ದಾಖಲೆ ಸಲ್ಲಿಸಿ ಇಲ್ಲಾ ದಿನಕ್ಕೆ 10 ಸಾವಿರ ದಂಡ ಕಟ್ಟಿ, ಅಕ್ರಮ ಮದರಸಾಗೆ ಸಿಎಂ ಯೋಗಿ ನೋಟಿಸ್!

By Suvarna NewsFirst Published Oct 24, 2023, 10:05 PM IST
Highlights

ಉತ್ತರ ಪ್ರದೇಶದಲ್ಲಿನ ನೋಂದಣಿ ಇಲ್ಲದೆ ನಡೆಸಲಾಗುತ್ತಿರುವ ಮದರಾಸಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ನೋಟಿಸ್ ನೀಡಿದೆ. ಸೂಕ್ತ ದಾಖಲೆ ಸಲ್ಲಿಸಿ, ಇಲ್ಲದಿದ್ದರೆ ಪ್ರತಿ ದಿನ 10,000 ರೂಪಾಯಿ ದಂಡ ಪಾವತಿಸಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಲಖನೌ(ಅ.24)  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಹಲವು ಮದರಸಾಗಳು ನೋಂದಣಿ ಆಗಿಲ್ಲ. ಅನಧಿಕೃತವಾಗಿ ನಡೆಸಲಾಗುತ್ತಿದೆ. ಕಾನೂನು ಮಾನ್ಯತೆ ಇಲ್ಲದ ಮದರಸಾಗಳ ನಿಯಂತ್ರಣಕ್ಕೆ ಪಣತೊಟ್ಟಿರುವ ಯೋಗಿ ಆದಿತ್ಯನಾಥ್ ಇದೀಗ ನೋಟಿಸ್ ನೀಡಿದ್ದಾರೆ. ನೋಂದಣಿ ಆಗದೇ ನಡೆಸಲಾಗುತ್ತಿರುವ ಮದರಸಾಗಳಿಗೆ ನೋಟಿಸ್ ನೀಡಲಾಗಿದೆ. ನೋಂದಣಿ ಇಲ್ಲದ ಮದರಸಾಗಳು ಸೂಕ್ತ ದಾಖಲೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇಲ್ಲದಿದ್ದರೆ ಪ್ರತಿ ದಿನ 10,000 ರೂಪಾಯಿ ದಂಡ ಪಾವತಿಸಬೇಕು ಎಂದು ನೋಟಿಸ್‌ನಲ್ಲಿ ಸೂಚಿಲಾಗಿದೆ.

ಉತ್ತರ ಪ್ರದೇಶದ ಶಿಕ್ಷಣ ಸಚಿವಾಲಯ ಈ ನೋಟಿಸ್ ಜಾರಿಗೊಳಿಸಿದೆ. ಯುಪಿಯಲ್ಲಿ ಸರಿಸರುಮಾರು 24,000 ಮದರಸಾಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ನೋಂದಣಿ ಆಗಿರುವ ಮದರಸಾ ಸಂಖ್ಯೆ 16,000 ಮಾತ್ರ. ಇನ್ನುಳಿದ 8,000ಕ್ಕೂ ಹೆಚ್ಚು ಮದರಸಾಗಳು ಅಕ್ರಮವಾಗಿ ನಡೆಯತ್ತಿದೆ. ಹೀಗಾಗಿ ಅಕ್ರಮ ಮದರಸಾಗಳಿಗೆ ನೋಟಿಸ್ ನೀಡಲಾಗತ್ತಿದೆ. ಇದೀಗ ಮೊದಲ ಹಂತದಲ್ಲಿ ಮುಜಾಫರನಗರದಲ್ಲಿನ ಅಕ್ರಮ ಮದರಸಾಗೆ ನೋಟಿಸ್ ನೀಡಲಾಗಿದೆ. 3 ದಿನದೊಳಗೆ ಸೂಕ್ತ ದಾಖಲೆ ಸಲ್ಲಿಸಿ ಇಲ್ಲದಿದ್ದರೆ ಪರಿಣಾಮ ಎದುರಿಸುವಂತೆ ಸೂಚನೆ ನೀಡಲಾಗಿದೆ.

ಇನ್ನೂ 300 ಮದ್ರಸಾ ಬಂದ್‌ ಆಗುತ್ತೆ: ಅಸಾದುದ್ದೀನ್‌ ಓವೈಸಿಗೆ ಅಸ್ಸಾಂ ಸಿಎಂ ಚಾಲೆಂಜ್‌

ಉತ್ತರ ಪ್ರದೇಶದ 4,000 ಮದರಸಾಗಳು ವಿದೇಶಿ ಫಂಡ್ ಸ್ವೀಕರಿಸುತ್ತಿದೆ. ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ. ವಿದೇಶಿ ಫಂಡ್ ಸ್ವೀಕರಿಸಲು ಕನಿಷ್ಠ ನಿಯಮ ಪಾಲನೆ ಅಗತ್ಯ. ಆದರೆ ಹಲವು ಮದರಸಾಗಳು ನಿಯಮ ಪಾಲಿಸಿಲ್ಲ. ಇಷ್ಟೇ ಅಲ್ಲ ವಿದೇಶಿ ಫಂಡ್‌ಗಳ ಮೂಲಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ನೋಟಿಸ್ ಪಡೆದಿರುವ ಜಮೈತ್ ಉಲಮಾ ಐ ಹಿಂದ್ ಮದರಸಾ ಆಕ್ರೋಶ ವ್ಯಕ್ತಪಡಿಸಿದೆ. ಎಲ್ಲಾ ದಾಖಲೆಗಳನ್ನು ಈ ಮದರಸಾ ಹೊಂದಿದೆ. ಮುಸ್ಲಿಮ್ ಮದರಸಾ ಬೋರ್ಡ್ ನಿಯಮಗಳನ್ನು ಪಾಲಿಸಲಾಗಿದೆ. ಮುಸ್ಲಿಮ್ ಮದರಸಾ ಬೋರ್ಡ್ ನಿಯಮದಡಿಯಲ್ಲಿ ಕಾರ್ಯನಿರ್ವಹಿಸತ್ತಿದೆ ಎಂದು ಮದರಸಾ ಆಡಳಿತ ಮಂಡಳಿ ಹೇಳಿದೆ. ಮದರಾಸ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದೆ. ಹೀಗಾಗಿ 10,000 ರೂಪಾಯಿ ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಜಮೈತ್ ಉಲಮಾ ಐ ಹಿಂದ್ ಮದರಸಾ ಹೇಳಿದೆ.

 

8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ 20 ವರ್ಷ ಜೈಲು ಶಿಕ್ಷೆ!
 

click me!