ಇಸ್ಲಾಂ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಟೀಮ್ ರಚನೆ ಮಾಡಿದೆ. ಅಂದಾಜುನ ಪ್ರಕಾರ ದೇಶದಲ್ಲಿ 2022ರ ಪಿಎಫ್‌ಐ ಸಂಘಟನೆಗೆ ಕೊನೆಯ ವರ್ಷ ಎಂದು ಹೇಳಲಾಗಿದ್ದು, ಪಿಎಫ್‌ಐ ಕುರಿತಾದ ಸಕಲ ಮಾಹಿತಿಗಳನ್ನು ಕಲೆಹಾಕಲು ಜಂಟಿ ಆಕ್ಷನ್ ಟೀಮ್ ಅನ್ನು ರಚನೆ ಮಾಡಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು/ನವದೆಹಲಿ (ಆ.9): ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಗೆ ಲಗಾಮು ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. 2022 ಪಿಎಫ್‌ಐ ಪಾಲಿಗೆ ಕೊನೆಯ ವರ್ಷವಾಗಿರುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಇದಕ್ಕಾಗಿ ಜಂಟಿ ಆಕ್ಷನ್ ಟೀಮ್ ಅನ್ನು ಈಗಾಗಲೇ ರಚನೆ ಮಾಡಲಾಗಿದೆ. ಪಿಎಫ್‌ಐ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದ್ದರೂ, ಜಾರ್ಖಂಡ್ ಹೊರತುಪಡಿಸಿ ದೇಶದ ಇತರ ಯಾವ ರಾಜ್ಯದಲ್ಲಿ ಈ ಸಂಘಟನೆಯನ್ನು ನಿಷೇಧಿಸಲಾಗಿಲ್ಲ. ಆಅದರೆ, ಕರ್ನಾಟಕದಲ್ಲಿ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಕೇಂದ್ರದ ರಾಡಾರ್ ಮತ್ತೆ ಪಿಎಫ್‌ಐ ಮೇಲೆ ಬಿದ್ದಿದೆ. 5 ದಿನಗಳ ಹಿಂದೆ ಅಂದರೆ ಆಗಸ್ಟ್ 4 ರಂದು ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮದ ನಂತರ ಅಮಿತ್ ಶಾ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಪಿಎಫ್ಐ ಕುರಿತಾಗಿ ಸಕಲ ಮಾಹಿತಿಗಳನ್ನೂ ಕಲೆಹಾಕುವಂತೆ ರಾಜ್ಯ ಸರ್ಕಾರಕ್ಕೆ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆ ವರದಿ ಮಾಡಿದೆ.
ಈ ಸಭೆಯಲ್ಲಿ, ಪಿಎಫ್‌ಐ ಅನ್ನು ಮಟ್ಟಹಾಕಲು ಜಂಟಿ ಕ್ರಿಯಾ ಯೋಜನೆಯನ್ನು ತಯಾರಿಸಲು ನಿರ್ಧರಿಸಲಾಯಿತು. 3 ದಿನಗಳ ನಂತರ ಅಂದರೆ ಆಗಸ್ಟ್ 7 ರಂದು, ಯೋಜನೆಯಲ್ಲಿ ಕೆಲಸ ಮಾಡಲು ತಂಡವನ್ನು ಸಹ ರಚನೆ ಮಾಡಲಾಗಿದೆ. ಈ ತಂಡವು, ದೆಹಲಿ ಹಾಗೂ ಕರ್ನಾಟಕದ ಕೆಲವು ಉನ್ನತ ಅಧಿಕಾರಿಗಳು ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿದೆ. ಈ ಹಿಂದೆ ಇಂತಹ ಸೂಕ್ಷ್ಮ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾದ ದೇಶದಾದ್ಯಂತ ಇರುವ ಅಧಿಕಾರಿಗಳ ಪಟ್ಟಿಯನ್ನೂ ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ. ಈ ತಂಡವು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಎಲ್ಲಾ ಭಾಗಗಳಲ್ಲಿ ಪಿಎಫ್‌ಐ ವಿರುದ್ಧ 3 ರಂಗಗಳಲ್ಲಿ ಕೆಲಸ ಮಾಡುತ್ತದೆ. ಈ ತಂಡದ ಪ್ರಮುಖ ಕೆಲಸ, ಪಿಎಫ್‌ಐ ವಿರುದ್ಧ ಅಂತಹ ಗಟ್ಟಿಮುಟ್ಟಾದ ದಾಖಲೆಗಳನ್ನು ಸಂಗ್ರಹಿಸುವುದು, ಇದು ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅದರ ಕೆಟ್ಟ ವಿನ್ಯಾಸಗಳ ವಿರುದ್ಧ ಪುರಾವೆಗಳನ್ನು ಸಂಗ್ರಹಿಸುವುದಾಗಿದೆ. ಹಾಗೇನಾದರೂ, ಪಿಎಫ್‌ಐ ನಿಷೇಧದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದಲ್ಲಿ ಕೋರ್ಟ್‌ಗೆ ಸಲ್ಲಿಕೆ ಮಾಡುವ ದಾಖಲೆಗಳು ಯಾವ ಕಾರಣಕ್ಕೂ ತಿರಸ್ಕೃತವಾಗಬಾರದು ಅಂಥದ್ದೊಂದು ಗಟ್ಟಿಮುಟ್ಟಾದ ದಾಖಲೆಗಳ ಸಂಪುಟ ರಚಿಸುವಲ್ಲಿ ನಿರತವಾಗಿದೆ.
