
ನವದೆಹಲಿ: ಕೆಲ ಅತ್ಯಗತ್ಯ ಔಷಧಿಗಳ ಬೆಲೆಯನ್ನು ಕಡಿಮೆ ಗೊಳಿಸಿರುವುದಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಘೋಷಿಸಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಹೊರಡಿಸಿದ ಬೆಲೆ ನಿಗದಿ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ.
ಬೆಲೆ ಬದಲಾವಣೆಯ ಅನ್ವಯ, ಅಸೆಕ್ಲೋಫೆನಾಕ್, ಪ್ಯಾರಸಿಟಮಾಲ್ ಮತ್ತು ಟ್ರಿಪ್ಸಿನ್ ಕೈಮೊಟ್ರಿಪ್ಸಿನ್ ಅಂಶಗಳುಳ್ಳ, ಕುಮ್ಸ್ ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ತಯಾರಿಸಿ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಮಾರಾಟ ಮಾಡಿದ ಔಷಧಿಗೆ 13 ರು., ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್‌ನ ಅದೇ ಔಷಧಿಗೆ 15.01 ರು. ನಿಗದಿಪಡಿಸಲಾಗಿದೆ.
ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ಅಟೋರ್ವಾಸ್ಟಾಟಿನ್(40 ಮಿಗ್ರಾಂ) ಮತ್ತು ಕ್ಲೋಪಿಡೋಗ್ರೆಲ್ (75 ಮಿಗ್ರಾಂ)ಗೆ 25.61 ರು. ಆಗಿದೆ. ಮಕ್ಕಳಿಗೆ ಕೊಡುವ ದ್ರವ ರೂಪದ ಮದ್ದುಗಳು, ವಿಟಮಿನ್-ಡಿ ಕೊರತೆ ನೀಗಿಸುವ ಔಷಧಿಗಳಿಗೆ ಪ್ರತಿ ಮಿಲಿಗೆ 31.77 ರು. ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