊಲೀಸರ ಮೇಲೆ ಕಲ್ಲು ತೂರಾಟ

By Mahmad Rafik  |  First Published Jun 22, 2024, 12:39 PM IST

ಶುಕ್ರವಾರ ಸಂಜೆ ಜೋಧಪುರದ ಸೂರ್ ಸಾಗರ್ ಪ್ರದೇಶದ ರಾಜಾರಾಮ್ ಸರ್ಕಲ್ ಬಳಿಯ ಈದ್ಗಾ ಮೈದಾನದ ಸಮೀಪ ಕಾಂಪೌಂಡ್ ನಿರ್ಮಿಸಲಾಗುತ್ತಿತ್ತು. ಈ ಕಾಮಗಾರಿ ವೇಳೆ ಗಲಾಟೆ ನಡೆದಿದೆ ಎಂದು ಜೋಧಪುರ ಪೊಲೀಸರು ಮಾಹಿತಿ ನೀಡಿದ್ದಾರೆ.


ಜೈಪುರ: ಎರಡು ಗುಂಪುಗಳ ನಡುವೆ ಗಲಾಟೆ ಹಿಂಸೆಯ (Communal Violence) ಸ್ವರೂಪ ಪಡೆದುಕೊಂಡಿದ್ದು, ಉದ್ರಿಕ್ತರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದ (Stone Pelting) ವೇಳೆ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಕಿಡಿಗೇಡಿಗಳು ಅಂಗಡಿಗಳು, ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ (Jaipur, Rajasthan) ಈ ಘಟನೆ ನಡೆದಿದ್ದು, ನಗರದಲ್ಲಿ ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು (Police Deploy) ನಿಯೋಜಿಸಲಾಗಿದೆ. ಶುಕ್ರವಾರ ಸಂಜೆ ಜೋಧಪುರದ ಸೂರ್ ಸಾಗರ್ ಪ್ರದೇಶದ ರಾಜಾರಾಮ್ ಸರ್ಕಲ್ ಬಳಿಯ ಈದ್ಗಾ ಮೈದಾನದ ಸಮೀಪ ಕಾಂಪೌಂಡ್ ನಿರ್ಮಿಸಲಾಗುತ್ತಿತ್ತು. ಈ ಕಾಮಗಾರಿ ವೇಳೆ ಗಲಾಟೆ ನಡೆದಿದೆ ಎಂದು ಜೋಧಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಕೆಲ ಸಮಯದ ಬಳಿಕ ಮತ್ತೆ ಆಗಮಿಸಿದ ಗುಂಪು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ನಡೆಯುತ್ತಿದ್ದಂತೆ ಗಲಾಟೆ ಹಿಂಸೆಯ ಸ್ವರೂಪ ಪಡೆದುಕೊಂಡಿತು. ಕೂಡಲೇ ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಿ ಎರಡು ಗುಂಪಿನ ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Tap to resize

Latest Videos

ನೀಟ್‌ ಅಕ್ರಮ ಬಗ್ಗೆ ಉನ್ನತ ತನಿಖೆ, ಅಕ್ರಮ ಸಹಿಸಲ್ಲ, ಅಪರಾಧಿಗಳ ಬಿಡಲ್ಲ: ಕೇಂದ್ರ ಶಿಕ್ಷಣ ಸಚಿವ ಪ್ರಧಾನ್‌

ಎರಡು ಗುಂಪುಗಳಿಂದ ದೂರು ದಾಖಲು

ಕಲ್ಲು ತೂರಾಟದ ಬಳಿಕ ತಲೆಮರೆಸಿಕೊಂಡಿರುವ ಕಿಡಿಗೇಡಿಗಳ ಬಂಧನಕ್ಕೆ ನಗರದಲ್ಲಿ ಪೊಲೀಸರು ಸರ್ಚ್ ಆಪರೇಷನ್ ಶುರು ಮಾಡಿದ್ದಾರೆ. ಎರಡು ಗುಂಪುಗಳು ದೂರು ದಾಖಲಿಸಿದ್ದು, ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ರಾಜೇಂದ್ರ ಸಿಂಗ್ ಹೇಳಿದ್ದಾರೆ. 

ಸೂರ್ ಸಾಗರ್ ಕ್ಷೇತ್ರದ ಶಾಸಕ ದೇವೇಂದ್ರ ಜೋಶಿ ಮತ್ತು ನಗರ ಶಾಸಕ ಭನ್ಸಾಲಿ ತಡರಾತ್ರಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು,  ದುಷ್ಕರ್ಮಿಗಳನ್ನು ಸುಮ್ಮನೆ ಬಿಡಲ್ಲ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರೋದನ್ನು ಅರಗಿಸಿಕೊಳ್ಳಲಾಗದೇ ಈ  ರೀತಿ ಮಾಡಿದ್ದಾರೆ ಎಂದು ಶಾಸಕ ದೇವೇಂದ್ರ ಜೋಶಿ ಆರೋಪಿಸಿದ್ದಾರೆ.

ಪೋಷಕರೇ ಎಚ್ಚರ, ಚಲಿಸುತ್ತಿದ್ದ ಶಾಲಾ ವಾಹನದಿಂದ ಹೊರಬಿದ್ದ ವಿದ್ಯಾರ್ಥಿನಿಯರಿಗೆ ಗಾಯ!

देर रात जोधपुर सूरसागर क्षेत्र में साद्प्रदायिक माहौल बिगड़ने का मामला । वीडिओ में पुलिस भी पथरबाज़ी
करते नज़र आ रहीं है.

अब तक पचास से ज़्यादा लोगों को गिरफ्तार किया जा चुका है..!! pic.twitter.com/Rscr74BasX

— Wajidkhan (@realwajidkhan)

कल रात जोधपुर सूरसागर इलाके में दो गुट आपस में भिड़े।
लेकिन एक बात समझ नही आ रही है पुलिस वाले इन पत्थर मारने वाले को रोक क्यू नही रहे है?और पुलिस इनका साथ क्यू दे रही है? किया जोधपुर पुलिस भी इस साज़िश में सामिल है ? pic.twitter.com/E4XqbLNH5H

— मौहम्मद आसिफ (@Asif4bjp)
click me!