
ಬೆಂಗಳೂರು (ಡಿ.23) ಕ್ರಿಸ್ಮಸ್ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯುತ್ತಿದೆ. ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬ ಆಚರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಈ ಬಾರಿ ಕ್ರಿಸ್ಮಸ್ ಗುರುವಾರ ಬಂದಿದೆ. ಕ್ರಿಸ್ಮಸ್ ಹಬ್ಬದ ದಿನ ಭಾರತದ ಕೆಲ ನಗರದಳಲ್ಲಿ ಡ್ರೇ ಡೇ ನಿಯಮವಿದೆ. ಅಂದರೆ ಕೆಲ ನಗರದಲ್ಲಿ ಮದ್ಯ, ಬಾರ್ ಸೇರಿದಂತೆ ಮದ್ಯಪಾನೀಯಗಳು ಲಭ್ಯವಿರುವುದಿಲ್ಲ. ಹೀಗಾಗಿ ಕ್ರಿಸ್ಮಸ್ ಹಬ್ಬದ ದಿನ ಸಂಭ್ರಮ ಡಬಲ್ ಮಾಡಲು ಪ್ಲಾನ್ ಇದ್ದರೆ ಮೊದಲು ನಿಮ್ಮ ನಗರದಲ್ಲಿ ಡ್ರೇ ಡೇ ಇಜೆಯಾ ಅನ್ನೋ ಪರಿಶೀಲಿಸುವುದು ಉತ್ತಮ.
ಕ್ರಿಸ್ಮಸ್ ಹಬ್ಬಕ್ಕೆ ಬೆಂಗಳೂರಿನಲ್ಲಿ ಡ್ರೈ ಡೇ ಇದೆಯಾ? ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲ. ಕಾರಣ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಎಲ್ಲೂ ಕ್ರಿಸ್ಮಸ್ ಹಬ್ಬದ ದಿನ ಎಲ್ಲಾ ಡ್ರೇ ಇರುವುದಿಲ್ಲ. ಮದ್ಯ, ಬಾರ್, ಪಬ್‌ಗಳು ಯಥಾ ಪ್ರಕಾರ ಕಾರ್ಯನಿರ್ವಹಿಸಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಕೆಲ ಭಾಗದಲ್ಲಿ ಡ್ರೈ ಡೇ ಇದೆ ಎಂದು ವರದಿಯಾಗಿದೆ. ಆದರೆ ಅದಿಕೃತವಾಗಿ ಘೋಷಣೆಯಾಗಿಲ್ಲ.ಈಶಾನ್ಯ ರಾಜ್ಯದ ಕೆಲ ಭಾಗದಲ್ಲೂ ಡ್ರೈ ಡೇ ಆಚರಿಸಲಾಗುತ್ತದೆ. ಮುಂಬೈ, ಗೋವಾ, ಗುರುಗ್ರಾಂ ಸೇರಿದಂತೆ ಭಾರತದ ಬಹುತೇಕ ಪ್ರಮುಖ ನಗರಗಳಲ್ಲಿ ಕ್ರಿಸ್ಮಸ್ ದಿನ ಯಾವುದೇ ಡ್ರೇ ಡೇ ಇರುವುದಿಲ್ಲ.
ಭಾರತದ ಬಹುತೇಕ ಎಲ್ಲಾ ರಾಜ್ಯದಲ್ಲಿ ಕ್ರಿಸ್ಮಸ್ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಗೋವಾ, ಕೇರಳ, ಪಂಜಾಬ್, ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಅದ್ಧೂರಿಯಾಗಿ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