ನವದೆಹಲಿ (ಜೂ.18): ಬಿಜೆಪಿ ತೊರೆದು ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಬಂಗಾಳದ ಶಾಸಕ ಮುಕುಲ್ ರಾಯ್ ಕೋರಿಕೆ ಮೇರೆಗೆ ಅವರಿಗೆ ನೀಡಲಾಗಿದ್ದ ಝಡ್ ಭದ್ರತೆ ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಯ್‌ಗೆ ನೀಡಲಾಗಿರುವ ವಿಐಪಿ ಭದ್ರತೆ ವಾಪಸ್‌ಗೆ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಈ ಬೆನ್ನಲ್ಲೇ ರಾಯ್‌ಗೆ ರಾಜ್ಯ ಪೊಲೀಸ್ ಭದ್ರತೆ ಒದಗಿಸಲಾಗಿದೆ.
2017ರಲ್ಲಿ ಪಕ್ಷವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಾಯ್ ಅವರನ್ನು ಟಿಎಂಸಿ ವಜಾಗೊಳಿಸಿತ್ತು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಮತ್ತೆ ಟಿಎಂಸಿಗೆ ರಾಯ್ ಮರಳಿದ್ದರು.