ಕಾಶ್ಮೀರದಲ್ಲಿ ಉಗ್ರ ನಿಗ್ರಹಕ್ಕೆ ಮೊದಲ ಬಾರಿ ಮಹಿಳೆ ನೇಮಕ!

By Suvarna NewsFirst Published Sep 2, 2020, 8:36 AM IST
Highlights

ಕಾಶ್ಮೀರದಲ್ಲಿ ಉಗ್ರ ನಿಗ್ರಹಕ್ಕೆ ಮೊದಲ ಬಾರಿ ಮಹಿಳೆ ನೇಮಕ| 1996ನೇ ಬ್ಯಾಚಿನ ತೆಲಂಗಾಣ ಕೇಡರ್‌ ಅಧಿಕಾರಿ ಚಾರು ಸಿನ್ಹಾ

ನವದೆಹಲಿ(se.೦೨): ಜಮ್ಮು-ಕಾಶ್ಮೀರದ ಪ್ರಮುಖ ಭಯೋತ್ಪಾದನೆಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಶ್ರೀನಗರ ಸೆಕ್ಟರ್‌ನ ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್‌) ಇನ್‌ಸ್ಪೆಕ್ಟರ್‌ ಜನರಲ್‌ (ಐಜಿ) ಆಗಿ ಇದೇ ಮೊದಲ ಬಾರಿಗೆ ಮಹಿಳಾ ಐಪಿಎಸ್‌ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ.

1996ನೇ ಬ್ಯಾಚಿನ ತೆಲಂಗಾಣ ಕೇಡರ್‌ ಅಧಿಕಾರಿ ಚಾರು ಸಿನ್ಹಾ ಅವರೇ ಸಿಆರ್‌ಪಿಎಫ್‌ ಐಜಿ ಆಗಿ ನೇಮಕಗೊಂಡವರು. ಇದಕ್ಕೂ ಮೊದಲು ಅವರು ನಕ್ಸಲ್‌ ಪೀಡಿತ ಬಿಹಾರ ಸೆಕ್ಟರ್‌ನ ಸಿಆರ್‌ಪಿಎಫ್‌ ಐಜಿ ಆಗಿ ಕಾರ‍್ಯನಿರ್ವಹಿಸಿದ್ದರು.

ಇಲ್ಲಿ ಚಾರು ಅವರ ನೇತೃತ್ವದಲ್ಲಿ ಹಲವಾರು ನಕ್ಸಲ್‌ ನಿಗ್ರಹ ಕಾರಾರ‍ಯಚರಣೆಗಳು ನಡೆದಿದ್ದು, ಬಳಿಕ ಅವರನ್ನು ಜಮ್ಮು ಸೆಕ್ಟರ್‌ಗೆ ವರ್ಗಾವಣೆ ಮಾಡಲಾಗಿತ್ತು.

ಸದ್ಯ ಸಿಆರ್‌ಪಿಎಫ್‌ ಮಹಾ ನಿರ್ದೇಶಕಿ ಎ.ಪಿ ಮಹೇಶ್ವರಿ ಅವರೇ ಶ್ರೀನಗರ ಸೆಕ್ಟರ್‌ ಐಜಿ ಆಗಿ ಕಾರ‍್ಯನಿರ್ವಹಿಸುತ್ತಿದ್ದರು. 2005ರಿಂದ ಶ್ರೀನಗರ ಸೆಕ್ಟರ್‌ ಕಾರ‍್ಯಚಾರಣೆ ಆರಂಭವಾಗಿದ್ದು, ಅಂದಿನಿಂದ ಐಜಿ ದರ್ಜೆಯ ಮಹಿಳಾ ಅಧಿಕಾರಿಗಳು ಮುನ್ನಡೆಸಿರಲಿಲ್ಲ. ಶ್ರೀನಗರ ಸೆಕ್ಟರ್‌ 2 ರೇಂಜಸ್‌, 22 ಎಕ್ಸಿಕ್ಯುಟಿವ್‌ ಘಟನಕಗಳು ಮತ್ತು 3 ಮಹಿಳಾ ದಳವನ್ನು ಒಳಗೊಂಡಿದೆ.

click me!