ಈ ಬಾರಿ ಗಣತಿ ಮಾಹಿತಿ ನೀವೇ ಆನ್‌ಲೈನಲ್ಲಿ ಸಲ್ಲಿಸಿ!

By Suvarna NewsFirst Published Mar 13, 2022, 9:23 AM IST
Highlights

* ಗಣತಿ ನಿಯಮಗಳಿಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ

* ಈ ಬಾರಿ ಗಣತಿ ಮಾಹಿತಿ ನೀವೇ ಆನ್‌ಲೈನಲ್ಲಿ ಸಲ್ಲಿಸಿ

ನವದೆಹಲಿ(ಮಾ.13): ಹತ್ತು ವರ್ಷಕ್ಕೊಮ್ಮೆ ನಡೆಯುವ ರಾಷ್ಟ್ರೀಯ ಜನಗಣತಿಯ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಮುಂಬರುವ ಜನಗಣತಿಯಲ್ಲಿ ದೇಶದ ಜನರು ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಈ ಹಿಂದಿನಂತೆ ಗಣತಿದಾರರು ಜನರ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯಲಿದೆ.

‘ಜನಗಣತಿ (ತಿದ್ದುಪಡಿ) ನಿಯಮಗಳು-2022’ಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ‘ಎಲೆಕ್ಟ್ರಾನಿಕ್‌ ಅರ್ಜಿ’ಗೂ ಭೌತಿಕ ಅರ್ಜಿಗೆ ಸಮಾನವಾದ ಮಾನ್ಯತೆ ನೀಡಲಾಗಿದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಾನುಸಾರ ಎಲೆಕ್ಟ್ರಾನಿಕ್‌ ರೂಪದಲ್ಲಿ ಸರ್ಕಾರ ಸ್ವೀಕರಿಸುವ ಜನಗಣತಿಯ ಮಾಹಿತಿಯು ಜನಗಣತಿದಾರರು ಭೌತಿಕವಾಗಿ ಸಂಗ್ರಹಿಸುವ ಮಾಹಿತಿಯಷ್ಟೇ ಅಧಿಕೃತವಾಗಿರುತ್ತದೆ. ಅದರಂತೆ ಜನರು ತಮ್ಮ ಮಾಹಿತಿಯನ್ನು ಗಣತಿಯ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಕೆ ಮಾಡಬಹುದಾಗಿದೆ.

Latest Videos

ದೇಶದಲ್ಲಿ 2021ರ ಜನಗಣತಿಯು 2020ರ ಏ.1ರಿಂದ ನಡೆಯಬೇಕಿತ್ತು. ಆದರೆ, ಕೊರೋನಾ ಕಾರಣದಿಂದ ನಡೆದಿಲ್ಲ. ಮುಂದೆ ಯಾವಾಗ ನಡೆಯುತ್ತದೆ ಎಂಬುದನ್ನು ಸರ್ಕಾರ ತಿಳಿಸಿಲ್ಲ. ಇನ್ನು, ಜನರು ಎಲೆಕ್ಟ್ರಾನಿಕ್‌ ರೂಪದಲ್ಲಿ ತಾವೇ ಗಣತಿಯ ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ಮೇಲೆ ಗಣತಿದಾರರು ಅವರ ಮನೆಗೆ ಭೇಟಿ ನೀಡಿ ಭೌತಿಕವಾಗಿ ಮಾಹಿತಿ ಪಡೆಯುತ್ತಾರೋ ಅಥವಾ ಜನರು ಸಲ್ಲಿಸಿದ ಎಲೆಕ್ಟ್ರಾನಿಕ್‌ ಅರ್ಜಿಯಲ್ಲಿರುವ ಮಾಹಿತಿಯೇ ಅಂತಿಮವೋ ಎಂಬುದನ್ನು ಸರ್ಕಾರ ತಿಳಿಸಿಲ್ಲ

click me!