ದೇಶದ ಸೈನಿಕರಿಗೆ ರಾಖಿ ಕಳಿಸಿ, ಸಂದೇಶ ನೀಡಲು ಅವಕಾಶ ಇದೆ!

By Suvarna News  |  First Published Aug 2, 2020, 4:23 PM IST

ರಕ್ಷಾಬಂಧನ ಹತ್ತಿರ ಬಂದಿದೆ. ದೇಶ ಕಾಯುವ ಸೈನಿಕರಿಗೆ ಈ ಮೂಲಕ ಮತ್ತೊಮ್ಮೆ ನಮಿಸೋಣ/  ರಾಖಿ ಕಳಿಸಿ ನಮಿಸಬಹುದು/ ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸಲು ಮತ್ತೊಂದು ಅವಕಾಶ


ಬೆಂಗಳೂರು(ಆ. 02) ಸೈನ್ಯ ಎಂಬ ಪದ ಕೇಳುತ್ತಿರುವಂತೆ ಕಿವಿ ಒಮ್ಮೆ ಚುರುಕಾಗಿ, ರೋಮಗಳು ಸೆಟೆದು‌ ನಿಲ್ಲುತ್ತದೆ ಆ ಪದಕ್ಕಿರುವ ಶಕ್ತಿ ಅಂಥದ್ದು. ಇನ್ನು ಸೇನೆಗೆ ಸಂಬಂಧ ಪಟ್ಟ ಬರಹಗಳನ್ನು ಮೈ ಮೇಲೆ ಹಾಕಿಕೊಂಡು, ದಿನ ಬಳಸುವ ಕಾಫಿ ಮಗ್, ವಾಟರ್ ಬಾಟಲ್ ಹಾಗೂ ಮನೆಯಲ್ಲಿರುವ ಅಲಂಕಾರಿಕ ವಸ್ತುಗಳ ಮೇಲೂ ಅದೇ ಚಿತ್ರಗಳು ಹಾಗೂ ಸಾಲುಗಳು ಪ್ರತಿಧ್ವನಿಸುತ್ತಿದ್ದರೆ ಹೇಗಿರುತ್ತದೆ ಒಮ್ಮೆ ಯೋಚಿಸಿ. ದಿನವಿಡಿ ಜೋಶ್ ಹೈ ತಾನೇ!

ಆದರೇ‌ ಈ ರೀತಿಯ ವಸ್ತುಗಳು ಸಿಗುವುದಾದರು ಎಲ್ಲಿ..?? ನಮ್ಮ ಜೋಶ್ ಹೆಚ್ಚಿಸುವುದು ಯಾವಾಗ‌.‌.?? ಉತ್ತರ ಇಲ್ಲಿದೆ..

Latest Videos

undefined

Go Force ಭಾರತದ ಏಕೈಕ ಆರ್ಮಿ ಗಿಫ್ಟ್ ಸೆಂಟರ್. ಇಂದಿನ ಸ್ಟಾರ್ಟ್ ಅಪ್ ನ ಯುಗದಲ್ಲಿ ಬೆಂಗಳೂರಿನ  ಚಿಂತಕ ಚಕ್ರವರ್ತಿ ಸೂಲಿಬೆ ತಂಡದ  ಮೂವರು‌ ಉತ್ಸಾಹಿ ತರುಣರು ಹುಟ್ಟಿ ಹಾಕಿರುವ ಕಂಪನಿಯಿದು. ಸೈನ್ಯಕ್ಕೆ ಸಂಬಂಧ ಪಟ್ಟ ವಸ್ತುಗಳನ್ನು ಜನರಿಗೆ ತಲುಪಿಸಿ ಜನರ ದೇಶಾಭಿಮಾನದ ಕಿಚ್ಚನ್ನು ಜಗದ ಮುಂದೆ ತೊರಿಸಲು‌ ದಾರಿ ಮಾಡುವ ಸಲುವಾಗಿ ಹುಟ್ಟಿಕೊಂಡ ಈ ಸಂಸ್ಥೆ ತನ್ನ ಲಾಭದ ಒಂದು ಅಂಶವನ್ನು ಸೇನೆಗೆಂದೇ ಮೀಸಲಿರಿಸಿದೆ. 

ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು?

