
ಮಧ್ಯಪ್ರದೇಶ (Madhya Pradesh)ದ ಪೆಟ್ರೋಲ್ ಪಂಪ್ (Petrol Pump) ಸದ್ಯ ಎಲ್ಲರ ಕೇಂದ್ರ ಬಿಂದು. ಸಿಎಂ ಬೆಂಗಾವಲು ವಾಹನಕ್ಕೆ ಡಿಸೇಲ್ ಬದಲು ನೀರು ತುಂಬಿದ್ದೇ ಇದಕ್ಕೆ ಕಾರಣ. ವಾಸ್ತವವಾಗಿ ಪ್ರಾದೇಶಿಕ ಕೈಗಾರಿಕೆ, ಕೌಶಲ್ಯ ಮತ್ತು ಉದ್ಯೋಗ ಸಮಾವೇಶ (RISE 2025)ದಲ್ಲಿ ಭಾಗವಹಿಸಲು ಬರ್ತಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಬೆಂಗಾವಲು ಪಡೆ ವಾಹನ ಮಧ್ಯದಲ್ಲೇ ನಿಂತಿದೆ. ಏನಾಯ್ತು ಅಂತ ನೋಡಿದಾಗ, ಡಿಸೇಲ್ ಬದಲು ನೀರು ಇರೋದು ಬೆಳಕಿಗೆ ಬಂದಿದೆ. ಸಿಎಂ ಬೆಂಗಾವಲು ಪಡೆಯ 19 ಕಾರುಗಳಿಗೆ ಡಿಸೇಲ್ ಬದಲು ನೀರನ್ನು ಹಾಕಲಾಗಿದೆ. ಎಲ್ಲ ಬೆಂಗಾವಲು ವಾಹನ ಇದ್ದಕ್ಕಿದ್ದಂತೆ ಒಂದರ ನಂತರ ಒಂದರಂತೆ ರಸ್ತೆಯಲ್ಲಿ ನಿಂತಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಗೊಂದಲದ ವಾತಾವರಣ ಮನೆ ಮಾಡಿತ್ತು. ವಿಚಾರಣೆ ನಂತ್ರ ವಾಹನಗಳಿಗೆ ಡಿಸೇಲ್ ಬದಲು ನೀರು ತುಂಬಿಸಿರೋದು ಬೆಳಕಿಗೆ ಬಂದಿದೆ. ತಕ್ಷಣ ಸಂಬಂಧಪಟ್ಟ ಪೆಟ್ರೋಲ್ ಪಂಪ್ ಸೀಲ್ ಮಾಡಲಾಗಿದ್ದು, ವಿಚಾರಣೆ ಮುಂದುವರೆದಿದೆ.
ಗುರುವಾರ ರಾತ್ರಿ 10 ಗಂಟೆಯ ಸುಮಾರಿಗೆ, ಸಿಎಂ ಬೆಂಗಾವಲಿ (CM escort)ನ 19 ಕಾರುಗಳು ಡೀಸೆಲ್ ತುಂಬಲು ರತ್ಲಂ ನಗರ ಮಿತಿಯ ದೋಸಿಗಾಂವ್ನಲ್ಲಿರುವ ಭಾರತ್ ಪೆಟ್ರೋಲಿಯಂನ ಶಕ್ತಿ ಇಂಧನ ಪೆಟ್ರೋಲ್ ಪಂಪ್ಗೆ ತೆರಳಿತ್ತು. ವಾಹನಗಳಿಗೆ 0 ಡೀಸೆಲ್ ತುಂಬಿದ ಸ್ವಲ್ಪ ಸಮಯದ ನಂತ್ರ, ಎಲ್ಲಾ ಕಾರುಗಳು ಸ್ವಲ್ಪ ದೂರದಲ್ಲಿ ನಿಲ್ಲಲು ಶುರುವಾಯ್ತು. ಅವುಗಳನ್ನು ತಳ್ಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಯ್ತು. ಸ್ಥಳದಲ್ಲಿ ಗೊಂದಲ ಮನೆ ಮಾಡಿತ್ತು.
