ಆಧಾರ್ ಕಾರ್ಡ್ ನಿಯಮದಲ್ಲಿ ಮಹತ್ವದ ಬದಲಾವಣೆ, ಪ್ರತಿ 10 ವರ್ಷಕ್ಕೆ ತಿದ್ದುಪಡಿ!

By Suvarna NewsFirst Published Nov 10, 2022, 9:32 PM IST
Highlights

ಆಧಾರ್ ಕಾರ್ಡ್ ನಿಯಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ ಪ್ರತಿ 10 ವರ್ಷಕ್ಕೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಅಗತ್ಯವಿದೆ. ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ಮಾರ್ಗಸೂಚಿಯಲ್ಲಿ ಏನಿದೆ? ಇಲ್ಲಿದೆ ವಿವರ.
 

ನವದೆಹಲಿ(ನ.10): ಆಧಾರ್ ಕಾರ್ಡ್ ವಿಚಾರದಲ್ಲಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಆಧಾರ್ ಕಾರ್ಡ್‌ನಲ್ಲಿನ ವಂಚನೆ ತಪ್ಪಿಸಲು ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ನೂತನ ಮಾರ್ಗಸೂಚಿ ಪ್ರಕಾರ, ಪ್ರತಿ 10 ವರ್ಷಕ್ಕೆ ಆಧಾರ್ ಕಾರ್ಡ್ ತಿದ್ದುಪಡಿ ಅಗತ್ಯವಾಗಿದೆ. ಪೂರಕ ದಾಖಲೆಗಳನ್ನು ಒದಗಿಸಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವುದು ಅಗತ್ಯವಾಗಿದೆ. ಆಧಾರ್ ಕಾರ್ಡ್ ನೋಂದಣಿ ಮಾಡಿದ ದಿನಂದ 10 ವರ್ಷ ಪೂರೈಕೆಯಾಗುವ ದಿನದ ಒಳಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಪ್ರಕಟಿಸಿದೆ. ಗುರುತಿನ ಚೀಟಿ ದಾಖಲೆ, ವಿಳಾಸದ ದಾಖಲೆ ಪತ್ರ ನೀಡುವ ಮೂಲಕ ಪ್ರತಿ 10 ವರ್ಷಕ್ಕೆ ತಿದ್ದುಪಡಿ ಮಾಡಲು ಸೂಚಿಸಿದೆ

ಆಧಾರ್ ಕಾರ್ಡ್ ನೋಂದಣಿ ವೇಳೆ ನೀಡಿದ ವಿಳಾಸಕ್ಕೂ ಕಾರ್ಡ್ ಬಳಕೆದಾರ ಇರುವ ವಿಳಾಸಕ್ಕೂ ವ್ಯತ್ಯಾಸವಿದ್ದರೆ, ಸೂಕ್ತ ದಾಖಲೆ ನೀಡಿ ವಿಳಾಸ ಬದಲಾಯಿಸಿಕೊಳ್ಳಬೇಕು. ಇನ್ನು ಆಧಾರ್ ಕಾರ್ಡ್ ಬಳಕೆದಾರನ ಫೋಟೋ ಕೂಡ ಬದಲಿಸಬೇಕು. ಪ್ರತಿ 10 ವರ್ಷದ ಬಳಿಕ ಸೂಕ್ತ ಫೋಟೋ ಹಾಗೂ ಸೂಕ್ತ ಗುರುತಿನ ಚೀಟಿ ದಾಖಲೆ ನೀಡಬೇಕು. ಈ ಮೂಲಕ ಭಾರತೀಯರ ಆಧಾರ್ ಕಾರ್ಡ್‌ನಲ್ಲಿನ ದಾಖಲೆ ಹಾಗೂ ಬಳಕೆದಾರನ ಪ್ರಸ್ತುತ ದಾಖಲೆ ಪತ್ರ ತಾಳೆಯಾಗಬೇಕು ಅನ್ನೋದು ಕೇಂದ್ರದ ನಿಲುವಾಗಿದೆ. 

