ಕೋವಿ​ಶೀಲ್ಡ್‌ ಲಸಿಕೆ ಅಂತರ 6-8 ವಾರಕ್ಕೆ ಬದಲಿಸಲು ಸೂಚನೆ!

Published : Mar 23, 2021, 08:50 AM IST
ಕೋವಿ​ಶೀಲ್ಡ್‌ ಲಸಿಕೆ ಅಂತರ 6-8 ವಾರಕ್ಕೆ ಬದಲಿಸಲು ಸೂಚನೆ!

ಸಾರಾಂಶ

ಕೋವಿ​ಶೀಲ್ಡ್‌ ಲಸಿಕೆ ಅಂತರ 6-8 ವಾರಕ್ಕೆ ಬದಲಿಸಲು ಸೂಚನೆ| ಪರಿ​ಣಾ​ಮ​ಕಾರಿ ಕುರಿ​ತಾಗಿ ವೈಜ್ಞಾ​ನಿಕ ವರದಿ ಆಧ​ರಿಸಿ ಈ ಕ್ರಮ| ಈವರೆಗೆ 4-6 ವಾರ​ದ ಅಂತರ ಇರುತ್ತಿತ್ತು

 

ನವ​ದೆ​ಹ​ಲಿ(ಮಾ.23): ಇನ್ನು ಮುಂದಿನ ದಿನ​ಗ​ಳಲ್ಲಿ ಕೋವಿ​ಶೀಲ್ಡ್‌ ಲಸಿ​ಕೆಯ ಮೊದಲ ಡೋಸ್‌ ಪಡೆ​ದ​ವ​ರಿಗೆ 4ರಿಂದ 6 ವಾರ​ಗಳ ಅಂತ​ರ​ದ ಬದ​ಲಿಗೆ 6ರಿಂದ 8 ವಾರ​ಗಳ ಅಂತ​ರ​ದಲ್ಲಿ 2ನೇ ಡೋಸ್‌ ನೀಡ​ಲಾ​ಗು​ತ್ತದೆ. ಈ ಸಂಬಂಧ ರಾಜ್ಯ​ಗಳು ಮತ್ತು ಕೇಂದ್ರಾ​ಡ​ಳಿತ ಪ್ರದೇ​ಶ​ಗ​ಳಿಗೆ ಕೇಂದ್ರ ಸರ್ಕಾರ ಪತ್ರ ಮುಖೇನ ಸೂಚನೆ ನೀಡಿದೆ.

ಕೋವಿ​ಶೀಲ್ಡ್‌ ಲಸಿ​ಕೆಯ ಮೊದಲ ಡೋಸ್‌ ಪಡೆ​ದ ಫಲಾ​ನು​ಭ​ವಿ​ಗ​ಳಿಗೆ 6ರಿಂದ 8 ವಾರ​ಗಳ ಅಂತ​ರ​ದಲ್ಲಿ 2ನೇ ಡೋಸ್‌ ನೀಡ​ಬೇಕು. ಇದ​ರಿಂದ ಲಸಿ​ಕೆಯ ಪರಿ​ಣಾ​ಮ​ ಮತ್ತಷ್ಟುಹೆಚ್ಚ​ಲಿದೆ ಎಂಬುದು ವೈಜ್ಞಾ​ನಿಕ ಅಧ್ಯಯನದಿಂದ ದೃಢ​ಪ​ಟ್ಟಿದೆ. ಈ ಹಿನ್ನೆ​ಲೆ​ಯ​ಲ್ಲಿ ಕೊರೋನಾ ಲಸಿಕೆ ಕುರಿ​ತಾದ ರಾಷ್ಟ್ರೀಯ ತಜ್ಞರ ಗುಂಪಿನ 20ನೇ ಸಭೆ​ಯಲ್ಲಿ 2ನೇ ಡೋಸ್‌ ಲಸಿ​ಕೆಯ ಅವ​ಧಿ​ಯನ್ನು ಪರಿ​ಷ್ಕ​ರಿ​ಸ​ಲಾ​ಗಿದೆ. ಆದರೆ ಇದು ದೇಶೀಯ ಕೋವ್ಯಾ​ಕ್ಸಿನ್‌ ಲಸಿ​ಕೆಗೆ ಅನ್ವ​ಯಿ​ಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಸ್ತುತ ದೇಶಾ​ದ್ಯಂತ 60 ವರ್ಷ ಮೇಲ್ಪಟ್ಟಮತ್ತು ಕಾಯಿಲೆಪೀಡಿತ 45 ವರ್ಷ ಮೇಲ್ಪ​ಟ್ಟವ​ರಿಗೆ ದೇಶೀ​ಯ​ ಕೋವ್ಯಾ​ಕ್ಸಿನ್‌ ಮತ್ತು ಬ್ರಿಟ​ನ್‌ನ ಕೋವಿ​ಶೀ​ಲ್ಡ್‌ ಲಸಿಕೆಯನ್ನು ನೀಡ​ಲಾ​ಗು​ತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಗಂಡ ಕ್ಯೂಟ್ ಇಲ್ಲ, ಆದ್ರೆ ವ್ಯಾಲೆಟ್ ಕ್ಯೂಟ್ ಆಗಿದೆ; ಜೀವನಕ್ಕೆ ಪತಿ ಸೌಂದರ್ಯ ಮುಖ್ಯವೇ ಅಲ್ಲ ಎಂದ ಪತ್ನಿ!
ಮಹಾಯುತಿ ಬ್ರೇಕ್‌?: ದೇವೇಂದ್ರ ಫಡ್ನವಿಸ್‌ಗೆ ಕೈಕೊಟ್ಟ ಶಿಂಧೆ ಸೇನೆ, ರಾಜ್‌ ಠಾಕ್ರೆ ಎಂಎನ್‌ಎಸ್‌ ಜೊತೆ ಮೈತ್ರಿ!