20 ಲೀಟರ್ ಡೀಸೆಲ್ ನಲ್ಲಿ 10 ಲೀಟರ್ ನೀರು : ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ವಾಹನಗಳಿಗೆ 20 ಲೀಟರ್ ಡೀಸೆಲ್ ತುಂಬಿಸಲಾಗಿತ್ತು. ತನಿಖೆ ವೇಳೆ ಇದ್ರಲ್ಲಿ 10 ಲೀಟರ್ ನೀರು ಎಂಬುದು ಬಹಿರಂಗವಾಗಿದೆ. ಬಹುತೇಕ ಎಲ್ಲಾ ವಾಹನಗಳಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿದೆ. ಸಿಎಂ ಗುರಿಯಾಗಿಸಿಕೊಂಡು ನಡೆದ ಕೃತ್ಯ ಇದಲ್ಲ ಎಂಬುದು ಮೇಲ್ನೋಟಕ್ಕೆ ಸಾಭೀತಾಗಿದೆ. ಬರೀ ಸಿಎಂ ಬೆಂಗಾವಲು ವಾಹನ ಮಾತ್ರವಲ್ಲ ಪೆಟ್ರೋಲ್ ಬಂಕ್ ನಲ್ಲಿ ಡಿಸೇಲ್ ತುಂಬಿಸಿದ್ದ ಟ್ರಕ್ ಚಾಲಕನಿಗೂ ಇದೇ ಅನುಭವ ಆಗಿದೆ. ಟ್ರಕ್ ಚಾಲಕ 200 ಲೀಟರ್ ಡೀಸೆಲ್ ತುಂಬಿಸಿದ್ದ. ಅದು ಸ್ವಲ್ಪ ದೂರ ಹೋಗಿ ನಿಂತಿದೆ.
ನೀರು ಸೇರಲು ಕಾರಣ ಏನು? : ಸ್ಥಳಕ್ಕೆ ಬಂದ ಅಧಿಕಾರಿಗಳು ಭಾರತ್ ಪೆಟ್ರೋಲಿಯಂನ ಪ್ರದೇಶ ವ್ಯವಸ್ಥಾಪಕ ಶ್ರೀಧರ್ ಅವರಿಗೆ ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ. ಮಳೆಯಿಂದಾಗಿ ಪೆಟ್ರೋಲ್ ಟ್ಯಾಂಕ್ನಲ್ಲಿ ನೀರು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಶ್ರೀಧರ್ ಹೇಳಿದ್ದಾರೆ. ಶಕ್ತಿ ಫ್ಯೂಯೆಲ್ಸ್ ಪೆಟ್ರೋಲ್ ಬಂಕ್, ಇಂದೋರ್ ನಿವಾಸಿ ಶಕ್ತಿ ಅವರ ಪತಿ ಎಚ್ಆರ್ ಬುಂದೇಲಾ ಅವರ ಹೆಸರಿನಲ್ಲಿದೆ. ಆಹಾರ ಮತ್ತು ಸರಬರಾಜು ಇಲಾಖೆ ರಾತ್ರಿಯೇ ಪೆಟ್ರೋಲ್ ಪಂಪ್ಗೆ ಸೀಲ್ ಹಾಕಿದೆ. ಈಂದು ನಡೆಯಲಿರುವ ಎಂಪಿ ರೈಸ್ ಕಾನ್ಕ್ಲೇವ್ನಲ್ಲಿ ಯಾವುದೇ ಅಡಚಣೆಯಾಗದಂತೆ ಇಂದೋರ್ನಿಂದ ಹೊಸ ವಾಹನಗಳನ್ನು ವ್ಯವಸ್ಥೆ ಮಾಡಿ ರತ್ಲಂಗೆ ಕಳುಹಿಸಲಾಗಿದೆ. ಮಳೆಯಿಂದಾಗಿ ಪೆಟ್ರೋಲ್ ಟ್ಯಾಂಕ್ನಲ್ಲಿ ನೀರು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ನಯಬ್ ತಹಶೀಲ್ದಾರ್ ಆಶಿಶ್ ಉಪಾಧ್ಯಾಯ ಹೇಳಿದ್ದಾರೆ. ರೈಸ್ 2025 ಸಮಾವೇಶದಲ್ಲಿ ಸಿಎಂ ಡಾ. ಮೋಹನ್ ಯಾದವ್ ಸೇರಿದಂತೆ ಅನೇಕ ವಿಐಪಿಗಳು ಭಾಗಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