ವೋಟರ್ ಐಡಿಗೆ ಆಧಾರ್ ಲಿಂಕ್, ತಿಳಿದುಕೊಳ್ಳಬೇಕು ಚುನಾವಣಾ ಆಯೋಗದ ಹೊಸ ಅಭಿಯಾನ!

ಈಗಾಗಲೇ 10 ವರ್ಷ ಪೂರೈಸಿರುವ ಮಂದಿ ಹತ್ತಿರದ ಕೇಂದ್ರಕ್ಕೆ ತೆರಳಿ ಆಧಾರ್ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಮಾಡಲು ಕೇಂದ್ರ ಅವಕಾಶ ನೀಡಿದೆ. ಅಧಿಕೃತ ವೆಬ್‌ಸೈಟ್ ಮೂಲಕ ಸೂಕ್ತ ದಾಖಲೆ ಪತ್ರಗಳನ್ನು ಅಪ್ಲೋಡ್ ಮಾಡಿ ಆಧಾರ್ ತಿದ್ದುಪಡಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ಕಡ್ಡಾಯವಲ್ಲ
ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ತಿದ್ದುಪಡಿ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆಧಾರ್‌ ಕಾರ್ಡ್‌ ಮಾಡಿಸಿದ ದಿನದಿಂದ 10 ವರ್ಷ ಪೂರ್ಣಗೊಂಡ ಬಳಿಕ, ಗುರುತಿನ ಚೀಟಿ (ಹೆಸರು ಮತ್ತು ಫೋಟೋ ಇರುವ) ಮತ್ತು ವಿಳಾಸದ ಗುರುತಿನ ಮಾಹಿತಿಯನ್ನು (ಹೆಸರು ಮತ್ತು ವಿಳಾಸ) ಮತ್ತೊಮ್ಮೆ ಸಲ್ಲಿಕೆ ಮಾಡಿದರೆ, ಸೆಂಟ್ರಲ್‌ ಐಡೆಂಟಿಟೀಸ್‌ ಡಾಟಾ ರೆಪೊಸಿಟೊರಿ (ಸಿಐಡಿಆರ್‌)ನಲ್ಲಿ, ಆಧಾರ್‌ ಬಳಕೆದಾರರ ಮಾಹಿತಿಯನ್ನು ನಿಖರವಾಗಿ ಮುಂದುವರೆಸಿಕೊಂಡು ಹೋಗಬಹುದು ಎಂದು ಕೇಂದ್ರ ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಗೆಜೆಟ್‌ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವೋಟರ್‌ ಐಡಿಗೆ ಆಧಾರ್‌ ಲಿಂಕ್‌ಗೆ ಚಾಲನೆ, ಹೊಸ ಮತದಾರರ ಹೆಸರು ಸೇರ್ಪಡೆಗೆ ವರ್ಷಕ್ಕೆ 4 ಅವಕಾಶ!

ಕಳೆದ ತಿಂಗಳು ಕೂಡಾ ವಿಶಿಷ್ಟಗುರುತಿನ ಚೀಟಿ ಪ್ರಾಧಿಕಾರವು, ಆಧಾರ್‌ ಸಂಖ್ಯೆ ಪಡೆದ 10 ವರ್ಷಗೊಂಡವರು ಮತ್ತೊಮ್ಮೆ ನಿಮ್ಮ ದಾಖಲೆಗಳನ್ನು ಅಪ್‌ಡೇಟ್‌ ಮಾಡಿ ಎಂದು ಸಲಹೆ ನೀಡಿತ್ತು. ಅದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದು ಗ್ರಾಹಕರಿಗೆ ಮಾಹಿತಿ ಅಪ್‌ಡೇಟ್‌ಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಕಳೆದ ವರ್ಷ 16 ಕೋಟಿ ಜನರು ಆಧಾರ್‌ ದಾಖಲೆಗಳನ್ನು ಅಪ್‌ಡೇಟ್‌ ಮಾಡಿದ್ದರು.
 

click me!