ಎಲ್‌​ಜೆಪಿ ಇಬ್ಭಾ​ಗಕ್ಕೆ ಜೆಡಿಯು ಕುತಂತ್ರ​ವೇ ಕಾರ​ಣ: ಚಿರಾಗ್‌!

Published : Jun 17, 2021, 08:47 AM IST
ಎಲ್‌​ಜೆಪಿ ಇಬ್ಭಾ​ಗಕ್ಕೆ ಜೆಡಿಯು ಕುತಂತ್ರ​ವೇ ಕಾರ​ಣ: ಚಿರಾಗ್‌!

ಸಾರಾಂಶ

* ಜೆಡಿಯು ವಿರುದ್ಧ ಚಿರಾಗ್ ಗಂಭೀರ ಆರೋಪ * ಪಾರ​ಸ್‌ಗೆ ಎಲ್‌​ಜೆಪಿ ಸಂಸ​ದೀಯ ನಾಯಕ ಬೇಡ * ಲೋಕ​ಸಭೆ ಸ್ಪೀಕ​ರ್‌ಗೆ ಚಿರಾಗ್‌ ಪಾಸ್ವಾನ್‌ ನಿವೇ​ದ​ನೆ

ನವ​ದೆ​ಹ​ಲಿ(ಜೂ.17): ಬಿಹಾ​ರದ ಲೋಕ​ಜನ ಶಕ್ತಿ ಪಕ್ಷದಲ್ಲಿ ಉಂಟಾ​ಗಿ​ರುವ ಆಂತ​ರಿಕ ಕಲ​ಹವು ಇದೀಗ ಲೋಕ​ಸಭೆ ಸ್ಪೀಕರ್‌ ಓಂ ಬಿರ್ಲಾ ಅಂಗ​ಳ​ವನ್ನು ತಲು​ಪಿದೆ. ತಮ್ಮ ಚಿಕ್ಕಪ್ಪ ಪಶು​ಪತಿ ಕುಮಾರ್‌ ಪಾರಸ್‌ ಅವ​ರನ್ನು ಲೋಕ​ಸ​ಭೆ​ಯಲ್ಲಿ ಎಲ್‌​ಜೆಪಿ ನಾಯ​ಕ​ರ​ನ್ನಾಗಿ ನೇಮಕ ಮಾಡುವ ನಿರ್ಧಾ​ರ​ವನ್ನು ಕೈಬಿ​ಡು​ವಂತೆ ಸ್ಪೀಕರ್‌ ಬಿರ್ಲಾ ಅವ​ರಿಗೆ ಚಿರಾಗ್‌ ಪಾಸ್ವಾನ್‌ ಪತ್ರ ಬರೆ​ದಿ​ದ್ದಾರೆ.

ನನ್ನ ವಿರು​ದ್ಧದ ಪಿತೂ​ರಿಗೆ ಕೈಜೋ​ಡಿ​ಸಿದ ನಮ್ಮ ಪಕ್ಷದ ಐವರು ಸಂಸ​ದ​ರನ್ನು ಪಕ್ಷ​ದಿಂದ ಉಚ್ಚಾಟಿ​ಸಿದ್ದೇನೆ. ಹೀಗಾಗಿ ಸ್ಪೀಕರ್‌ ಬಿರ್ಲಾ ಅವರು ಪಾರಸ್‌ ಕುರಿ​ತಾದ ತಮ್ಮ ನಿರ್ಣ​ಯ​ವನ್ನು ಪರಿ​ಶೀ​ಲಿ​ಸ​ಬೇಕು ಎಂದು ತಮ್ಮ ಪತ್ರ​ದಲ್ಲಿ ತಿಳಿ​ಸಿ​ದ್ದಾರೆ.

ಜೊತೆಗೆ ಪಕ್ಷ ಇಬ್ಭಾ​ಗ​ವಾದ ಬಳಿಕ ಬುಧ​ವಾರ ಪತ್ರ​ಕ​ರ್ತರನ್ನುದ್ದೇ​ಶಿಸಿ ಮಾತ​ನಾ​ಡಿದ ಚಿರಾ​ಗ್‌, ತಮ್ಮ ಪಕ್ಷ​ವನ್ನು ಹೋಳು ಮಾಡುವ ಹಿಂದೆ ಬಿಹಾರ ಮುಖ್ಯ​ಮಂತ್ರಿ ನಿತೀಶ್‌ ಕುಮಾರ್‌ ನೇತೃ​ತ್ವ​ದ ಜೆಡಿಯು ಪಕ್ಷದ ಕುತಂತ್ರ ಅಡ​ಗಿದೆ. ಆದರೆ ಸಿಂಹದ ಮರಿ​ಯಾದ ನಾನು ಇದ​ಕ್ಕೆಲ್ಲಾ ಬಗ್ಗು​ವು​ದಿಲ್ಲ ಎಂದು ಗುಡು​ಗಿ​ದರು.

‘ಈ ಹಿಂದೆ ನನ್ನ ತಂದೆ ಜೀವಂತ​ವಿ​ರು​ವಾ​ಗಲೂ ಪಕ್ಷ​ವನ್ನು ಒಡೆ​ಯಲು ಜೆಡಿಯು ಯತ್ನಿ​ಸಿತ್ತು. ಸದಾಕಾಲ ದಲಿ​ತರ ಇಬ್ಭಾ​ಗ ಮತ್ತು ತುಳಿ​ತ​ಕ್ಕೊ​ಳ​ಗಾದ ನಾಯ​ಕ​ರನ್ನು ಬಗ್ಗು​ಬಡಿಯು​ವುದೇ ಜೆಡಿಯು ಕಾಯ​ಕ​ವಾ​ಗಿದೆ’ ಎಂದು ನಿತೀಶ್‌ ವಿರುದ್ಧ ಕಿಡಿ​ಕಾ​ರಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಶಪಡಿಸಿದ 200ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್
90's ಕಿಡ್ಸ್ ಹೊಸ ವರ್ಷದ ರೆಸಲ್ಯೂಶನ್ ಏನಿತ್ತು? ಬಾಯ್‌ ಫ್ರೆಂಡ್ಸ್ ಬೇಕು, ಜೀನ್ಸ್ ಪ್ಯಾಂಟ್ ಹಾಕಬೇಕು...!