ಸಮಸ್ಯೆ ಬಗೆಹರಿಸಲು ಹೋದ ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

Published : Jun 18, 2026, 03:55 PM IST
Chhattisgarh BJP leader Bharat singh

ಸಾರಾಂಶ

ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ತೆರಳಿದ ಬಿಜೆಪಿ ನಾಯಕನ ಕಾರಿಗೆ ಲಾರಿ ಡಿಕ್ಕಿ ಮಾಡಿಸಿ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ನಡೆದಿದೆ. ಕಾರಿನಲ್ಲಿದ್ದ ಬಿಜೆಪಿ ಮುಖಂಡ ಸೇರಿ ಮೂವರು ಸಜೀವ ದಹನವಾಗಿದ್ದಾರೆ.

ಚತ್ತೀಸಘಡ (ಜೂ.18) ಮರಳುಗಾರಿಕೆ ಕುರಿತು ಹಲವು ವರ್ಷಗಳಿಂದ ಇದ್ದ ವಿವಾದ ಬಗೆಹರಿಸಲು ತೆರಳಿದ ಬಿಜೆಪಿ ಮುಖಂಡನ ಕಾರಿಗೆ ಎರಡು ಲಾರಿ ಡಿಕ್ಕಿ ಮಾಡಿಸಿ ಬಳಿಕ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ಚತ್ತೀಸಘಡದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿ ಬಿಜೆಪಿ ಮುಖಂಡ ಸೇರಿ ಮೂವರು ತೆರಳುತ್ತಿದ್ದಾಗ ದುರ್ಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಸಜೀವ ದಹನವಾಗಿದ್ದಾರೆ.

ಬಿಜೆಪಿ ನಾಯಕ ಭಾರತ್ ಸಿಂಗ್ ಸಜವ ದಹನ

ಚತ್ತೀಸಘಡದ ಜನಪದ ಪಂಚಾಯತ್ ಮಾಜಿ ಅಧ್ಯಕ್ಷ ಭಾರತ್ ಸಿಂಗ್ ಅಲಿಯಾಸ್ ಲಲ್ಲಾ ಸಿಂಗ್ ಸಜೀವ ದಹನವಾಗಿದ್ದಾರೆ. ನೌಗಿನ್ ಗ್ರಾಮದಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿತ್ತು. ಎರಡು ಗುಂಪುಗಳ ನಡುವೆ ಜಗಳದಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ದೂರು ದಾಖಲಾಗಿತ್ತು. ಪ್ರಕರಣದಿಂದ ಮರಳುಗಾರಿಕೆಗೆ ಬ್ರೇಕ್ ಬಿದ್ದಿತ್ತು. ಕಳೆದ ಕೆಲ ವರ್ಷಗಳಿಂದ ಈ ಸಮಸ್ಯೆ ಹಾಗೇ ಮುಂದುವರಿದಿತ್ತು. ಈ ಕುರಿತು ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷನಾಗಿ, ಬಿಜೆಪಿ ಮುಖಂಡನಾಗಿ ಈ ಸಮಸ್ಯೆ ಬಗೆಹರಿಸಲು ಎರಡು ಗುಂಪುಗಳ ನಡುವೆ ಮಾತುಕತೆ ನಡೆಸಿದ್ದರು.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುರ್ಷ್ಕರ್ಮಿಗಳು

ಸಂಧಾನ ವಿಚಾರವಾಗಿ ಮಾತನಾಡಲು ಮತ್ತಿಬ್ಬರ ಜೊತೆ ಭಾರತ್ ಸಿಂಗ್ ಕಾರಿನಲ್ಲಿ ತೆರಳಿದ್ದಾರೆ. ಸೋನ್ಹತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ಮರಳು ಮಾಫಿಯಾ ದಂಧೆಕೋರರು ಲಾರಿ ಮೂಲಕ ಆಗಮಿಸಿ ಭಾರತ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಭಾರತ್ ಸಿಂಗ್ ಎಸ್ಕೇಪ್ ಆಗಬಾರದು ಅನ್ನೋ ಕಾರಣಕ್ಕೆ ಮತ್ತೊಂದು ಲಾರಿಯನ್ನು ಬಳಸಿ ಕಾರು ಟ್ರಾಪ್ ಮಾಡಲಾಗಿದೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.

ಕಾರು ಡಿಕ್ಕಿಯಾದ ಪರಿಣಾಮ ಗಾಯಗೊಂಡ ಭಾರತ್ ಸಿಂಗ್ ಸೇರಿದಂತೆ ಮೂವರು ತಕ್ಷಣವೇ ಕಾರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲ ಹೊರಬರದಂತೆ ತಡೆಯಲು ಮತ್ತೊಂದು ಲಾರಿ ಮೂಲಕವೂ ಅಪಘಾತ ಮಾಡಿಸಲಾಗಿದೆ. ಗಾಯಗೊಂಡ ಮೂವರು ಏನಾಗುತ್ತಿದೆ ಅನ್ನೋವಷ್ಟರಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿದೆ. ಈ ಪ್ರಕರಣ ಸಂಬಂಧ 9 ಮಂದಿ ವಿರುದ್ದ ದೂರು ದಾಖಲಾಗಿದೆ. ಘಟನೆಯನ್ನು ಚತ್ತೀಸಘಡ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಸಿಸಿಟಿವಿ ದೃಶ್ಯ ನೋಡಿ ಕೆರಳಿದ ಗಂಡ, ಮದುವೆಯಾದ 45 ದಿನಕ್ಕೆ ಪತ್ನಿ ದುರಂತ ಅಂತ್ಯ ಕಂಡಿದ್ದು ಯಾಕೆ?
TMC Crisis: ಟಿಎಂಸಿ ಒಳಜಗಳ ತಾರಕಕ್ಕೆ: ಪಕ್ಷದ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡುವಂತೆ ಮಾಜಿ ಖಜಾಂಚಿಯಿಂದಲೇ HDFC ಗೆ ಪತ್ರ!