ಪೌರತ್ವ ಮಸೂದೆ ಪಾಸ್: ಮಗುವಿಗೆ ‘ನಾಗರಿಕತಾ’ ಎಂದು ಹೆಸರಿಟ್ಟ ಪಾಕ್‌ ಮಹಿಳೆ!

By Web Desk  |  First Published Dec 12, 2019, 12:53 PM IST

ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ 2019 ಅಂಗೀಕಾರ| ಈಶಾನ್ಯ ರಾಜ್ಯಗಳಲ್ಲಿ ಭುಗಿಲೆದ್ದ ಆಕ್ರೋಶ| ದೆಹಲಿಯ ಮಜ್ನು ಕಾ ಟೀಲಾ ಬಡಾವಣೆಯಲ್ಲಿ ಸಂಭ್ರಮಾಚರಣೆ| ಎರಡು ದಿನದ ನವಜಾತ ಶಿಶಿವಿಗೆ 'ನಾಗರಿಕತಾ' ಎಂದು ನಾಮಕರಣ


ನವದೆಹಲಿ[ಡಿ.12]: ಪೌರತ್ವ ತಿದ್ದುಪಡಿ ಮಸೂದೆ 2019 ರಾಜ್ಯಸಭೆಯಲ್ಲೂ ಅಂಗೀಕಾರ ಪಡೆದಿದೆ. ದೇಶದ ನಾನಾ ಭಾಗಗಳಲ್ಲಿ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಹೀಗಿರುವಾಗ ಈ ಮಸೂದೆ ಅಂಗೀಕಾರ ಪಡೆದುಕೊಳ್ಳುತ್ತಿದ್ದಂತೆಯೇ, ದೆಹಲಿಯ ನಾನಾ ಭಾಗಗಳಲ್ಲಿರುವ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಹಿಂದೂ ಶರಣಾರ್ತಿಗಳ ಮುಖದಲ್ಲಿ ಮಂದಹಾಸ ಮೂಡಿದೆ. ಈ ಮಸೂದೆ ಈ ವಲಸಿಗರಿಗೆ ಅದೆಷ್ಟು ಖುಷಿ ಕೊಟ್ಟಿದೆ ಎಂಬುವುದಕ್ಕೆ ತಾಯಿಯೊಬ್ಬಳು ತನ್ನ ಮಗುವಿಗೆ ಇಟ್ಟಿರುವ ಹೆಸರಿನಿಂದಲೇ ಅಂದಾಜು ಮಾಡಬಹುದು.

ಹೌದು ದೆಹಲಿಯ ಮಂಜೂನ್‌ ಕಾ ತಿಲ್ಲಾ ಕಾಲೋನಿಯಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಹಿಂದು ನಿರಾಶ್ರಿತ ಮಹಿಳೆಯೊಬ್ಬಳು ಎರಡು ದಿನದ ಹಿಂದೆ ಹುಟ್ಟಿದ, ತನ್ನ ನವಜಾತ ಹೆಣ್ಣು ಶಿಶುವಿಗೆ ‘ನಾಗರಿಕತಾ’ ಎಂದು ಹೆಸರಿಟ್ಟಿದ್ದಾಳೆ. ಪೌರತ್ವ ತಿದ್ದುಪಡಿ ಮಸೂದೆ ಜಾರಿಯಾಗಲಿ ಎಂಬುವುದು ನನ್ನ ಮನಸ್ಸಿನ ಇಚ್ಛೆಯಾಗಿತ್ತು ಎಂದು ಆ ಮಹಿಳೆ ತಿಳಿಸಿದ್ದಾಳೆ.

Latest Videos

undefined

ನೀವ್ಯಾರೂ ಹೆದರಬೇಕಿಲ್ಲ: ಈಶಾನ್ಯ ಜನತೆಗೆ ಮೋದಿ ಭರವಸೆ!

ಈ ಪುಟ್ಟ ಕಂದನ ಅಜ್ಜಿ ಮೀರಾ ದಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ 'ಸೋಮವಾರದಂದು ಮಗು ಜನಿಸಿತ್ತು. ಆಗಲೇ ಕುಟುಂಬ ಸದಸ್ಯರು ಮಗುವಿಗೆ 'ನಾಗರಿಕತಾ' ಎಂದು ಹೆಸರಿಡಲು ನಿರ್ಧರಿಸಿದ್ದರು. ಸದ್ಯ ಈ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. ಸುರಕ್ಷಿತ ಸ್ಥಳದ ಹುಡುಕಾಟದಲ್ಲಿ ನಾವು ಕಳೆದ 8 ವರ್ಷದ ಹಿಂದೆ ಭಾರತಕ್ಕೆ ಬಂದಿದ್ದೆವು. ಇದೊಂದೇ ನಮಗಿರುವ ಮನೆ. ಆದರೆ ನಾಗರಿಕತೆ ಸಿಗದ ಕಾರಣ ಬಹಳ ದುಃಖವಾಗಿತ್ತು. ಈಗ ನಾವು ಬಹಳ ಹೆಮ್ಮೆಯಿಂದ ಭಾರತೀಯರೆನ್ನಬಹುದು. ಹಕ್ಕಿಯಂತೆ ಹಾರಾಡಬಹುದು' ಎಂದಿದ್ದಾರೆ. ಈ ಮಸೂದೆ ಅಂಗೀಕಾರ ಪಡೆದುಕೊಳ್ಳಲು ಮೀರಾರವರ ಕುಟುಂಬ ಹರಕೆ ಹೊತ್ತುಕೊಂಡಿತ್ತು ಎನ್ನಲಾಗಿದೆ. 

Delhi: A Pakistani Hindu refugee woman living at Majnu ka Tila today named her two-day old daughter 'Nagarikta'. The woman said, "It is my earnest wish that the Bill passes in Parliament". The Bill was passed in Parliament today. pic.twitter.com/JsT17rrSEz

— ANI (@ANI)

ಇನ್ನು ವಿದೇಯಕ ಅಂಗೀಕಾರ ಪಡೆದುಕೊಳ್ಳುತ್ತಿದ್ದಂತೆಯೇ ದೆಹಲಿಯ ಮಜ್ನು ಕಾ ಟೀಲಾ ಬಡಾವಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸ, ಸಿಹಿ ಹಂಚಿ ಅವರು ಖುಷಿ ಹಂಚಿಕೊಂಡಿದ್ದಾರೆ. 'ಭಾರತ್ ಮಾತಾ ಕೀ ಜೈ' ಹಾಗೂ 'ಜೈ ಹಿಂದ್' ಎಂಬ ಘೋಷಣೆಗಳೂ ಮೊಳಗಿವೆ

CAB ಅಪಾಯಕಾರಿ: ಮಸೂದೆ ವಿರೋಧಿಸಿ ಕೆಲಸ ಬಿಟ್ಟ ಐಪಿಎಸ್ ಅಧಿಕಾರಿ!

click me!