ಭದ್ರಾವತಿ ಉಕ್ಕು ಕಾರ್ಖಾನೆ ಮಾರಾಟ ಕೈಬಿಟ್ಟ ಕೇಂದ್ರ

By Govindaraj SFirst Published Oct 13, 2022, 2:30 AM IST
Highlights

ಭದ್ರಾವತಿಯ ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕು ಘಟಕವನ್ನು (ವಿಐಎಸ್‌ಸಿ) ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಸರ್ಕಾರಿ ಸ್ವಾಮ್ಯದ ಸೇಲ್‌ ಉಸ್ತುವಾರಿಯಲ್ಲಿರುವ ಘಟಕವನ್ನು ಖರೀದಿಸಲು ಬಿಡ್‌ದಾರರಿಂದ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಖಾಸಗೀಕರಣ ಪ್ರಸ್ತಾಪ ಕೈಬಿಡಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ನವದೆಹಲಿ (ಅ.13): ಭದ್ರಾವತಿಯ ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕು ಘಟಕವನ್ನು (ವಿಐಎಸ್‌ಸಿ) ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಸರ್ಕಾರಿ ಸ್ವಾಮ್ಯದ ಸೇಲ್‌ ಉಸ್ತುವಾರಿಯಲ್ಲಿರುವ ಘಟಕವನ್ನು ಖರೀದಿಸಲು ಬಿಡ್‌ದಾರರಿಂದ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಖಾಸಗೀಕರಣ ಪ್ರಸ್ತಾಪ ಕೈಬಿಡಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಘಟಕವನ್ನು ಶೇ.100ರಷ್ಟು ಖಾಸಗಿಗೆ ಮಾರಾಟ ಮಾಡುವ ಕುರಿತು 2019ರಲ್ಲಿ ಕೇಂದ್ರ ಸರ್ಕಾರ ಆಸಕ್ತರಿಂದ ಬಿಡ್‌ ಅಹ್ವಾನಿಸಿತ್ತು. ಈ ವೇಳೆ ಹಲವು ಕಂಪನಿಗಳು ಬಿಡ್‌ ಕೂಡಾ ಸಲ್ಲಿಕೆ ಮಾಡಿದ್ದವು. ಆದರೆ ನಂತರದಲ್ಲಿ ಖರೀದಿ ಪ್ರಕ್ರಿಯೆ ಮುಂದುವರೆಸಲು ಬಿಡ್‌ದಾರರು ಸೂಕ್ತ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ, 2019ರಲ್ಲಿ ಕೈಗೊಂಡ ನಿರ್ಧಾರವನ್ನು ರದ್ದುಪಡಿಸಲಾಗುತ್ತಿದೆ ಎಂದು ಸಂಪುಟ ಸಭೆಯ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದರು.

ತನ್ನ ಪ್ರಶ್ನೆಗೆ ಸರಿ ಉತ್ತರ ನೀಡಿದ ಇಬ್ಬರಿಗೆ ಆನಂದ್‌ ಮಹೀಂದ್ರಾ ಸ್ಪೆಷಲ್‌ ಗಿಫ್ಟ್‌!

ಹಿನ್ನೆಲೆ: ಭದ್ರಾವತಿಯ ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕು ಘಟಕವನ್ನು 1923ರಲ್ಲಿ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌. ಎಂ.ವಿಶ್ವೇಶರಾಯ ಅವರು ಮುಂದಾಳತ್ವದಲ್ಲಿ ಸ್ಥಾಪಿಸಲಾಗಿತ್ತು. ದಶಕಗಳ ಕಾಲ ಭಾರೀ ಲಾಭದಲ್ಲಿ ಸಂಸ್ಥೆ ನಂತರ ನಾನಾ ಕಾರಣಗಳಿಂದ ನಷ್ಟದ ಹಾದಿ ಹಿಡಿದಿತ್ತು. ಹೀಗಾಗಿ ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ವಿಐಎಸ್‌ಸಿ ಅನ್ನು 1989ರಲ್ಲಿ ತನ್ನ ವಶಕ್ಕೆ ಪಡೆದು ಬಳಿಕ ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾಕ್ಕೆ ವಹಿಸಿತ್ತು. ಆದರೆ ಭದ್ರಾವತಿ ಘಟಕದಲ್ಲಿ ನಂತರದ ಒಂದು ದಶಕದಲ್ಲಿ ಕೇಂದ್ರ ಸರ್ಕಾರ ಕೇವಲ 200 ಕೋಟಿ ರು. ಬಂಡವಾಳ ಮಾತ್ರ ಹೂಡಿಕೆ ಮಾಡಿತು. 

ಹೀಗೂ ಮಾಡ್ತಾರಾ ? You Are Not Hot ಎಂದು ಜಿಮ್‌ನಿಂದ ಮಹಿಳೆ ಕಿಕ್‌ಔಟ್‌

ಜೊತೆಗೆ ದೊಡ್ಡ ಮಟ್ಟದಲ್ಲಿ ಘಟಕವನ್ನು ಪುನರುಜ್ಜೀವನಗೊಳಿಸುವ ಯಾವುದೇ ಯತ್ನ ಮಾಡಲಿಲ್ಲ. ಹೀಗಾಗಿ ಸಂಸ್ಥೆ ನಷ್ಟದಲ್ಲೇ ಮುಂದುವರೆಯಿತು. ಹೀಗಾಗಿ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಘಟಕವನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪ ಮುಂದಿಡಲಾಯಿತು. ಆದರೆ ಆಗಲೂ ಯೋಜನೆ ಜಾರಿಯಾಗಲಿಲ್ಲ. ಬಳಿಕ ರಕ್ಷಣಾ ಇಲಾಖೆ ಇದನ್ನು ತನ್ನ ತೆಕ್ಕೆಗೆ ಪಡೆಯಲಿದೆ ಎಂಬ ವರದಿಗಳಿದ್ದವಾದರೂ ಅದು ಕೂಡಾ ಕೈಗೂಡಿರಲಿಲ್ಲ. ಹೀಗಾಗಿ ಅಂತಿಮವಾಗಿ 2019ರಲ್ಲಿ ಘಟಕವನ್ನು ಪೂರ್ಣವಾಗಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಬಿಡ್‌ ಆಹ್ವಾನಿಸಿತ್ತು.

click me!