'ಎರಡು ಎಕರೆ ಜಾಗ ಕೊಡಿ ' ಯುಪಿ ಸಿಎಂ ಯೋಗಿಗೆ BSY ಪತ್ರ

By Suvarna News  |  First Published Aug 7, 2020, 9:30 PM IST

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರ/  ರಾಮಮಂದಿರ ಶಿಲಾನ್ಯಾಶಕ್ಕೆ ಅಭಿನಂದನೆ/ ರ್ನಾಟಕ ಸರ್ಕಾರ ಯಾತ್ರಿ ನಿವಾಸ ಕಟ್ಟಲು ಎರಡು ಎಕರೆ ಜಾಗ ನೀಡಿ


ಬೆಂಗಳೂರು, (ಆ.07)  ಮುಖ್ಯಮಂತ್ರಿ ಬಿಎಸ್ ವೈ ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಗೆ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ. ಅಯೋಧ್ಯೆ ನಲ್ಲಿ ಯಶಸ್ವಿಯಾಗಿ ರಾಮಮಂದಿರ ಶಿಲಾನ್ಯಾಸ ಮುಗಿಸಿದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದಿಂದ ಅನೇಕ ಭಕ್ತರು ಅಯೋಧ್ಯೆಗೆ ತೆರಳಲಿದ್ದು  ಅಯೋಧ್ಯೆಯಲ್ಲಿ 2 ಎಕರೆ ಭೂಮಿ ನೀಡುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಕರ್ನಾಟಕ ಸರ್ಕಾರ ಯಾತ್ರಿ ನಿವಾಸ ಕಟ್ಟಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದೇವೆ.  ಹೀಗಾಗಿ 2 ಎಕರೆ ಭೂಮಿ ಮಂಜೂರು ಮಾಡಬೇಕು ಎಂದು ಪತ್ರ ದಲ್ಲಿ ಕೇಳಿಕೊಂಡಿದ್ದಾರೆ.#

Tap to resize

Latest Videos

ಶಿಲಾನ್ಯಾಸ ನೆರವೇರಿಸಿ ಪ್ರಧಾನಿ ಮೋದಿ ಆಡಿದ ಮಾತುಗಳು

ಇದೇ ವಿಚಾರವಾಗಿ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಆಯೋಧ್ಯೆಯ ಶ್ರೀರಾಮ ಮಂದಿರದ ಆಸು ಪಾಸು  ಸ್ಥಳಕ್ಕಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಕೇಳಿಕೊಂಡಿದ್ದರು. 

ಅಯೋಧ್ಯೆ ಭವಿಷ್ಯದಲ್ಲಿ ಕೋಟ್ಯಂತರ ಹಿಂದೂಗಳಿಗೆ ತಿರುಪತಿ ತಿರುಮಲ ಮಾದರಿಯಲ್ಲಿ ಅತ್ಯಂತ ಪವಿತ್ರ ಯಾತ್ರ ಸ್ಥಳವಾಗಲಿದೆ. ಕರ್ನಾಟಕದಿಂದ ಅಯೋಧ್ಯೆಗೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಸುಸಜ್ಜಿತ ಯಾತ್ರಾ ಭವನ ಅಗತ್ಯತೆ ಕಂಡು ಬರುತ್ತದೆ. ಆದ್ದರಿಂದ ರಾಮ ಮಂದಿರದ ಹತ್ತಿರದಲ್ಲಿ ಕರ್ನಾಟಕ ಭವನ ನಿರ್ಮಾಣ ಉದ್ದೇಶಕ್ಕಾಗಿ ಕನಿಷ್ಠ 3ರಿಂದ 5 ಎಕರೆ ಭೂಮಿಯನ್ನು ಮೀಸಲಿಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿಗಳಲ್ಲಿ ಮನವಿ  ಮಾಡಬೇಕು ಎಂದು ಪೂಜಾರಿ ಕೇಳಿಕೊಂಡಿದ್ದರು. 

click me!