ಎನ್‌ಸಿಪಿ ಮತ್ತೆ ಒಂದಾಗುವ ಊಹಾಪೋಹ; ಮಹಾರಾಷ್ಟ್ರ ರಾಜಕೀಯದಲ್ಲಿ ವಿಲೀನತೆ ಗುಸು ಗುಸು

Published : Nov 09, 2026, 09:10 AM IST
Maharashtra Politics

ಸಾರಾಂಶ

ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣಗಳ ವಿಲೀನಕ್ಕೆ ಬಿಜೆಪಿ ಹಸಿರು ನಿಶಾನೆ ತೋರಿದೆ. ವಿಲೀನದ ಕುರಿತು ಅಂತಿಮ ನಿರ್ಧಾರವನ್ನು ಪವಾರ್ ಕುಟುಂಬವೇ ತೆಗೆದುಕೊಳ್ಳಲಿದೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.

ಮುಂಬೈ: 2023ರಲ್ಲಿ ಸೈದ್ಧಾಂತಿಕ ಭಿನ್ನಮತದ ಕಾರಣ ವಿಭಜನೆಗೊಂಡಿದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತೆ ವಿಲೀನಗೊಳ್ಳುವ ಸೂಚನೆಗಳು ಸಿಗತೊಡಗಿವೆ. ಶರದ್ ಪವಾರ್ ಮತ್ತು ದಿವಂಗತ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣಗಳ ವಿಲೀನಕ್ಕೆ ಬಿಜೆಪಿ ಹಸಿರು ನಿಶಾನೆ ತೋರಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌, ‘ವಿಲೀನದ ಅಂತಿಮ ನಿರ್ಧಾರವನ್ನು ಶರದ್ ಪವಾರ್, ಡಿಸಿಎಂ ಸುನೇತ್ರಾ ಪವಾರ್, ಪಾರ್ಥ್ ಪವಾರ್ ಹಾಗೂ ಇತರ ಹಿರಿಯ ನಾಯಕರು ತೆಗೆದುಕೊಳ್ಳಲಿದ್ದಾರೆ’ ಎಂದರು. ‘ಎನ್‌ಸಿಪಿ (ಅಜಿತ್‌ ಬಣ) ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ ನಿರ್ಧಾರ ಕೈಗೊಳ್ಳುವ ಮೊದಲು ಬಿಜೆಪಿಯೊಂದಿಗೆ ಸಮಾಲೋಚನೆ ನಡೆಸಬೇಕಾಗುತ್ತದೆ’ ಎಂದೂ ಅವರು ಹೇಳಿದರು.

ನ.10ರ ಬಳಿಕ ಮತ್ತೆ ಭೇಟಿಯಾಗಿ ಚರ್ಚೆ

ಇತ್ತೀಚೆಗೆ ಅಜಿತ್‌ ಬಣದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಅವರು ಶರದ್ ಪವಾರ್‌ರನ್ನು ಭೇಟಿಯಾಗಿದ್ದರು. ನ.10ರ ಬಳಿಕ ಮತ್ತೆ ಭೇಟಿಯಾಗಿ ಚರ್ಚಿಸುವುದಾಗಿ ಇಬ್ಬರೂ ಹೇಳಿರುವುದು ವಿಲೀನದ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಜಿತ್ ಪವಾರ್ ಬದುಕಿದ್ದರೆ ಫೆ.12ರಂದೇ ಎರಡೂ ಬಣಗಳ ವಿಲೀನವಾಗುತ್ತಿತ್ತು ಎಂದು ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ತಟ್ಕರೆ ಹೇಳಿರುವುದು ಕೂಡ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಶರದ್ ಪವಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಎದೆ ಮತ್ತು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್‌ (85) ಅವರು ಶನಿವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಸ್ಥರವಾದ ಬೆನ್ನಲ್ಲೇ ಡಿಸ್ಚಾರ್ಜ್‌ ಮಾಡಲಾಗಿದ್ದು, ಮೆನಯಲ್ಲೇ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ನ.2ರಂದು ಪುಣೆಯ ರೂಬಿ ಹಾಲ್‌ ಕ್ಲಿನಿಕ್‌ಗೆ ದಾಖಲಾಗಿದ್ದ ಪವಾರ್‌ ಅವರು ಬುಧವಾರ ಬಿಡುಗಡೆಯಾಗಿದ್ದರು. ಅದೇ ದಿನ ಮತ್ತೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಕಾಂಗ್ರೆಸ್‌ ನಾಯಕ ಸುಶೀಲ್‌ಕುಮಾರ್‌ ಶಿಂಧೆ, ಎನ್‌ಸಿಪಿಯ ದಿಲೀಪ್‌ ವಾಲ್ಸೆ ಪಾಟೀಲ್‌, ಪ್ರಫುಲ್‌ ಪಟೇಲ್‌, ಉದ್ಯಮಿ ಗೌತಮ್‌ ಅದಾನಿ ಅವರು ಶುಕ್ರವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಶರದ್‌ರ ಆರೋಗ್ಯ ವಿಚಾರಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

IIT ಫಲಿತಾಂಶ ಬಂದಾಗ ಕಣ್ಣೀರಿಟ್ಟಿದ್ದ ವಿದ್ಯಾರ್ಥಿ, 21 ವರ್ಷಗಳ ಬಳಿಕ ಅದೇ ಶಿಕ್ಷಕರ ಮುಂದೆ ನಿಂತಾಗ ಭಾವುಕ ಕ್ಷಣ!
ಏರ್‌ಟೆಲ್ ನಿಂದ ಗ್ರಾಹಕರಿಗೆ ಬಂಪರ್ ಆಫರ್: ಆ್ಯಪ್ ಮೂಲಕ ರೀಚಾರ್ಜ್‌ಗೆ ಬೈ ಒನ್ ಗೆಟ್ ಒನ್ ಫ್ರೀ!