ಸಿ.ಜೆ.ರಾಯ್‌ ಕೇಸ್‌ : ಸಚಿವೆ ನಿರ್ಮಲಾಗೆ ಕೇರಳ ಸಿಎಂ ಪತ್ರ

Kannadaprabha News   | Kannada Prabha
Published : Feb 03, 2026, 07:33 AM IST
CJ Roy Death

ಸಾರಾಂಶ

ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಆತ್ಮ*ತ್ಯೆ ಮಾಡಿಕೊಂಡ ಕಾನ್ಫಿಡೆಂಟ್‌ ಗ್ರೂಫ್‌ ಮುಖ್ಯಸ್ಥ ಸಿ.ಜೆ.ರಾಯ್‌ ಸಾವಿನ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆಗ್ರಹಿಸಿದ್ದಾರೆ.

ತಿರುವನಂತಪುರಂ: ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಆತ್ಮ*ತ್ಯೆ ಮಾಡಿಕೊಂಡ ಕಾನ್ಫಿಡೆಂಟ್‌ ಗ್ರೂಫ್‌ ಮುಖ್ಯಸ್ಥ ಸಿ.ಜೆ.ರಾಯ್‌ ಸಾವಿನ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆಗ್ರಹಿಸಿದ್ದಾರೆ. ಈ ಕುರಿತು ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ವಿಜಯನ್‌ ಪತ್ರ ಬರೆದಿದ್ದಾರೆ.

ಕೇರಳ ಮೂಲದವರಾದ ರಾಯ್‌

ಕೇರಳ ಮೂಲದವರಾದ ರಾಯ್‌ ಸಾವಿನ ಬಗ್ಗೆ ಕರ್ನಾಟಕ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಪತ್ರ ಬರೆದಿರುವ ಪಿಣರಾಯಿ, ‘ರಾಯ್‌ ಸಾವು, ಕೇರಳದಲ್ಲಿ ಉದ್ಯಮಿಗಳು, ನಾಗರಿಕರಲ್ಲಿ ಆಘಾತ ಸೃಷ್ಟಿಸಿದೆ. ಈ ದುರದೃಷ್ಟಕರ ಘಟನೆಯು ದೇಶದ ತೆರಿಗೆ ಆಡಳಿತ ಮೇಲೆ ಕಪ್ಪು ಚುಕ್ಕೆ ಬೀರಿದೆ. ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ, ಅವರು ಅದೇ ಸ್ಥಳದಲ್ಲಿದ್ದಾಗ ಲೋಡ್‌ ಮಾಡಿದ ಗುಂಡಿನಿಂದ ಶೂಟೌಟ್‌ ಮಾಡಿಕೊಳ್ಳುವುದು ಅಚ್ಚರಿ ಸಂಗತಿ’ ಎಂದಿದ್ದಾರೆ.

ಶಿಷ್ಟಾಚಾರವನ್ನೂ ಪಾಲಿಸದಿರುವುದು ಜೀವದ ನಷ್ಟಕ್ಕೆ ಕಾರಣ

ಜೊತೆಗೆ, ‘ದಾಳಿ ವೇಳೆ ಆ ಪ್ರದೇಶ ಅಧಿಕಾರಿಗಳ ನಿಯಂತ್ರಣದಲ್ಲಿರಬೇಕು. ಅದು ಅವರ ಕನಿಷ್ಠ ಜವಾಬ್ದಾರಿ. ಆದರೆ ಶೋಧದ ವೇಳೆ ಕನಿಷ್ಠ ಶಿಷ್ಟಾಚಾರವನ್ನೂ ಪಾಲಿಸದಿರುವುದು ಜೀವದ ನಷ್ಟಕ್ಕೆ ಕಾರಣ. ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಅಗ್ರಹಿಸಬೇಕು. ಸಾಂವಿಧಾನಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಅನುಭವ ಹೊಂದಿರುವರು ತನಿಖಾ ಆಯೋಗದ ನೇತೃತ್ವ ವಹಿಸುವುದು ಸೂಕ್ತ’ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕಾಂಜೀವರಂ ಸೀರೆಯುಟ್ಟು ನಿರ್ಮಲಾ ಬಜೆಟ್‌ ಕುರಿತು ಪ್ರಿಯಾಂಕಾ ಭವಿಷ್ಯ ನಿಜ!
ಭಾರತದ ಮಹಾ ದಿಗ್ವಿಜಯ ಯುರೋಪ್‌ ಬಳಿಕ ಇದೀಗ ಅಮೆರಿಕ ಜತೆಗೂ ಭಾರತದ ಡೀಲ್‌