ರಕ್ಷಾ ಬಂಧನ ದಿನ ತಂಗಿಯ ಮನವಿ; ನಕ್ಸಲ್ ತೊರೆದು ಮನೆಗೆ ಮರಳಿದ ಅಣ್ಣ!

By Suvarna NewsFirst Published Aug 3, 2020, 7:06 PM IST
Highlights

ರಕ್ಷಾ ಬಂಧನ ದಿನ ಮುನಿಸಿಕೊಂಡಿದ್ದ ಅಣ್ಣ-ತಂಗಿಯರು ಒಂದಾದ ಘಟನೆ, ಹಲವು ವರ್ಷಗಳ ಬಳಿಕ ಮತ್ತೆ ಒಂದಾದ ಸೇರಿದಂತೆ ಹಲವು ಘಟನೆಗಳು ಸುದ್ದಿಯಾಗಿದೆ. ಇದೀಗ ಇದೇ ರಕ್ಷಾ ಬಂಧನ ದಿನ 14 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಹಾಗೂ ಈತನ ತಲೆಗೆ ಪೊಲೀಸರು 8 ಲಕ್ಷ ರೂಪಾಯಿ ಘೋಷಿಸಿದ್ದ ನಕ್ಸಲ್, ತಂಗಿಯ ಮನವಿಗೆ ತನ್ನೆಲ್ಲಾ ನಕ್ಸೈಲೈಟ್ ಚಟುವಟಿಕೆ ತೊರೆದು ರಕ್ಷಾ ಬಂಧನ ದಿನ ಮನೆಗೆ ಮರಳಿದ ಘಟನೆ ನಡೆದಿದೆ. 

ಚತ್ತೀಸ್‌ಘಡ(ಆ.03): ಭಾರತ ಹಲವು ದಶಕಗಳಿಂದ ನಕ್ಸಲ್, ವಾವೋವಾದಿ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಚತ್ತೀಸ್‌ಘಡದ ದಾಂತೆವಾಡ ಜಿಲ್ಲೆಯಲ್ಲಿ ವಿಪರೀತವಾಗಿದೆ. ಇಲ್ಲಿನ ಪಲ್ನಾರ್ ಗ್ರಾಮದ ಮಲ್ಲ ಎಂಬಾತ ತನ್ನ 12ನೇ ವಯಸ್ಸಿನಲ್ಲಿ ಮನೆ ತೊರೆದು ನಕ್ಸಲ್ ಚಟುವಟಿಕೆಗೆ ಸೇರಿಕೊಂಡಿದ್ದ. ಕಳೆದ 14 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಮಲ್ಲ, ಇದೀಗ ತಂಗಿಯ ಮನವಿ ಮೇರೆಗೆ ಮನೆಗೆ ಮರಳಿದ್ದಾನೆ. ನಕ್ಸಲ್ ಚಟುವಟಿಕೆ ತೊರೆದು ಬಂದ ಅಣ್ಣನಿಗೆ ರಾಖಿ ಕಟ್ಟಿದ ಘಟನೆ ನಡೆದಿದೆ.

ನಕ್ಸಲ್‌ ನಿಗ್ರಹ ಪಡೆಯಿಂದ ಉದ್ಯೋಗ ಮಾಹಿತಿ

12ನೇ ವಯಸ್ಸಿಗೆ ಮನೆ ತೊರೆದ ಮಲ್ಲ, ಕಳೆದ 14 ವರ್ಷಗಳಿಂದ ನಕ್ಸಲ್ ಚುಟುವಟಿಕೆಯಲ್ಲಿ ಹಂತ ಹಂತವಾಗಿ ಬೆಳೆದಿದ್ದ. ಕೆಡರ್ಸ್ ಆಗಿ ಬಡ್ತಿ ಪಡೆದಿದ್ದ. ಈತನ ತಲೆಗೆ ಪೊಲೀಸರು 8 ಲಕ್ಷ ರೂಪಾಯಿ ಘೋಷಿಸಿದ್ದರು. ಹಲವು ವರ್ಷಗಳಿಂದ ಮಲ್ಲನನ್ನ ಮನೆಗೆ ಮರಳಲು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಆದರೆ ಮಲ್ಲ ಮನಸ್ಸು ಮಾಡಿರಲಿಲ್ಲ. ಆದರೆ   ಪಾಲ್ನಾರ್ ಗ್ರಾಮದಲ್ಲಿ ಕಾರ್ಯಚರಣೆಗೆ ಬಂದಿದ್ದ ಅಣ್ಣನಿಗೆ ತಂಗಿ ಲಿಂಗೆ ಮನವಿ ಮಾಡಿದ್ದಳು.

ಮುಖ್ಯ ಆರಕ್ಷಕನಿಂದಲೇ ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ‘ಸ್ಫೋಟಕ’ ಬೆದರಿಕೆ

ಪೊಲೀಸರು ತೀವ್ರ ಕಾರ್ಯಚರಣೆ ನಡೆಸುತ್ತಿದ್ದಾರೆ. ನಾನು ಅಣ್ಣನನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ನಕ್ಸಲ್ ತೊರೆದು ಪೊಲೀಸರಿಗೆ ಶರಣಾಗು ಎಂದು ತಂಗಿ ಮನವಿ ಮಾಡಿದ್ದಳು. ಮನವಿ ಆಲಿಸಿದ ಮಲ್ಲ, ಮತ್ತೆ ಕಾಡಿನತ್ತ ಹಿಂದಿರುಗಿಲು ಮನಸ್ಸುು ಮಾಡಿಲ್ಲ. ರಕ್ಷಾ ಬಂಧನ ದಿನ ತಂಗಿ ಮಾಡಿದ ಮನವಿಯಿಂದ ನಕ್ಸಲ್ ಕೆಡೆರ್ಸ್ ಆಗಿದ್ದ ಅಣ್ಣ ಮಲ್ಲ ನಕ್ಸಲ್‌ಗೆ ಗುಡ್ ಬೈ ಹೇಳಿದ್ದಾನೆ.

ಮನಗೆ ಬಂದ ಮಲ್ಲನನ್ನು ತಂಗಿ ಪ್ರೀತಿಯಿಂದ ಸ್ವಾಗತಿಸಿದ್ದಾಳೆ. ಬಳಿ ರಾಖಿ ಕಟ್ಟಿದ್ದಾಳೆ. ನಕ್ಸಲ್ ತೊರೆದು ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವವರಿಗೆ ಚತ್ತೀಸ್‌ಘಡ ಪೊಲೀಸರು ವಿಶೇಷ ಸ್ಕೀಮ್ ಜಾರಿಗೆ ತಂದಿದ್ದಾರೆ. ಈ ಸ್ಕೀಮ್ ನಡಿ ಇದೀಗ ಮಲ್ಲ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಮಲ್ಲನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ವಿಚಾರಣೆಗಳ ಬಳಿಕ ಯೋಜನೆಯಡಿ ಮಲ್ಲನಿಗೆ ಹೊಸ ಬದುಕು ಕಟ್ಟಿಕೊಳ್ಳಲು ಪೊಲೀಸರು ಅವಕಾಶ ಮಾಡಿಕೊಡಲಿದ್ದಾರೆ.

click me!