chhattisgarh: ಒಂದೇ ದಿನ 210 ನಕ್ಸಲರು ಶರಣು

Sujatha NR   | Kannada Prabha
Published : Oct 18, 2025, 07:14 AM IST
bastar naxal surrender 210 naxalites cg news

ಸಾರಾಂಶ

ನಕ್ಸಲ್‌ ಪೀಡಿತ chhattisgarhದಲ್ಲಿ ಒಂದೇ ದಿನ ಬರೋಬ್ಬರಿ 210 ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಏಕದಿನದ ಅತಿದೊಡ್ಡ ನಕ್ಸಲ್‌ ಶರಣಾಗತಿ. ಈ ಮೂಲಕ ಕಳೆದ 3 ದಿನದಲ್ಲಿ ಶರಣಾದ ನಕ್ಸಲರ ಸಂಖ್ಯೆ 238ಕ್ಕೇರಿಕೆಯಾಗಿದೆ

ಜಗದಲ್ಪುರ : ನಕ್ಸಲ್‌ ಪೀಡಿತ ಛತ್ತೀಸ್‌ಗಢದಲ್ಲಿ ಒಂದೇ ದಿನ ಬರೋಬ್ಬರಿ 210 ಮಾವೋವಾದಿಗಳು ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಏಕದಿನದ ಅತಿದೊಡ್ಡ ನಕ್ಸಲ್‌ ಶರಣಾಗತಿ. ಈ ಮೂಲಕ ಕಳೆದ 3 ದಿನದಲ್ಲಿ ಶರಣಾದ ನಕ್ಸಲರ ಸಂಖ್ಯೆ 238ಕ್ಕೇರಿಕೆಯಾಗಿದೆ.

ನಕ್ಸಲರು ಶರಣಾಗತಿಯ ವೇಳೆ 19 ಎಕೆ - 47 ರೈಫಲ್‌, 17 ಸ್ವಯಂ ಲೋಡಿಂಗ್‌ ರೈಫಲ್‌, 23 ಐಎನ್‌ಎಸ್‌ಎಸ್‌ ಸೇರಿದಂತೆ ಸುಮಾರು 153 ವಿವಿಧ ಬಗೆಯ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಯ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಶರಣಾದ ಮಾವೋಗಳಲ್ಲಿ ನಿಷೇಧಿತ ನಕ್ಸಲ್‌ ಗುಂಪಿನ ಒಬ್ಬ ಕೇಂದ್ರ ಸಮಿತಿ ಸದಸ್ಯ, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ನಾಲ್ವರು, ವಿಭಾಗೀಯ ಸಮಿತಿಯ 21 ಮಂದಿ ಮತ್ತು 61 ಪ್ರದೇಶ ಸಮಿತಿಯ ಸದಸ್ಯರು ಸೇರಿದ್ದಾರೆ. ಈ ಘಟನೆಗೆ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಪ್ರತಿಕ್ರಿಯಿಸಿದ್ದು, ‘ಇಡೀ ದೇಶಕ್ಕೆ ಇದೊಂದು ಐತಿಹಾಸಿಕ ದಿನ’ ಎಂದು ಬಣ್ಣಿಸಿದ್ದಾರೆ.

ಗೃಹ ಮಂತ್ರಿ ಅಮಿತ್ ಶಾ ನೀಡಿದ್ರು ಎಚ್ಚರಿಕೆ:

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರವಷ್ಟೇ ನಕ್ಸಲರಿಗೆ, ‘ಶರಣಾಗಿ, ಇಲ್ಲವೇ ಭದ್ರತಾ ಪಡೆಗಳ ದಾಳಿಗೆ ಸಿದ್ಧರಾಗಿ’ ಎಂದು ಕಠಿಣ ಎಚ್ಚರಿಕೆ ನೀಡಿದ್ದರು. ಛತ್ತೀಸ್‌ಗಢದಲ್ಲಿ ಬುಧವಾರ 28 ಮಾವೋಗಳು ಶರಣಾಗಿದ್ದರು.

ಈ ನಡುವೆ ಜಾರ್ಖಂಡಲ್ಲಿ ಕೂಡ ಶುಕ್ರವಾರ ಇಬ್ಬರು ನಕ್ಸಲೀಯರು ಶರಣಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