ಇತ್ತಿಚೆಗೆ ಕ್ಯಾಮೊಫ್ಲೆಜ್ ಮಾಸ್ಕ್ ಬಿಡುಗಡೆ ಮಾಡಿ ಅದರಿಂದ ಬಂದ ಸುಮಾರು 35 ಸಾವಿರ ಲಾಭವನ್ನು ಸೇನಾ ಕಾರ್ತಕ್ಕೆ ನ ನೀಡಿದೆ. ವಾಹನ ಅಪಘಾತದಲ್ಲಿ ಮೃತರಾದ ಸಿಪಾಯಿ ಸಕ್ರಿಯ ನಾಯ್ಕ ಅವರ ಪತ್ನಿ ಜ್ಯೋತಿ ಬಾಯಿಗೆ ಅವರಿಗೆ ಹಣ ನೀಡಲಾಗಿದೆ.

ಇಲ್ಲಿ ವ್ಯಾಪಾರ ಎಂದರೆ ಹಣ ಮಾಡುವ ಮಾರ್ಗವಲ್ಲ ಅಲ್ಲಿ ಭಾವನೆಗಳಿಗೂ ಬೆಲೆಯಿದೆ‌. ದೇಶಪ್ರೇಮವನ್ನು‌ ಪಸರಿಸಲು ಜಾಗವಿದೆ ಎಂದು‌ ನಿರೂಪಿಸಿದ್ದಾರೆ.

ಇದೀಗ GoForce ಮತ್ತೊಂದು ಹೊಸ ಯೋಜನೆಯನ್ನು ರಕ್ಷಾಬಂಧನ ದ ಸಮಯದಲ್ಲಿ ಜನರ ಮುಂದಿಡುತ್ತಿದೆ. ಹೌದು. ರಕ್ಷಾಬಂಧನ! ಹೆಣ್ಣುಮಕ್ಕಳಿಗೆ ಅತ್ಯಂತ ಭಾವನಾತ್ಮಕವಾದ ಹಬ್ಬವಿದು ಎಂದೇ ಹೇಳಬಹುದು. ತಮ್ಮನ್ನು ರಕ್ಷಿಸುವ ಹೊಣೆಹೊತ್ತ ಅಣ್ಣ-ತಮ್ಮಂದಿರಿರಲಿ, ಬಂಧು-ಮಿತ್ರರಿರಲಿ ಅವರಿಗೆ ರಕ್ಷೆಯನ್ನು ಕಟ್ಟಿ ವಿಶೇಷವಾಗಿ ಆಚರಿಸುತ್ತಾರೆ. ಈ ಹಬ್ಬ ದೇಶದಾದ್ಯಂತ ಆಚರಿಸಲ್ಪಡುತ್ತದೆ. Go Force ಈ ಬಾರಿ ರಕ್ಷಾಬಂಧನಕ್ಕೆಂದೇ ರಕ್ಷೆಗಳನ್ನು ಹೊರತಂದಿದೆ. ಇವುಗಳನ್ನು ಹಗಲು-ರಾತ್ರಿ ಎನ್ನದೇ ದೇಶದ ರಕ್ಷಣೆಗೆ ನಿಂತ ಸೈನಿಕರಿಗೆ ಕಳಿಸಿಕೊಡಲಾಗುತ್ತದೆ.

ಜನರು ಈ ರಾಖಿಯನ್ನು ಕೊಂಡುಕೊಂಡರೆ, ಅವುಗಳನ್ನು ನೇರ ಸೈನಿಕರಿಗೆ ತಲುಪಿಸುವುದು Go Force ನದ್ದೇ ಜವಾಬ್ದಾರಿ. ನೀವು ಒಂದು ರಾಕಿಯ ಮೊತ್ತವನ್ನು ನಮಗೆ ಕಳಿಸಿದರೆ ಸಾಕು. ಅದರ ಜೊತೆ ಸೈನಿಕರಿಗೆ ಸಂದೇಶವನ್ನೂ ಕಳಿಸಬಹುದು. ಅದನ್ನು  Go Force ಸೈನಿಕರಿಗೆ ತಲುಪಿಸುತ್ತದೆ‌. ಈ ರಾಕಿಯ ಮೇಲೆ 'ನಿಮ್ಮ ಮತ್ತು ನಮ್ಮ ಇಬ್ಬರ ಆರೈಕೆಯನ್ನೂ ನೋಡಿಕೊಳ್ಳಿ' ಎಂಬ ಸಂದೇಶವಿದೆ.

ಮತ್ತೇಕೆ ತಡ!? ನಿಮ್ಮ ಮನೆಯ ಸಹೋದರರೊಂದಿಗೆ ದೇಶ ಕಾಯುವ ಸಹೋದರನಿಗೂ ರಾಖಿಯನ್ನು ಕಟ್ಟೋಣ. ದೇಶ ರಕ್ಷಿಸುವ ಸೈನಿಕನ ಹೆಗಲಿಗೆ ಹೆಗಲಾಗಿ ನಿಲ್ಲೋಣ.

click me!