ಚೆನ್ನೈನ 13 ಶಾಲೆಗಳಿಗೆ ಬಾಂಬ್‌ ಕರೆ, 'ಹುಸಿ ಬಾಂಬ್‌ ಬೆದರಿಕೆ' ಎಂದ ಪೊಲೀಸ್‌!

By Santosh NaikFirst Published Feb 8, 2024, 7:20 PM IST
Highlights

ಬೆಂಗಳೂರಿನ ಶಾಲೆಗಳ ಬಳಿಕ ಚೆನ್ನೈನ ಶಾಲೆಗಳಿಗೂ ಹುಸಿ ಬಾಂಬ್‌ ಕರೆ ಬಂದಿದೆ. ಅಂದಾಜು 13 ಶಾಲೆಗಳಿಗೆ ಈ ಕರೆ ಬಂದಿದ್ದು, ತನಿಖೆ ನಡೆಸಿರುವ ಪೊಲೀಸರು ಇದು ಹುಸಿ ಬಾಂಬ್‌ ಬೆದರಿಕೆ ಎಂದು ಹೇಳಿದ್ದಾರೆ.
 

ನವದೆಹಲಿ (ಫೆ.8):  ಚೆನ್ನೈನ 13 ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿದೆ. ಆದರೆ, ತನಿಖೆಯ ವೇಳೆ ಯಾವುದೇ ಅನುಮಾನಾಸ್ಪದವಾಗಿ ಏನೂ ಕೂಡ ಸಿಗದ ಕಾರಣ, ಇದು ಬಹುತೇಕವಾಗಿ ಹುಸಿ ಬಾಂಬ್‌ ಕರೆ ಅಗಿರುವ ಸಾಧ್ಯತೆ ಇದೆ ಎಂದು ಚೆನ್ನೈ ಪೊಲೀಸರು ಹೇಳಿದ್ದಾರೆ.  ಎಲ್ಲಾ ಶಾಲೆಗಳಿಗೆ ಬಾಂಬ್ ಬೆದರಿಕೆ ಒಂದೇ ಮೇಲ್ ಐಡಿಯಿಂದ ಕಳುಹಿಸಲಾಗಿದೆ ಮತ್ತು ಕಳುಹಿಸುವವರು ಬಳಸಿದ ಮೇಲ್‌ಗೆ ಪ್ರಾಬ್ಲಮಾಟಿಕ್‌ ಅಂದರೆ ಸಮಸ್ಯೆ ಎಂದು ಬರೆದಿದ್ದಾರೆ. ಈ ಇಮೇಲ್ ಕಳುಹಿಸಿದ ವ್ಯಕ್ತಿಯನ್ನು ಗುರುತಿಸಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. "ಬೆದರಿಕೆಯು ಹುಸಿ ಮೇಲ್‌ನಂತೆ ಕಾಣುತ್ತದೆ. ಕಳುಹಿಸುವವರು ಬಳಸುವ ಮೇಲ್‌ಗೆ ಪ್ರಾಬ್ಲಾಮಾಟಿಕ್‌ ಎನ್ನುವ ಶಬ್ದ ಬಳಸಿದ್ದಾರೆ. ಆದ್ದರಿಂದ ವ್ಯಕ್ತಿಯನ್ನು ತಕ್ಷಣವೇ ಗುರುತಿಸುವುದು ಕಷ್ಟ. ಆದರೆ ನಮ್ಮ ತನಿಖೆ ನಡೆಯುತ್ತಿದೆ. ಈ ಇಮೇಲ್ ಕಳುಹಿಸಿದ ವ್ಯಕ್ತಿಯನ್ನು ಗುರುತಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಬೆದರಿಕೆ ಎಲ್ಲಾ ಶಾಲೆಗಳಿಗೆ ಒಂದೇ ಐಡಿಯಿಂದ ಬಂದಿವೆ. ಸೈಬರ್ ಕ್ರೈಂ ತಂಡಗಳು ಸಹ ಪ್ರಕರಣದಲ್ಲಿ ಕಾರ್ಯನಿರ್ವಹಿಸುತ್ತಿವೆ," ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ನಗರದ ಮತ್ತೊಂದು ವಿದ್ಯಾ ಸಂಸ್ಥೆಗೆ ಬಾಂಬ್ ಬೆದರಿಕೆ! ಸ್ಥಳಕ್ಕೆ ದೌಡಾಯಿಸಿದ ಯಶವಂತಪುರ ಪೊಲೀಸರು!

Latest Videos

ಇದೇ ವೇಳೆ ಜನರು ಭಯಭೀತರಾಗುವುದು ಬೇಡ, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದಾರೆ ಎಂದು ಚೆನ್ನೈ ಪೊಲೀಸ್‌ ತಿಳಿಸಿದೆ. ಬಾಂಬ್ ಬೆದರಿಕೆ ಕರೆ ಬಂದ ನಂತರ ಈ 13 ಶಾಲೆಗಳ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಮನೆಗೆ ಕಳುಹಿಸಲಾಗಿದೆ. ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾದ 13 ಶಾಲೆಗಳಲ್ಲಿ ಡಿಎವಿ ಗೋಪಾಲಪುರಂನಲ್ಲಿರುವ ಚೆನ್ನೈ ಪಬ್ಲಿಕ್ ಶಾಲೆ ಮತ್ತು ಪ್ಯಾರಿಸ್‌ನ ಸೇಂಟ್ ಮೇರಿಸ್ ಶಾಲೆ ಸೇರಿವೆ.

ಹೊಸ ವರ್ಷ ಸಂಭ್ರಮದ ಬೆನ್ನಲ್ಲೇ ಮುಂಬೈನ 11 ಕಡೆ ಬಾಂಬ್ ದಾಳಿ ಬೆದರಿಕೆ, RBIಗೆ ಬಂತು ಮೇಲ್!

click me!