ದೂಸ್ರಾ ಮಾತಾಡಿದ್ರೆ ಕೈ ಕಟ್, ಇಲ್ದಿದ್ರೆ ಕೊಲೆ; ಸಾಮಾಜಿಕ ಸಂಘಟನೆ ಹೆಸರಿನ ಪಿಎಫ್‌ಐನ ಅಸಲಿ ಮುಖ!
ಮೂರು ಆಯಾಮದಲ್ಲಿ ಕೆಲಸ: ಜಂಟಿ ಆಕ್ಷನ್ ಟೀಮ್ ಒಟ್ಟು ಮೂರು ಆಯಾಮಗಳಲ್ಲಿ ಕೆಲಸ ಮಾಡುತ್ತದೆ. ಪಿಎಫ್‌ಐನ ನೆಟ್ವರ್ಕ್ ಅನ್ನು ಮ್ಯಾಪಿಂಗ್ ಮಾಡುವುದು. ಈ ಕೆಲಸ ಕರ್ನಾಟಕದಿಂದಲೇ ಪ್ರಾರಂಭವಾಗುತ್ತದೆ, ಆದರೆ ಪಿಎಫ್‌ಐ ಸಂಘಟನೆ ಜೊತೆ ಸಂಬಂಧ ಹೊಂದಿರುವ ದೇಶದ ಒಬ್ಬ ವ್ಯಕ್ತಿಯ ಮ್ಯಾಪಿಂಗ್ ಅನ್ನೂ ಕೂಡ ಇದರಲ್ಲಿ ಮಾಡಲಾಗುತ್ತದೆ. ಅದರೊಂದಿಗೆ ಪಿಎಫ್‌ಐಗೆ ಬರುವ ಹಣದ ಮೂಲ ಯಾವುದು, ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಏನೆಲ್ಲಾ ಇವೆ ಎನ್ನುವುದನ್ನು ಸಂಗ್ರಹಿಸಲಿದೆ. ಅದರೊಂದಿಗೆ ಇದೇ ತಂಡವು, ದೇಶದಲ್ಲಿ ಪಿಎಫ್‌ಐ ಸಂಘಟನೆ ಭಾಗಿಯಾದ ಗಲಭೆಗಳ ಘಟನೆಯ ಮಾಹಿತಿಗಳನ್ನು ಸಂಗ್ರಹ ಮಾಡಲಿದೆ.
ಸರ್ಕಾರದ ಮೇಲೆ ಹೆಚ್ಚಿದ ಒತ್ತಡ, ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಎಸ್‌ಡಿಪಿಐ, ಪಿಎಫ್‌ಐ.?
ಚುನಾವಣೆಗೂ ಮುನ್ನವೇ ಪಿಎಫ್‌ಐ ಬ್ಯಾನ್: ಪಿಎಫ್‌ಐ ವಿರುದ್ಧ ಮಾಹಿತಿ ಸಂಗ್ರಹಣೆಗೆ ಜಂಟಿ ಆಕ್ಷನ್ ಟೀಮ್‌ಗೆ ಯಾವುದೇ ಡೇಟ್‌ಲೈನ್ ನೀಡಲಾಗಿಲ್ಲ. ಆದರೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಪಿಎಫ್‌ಐ ಸಂಘಟನೆ ದೇಶದಲ್ಲಿ ಬ್ಯಾನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ಫೆಬ್ರವರಿ-ಮಾರ್ಚ್‌ನಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲುದೆ. ಇದನ್ನೂ ಕೂಡ ಕ್ರಿಯಾ ಯೋಜನೆ ವೇಳೆ ಚರ್ಚೆ ಮಾಡಲಾಗಿದೆ. ಹಾಗಾಗಿ ಚುನಾವಣೆಗೂ ಮುನ್ನ ಪಿಎಫ್‌ಐ ವಿರುದ್ಧ ಕೇಂದ್ರ ಕ್ರಮ ಕೈಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಪ್ರಕಾರ, ಪಿಎಫ್‌ಐ ಅನ್ನು ಪ್ರಸ್ತುತ ಜಾರ್ಖಂಡ್‌ನಲ್ಲಿ ಮಾತ್ರ ನಿಷೇಧಿಸಲಾಗಿದೆ. ಇದರ ವಿರುದ್ಧ ಪಿಎಫ್‌ಐ ಕೂಡ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಹಿಂದೆಯೂ ನಮ್ಮನ್ನು ನಿಷೇಧಿಸಲಾಗಿತ್ತು, ಆದರೆ ರಾಂಚಿ ಹೈಕೋರ್ಟ್ ನಿಷೇಧವನ್ನು ಆಗ ತೆಗೆದುಹಾಕಿತ್ತು. ಮತ್ತೊಮ್ಮ ಜಾರ್ಖಂಡ್‌ನಲ್ಲಿ ಬ್ಯಾನ್ ಮಾಡಲಾಗಿದ್ದು, ಶೀಘ್ರದಲ್ಲಿಯೇ ಇದು ತೆರವಾಗಬಹುದು ಎಂದು ಹೇಳಿದ್ದಾರೆ.