
ಲಖನೌ(ಮಾ.13): ‘ಲಡ್ಕಿ ಹೂಂ, ಲಡ್ ಸಕ್ತಿಹೂಂ’ ಎಂಬ ಘೋಷವಾಕ್ಯದೊಂದಿಗೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಚುನಾವಣಾ ಕಣಕ್ಕಿಳಿದ 148 ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಸೋತಿದ್ದಾರೆ. ಜೊತೆಗೆ ಒಬ್ಬರನ್ನು ಹೊರತುಪಡಿಸಿ ಉಳಿದವರಾರಯರೂ 3000ಕ್ಕಿಂತ ಕಡಿಮೆ ಮತ ಪಡೆಯುವ ಮೂಲಕ ತಮ್ಮ ಠೇವಣಿಯನ್ನೂ ಕಳೆದುಕೊಂಡಿದ್ದಾರೆ.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಪಕ್ಷದ ಶೇ.40 ರಷ್ಟುಸೀಟುಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ 148 ಮಹಿಳೆಯರು ಚುನಾವಣಾ ಕಣಕ್ಕಿಳಿದಿದ್ದರು. ಈ ಪೈಕಿ ಆರಾಧನಾ ಮಿಶ್ರಾ ಮೋನಾರನ್ನು ಹೊರತು ಪಡಿಸಿ ಉಳಿದ ಎಲ್ಲ ಮಹಿಳೆಯರು ಸೋತಿದ್ದಾರೆ. ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ದೇವಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಮಹಿಳೆಯರಿಗೆ ಸುರಕ್ಷಿತ ವಾತಾವರಣ ಒದಗಿಸುವ ಭರವಸೆ ನೀಡಿ ಪ್ರಿಯಾಂಕಾ ಗಾಂಧಿ ಸ್ವತಃ ಪ್ರಚಾರ ರಾರಯಲಿ ನಡೆಸಿದರೂ ಆಶಾ ದೇವಿ ಕೇವಲ 1,555 ಮತ ಮಾತ್ರ ಪಡೆದಿದ್ದಾರೆ.
ಪಂಚ ರಾಜ್ಯ ಸೋಲಿನ ಹೊಣೆ ಹೊತ್ತು ಸೋನಿಯಾ, ರಾಹುಲ್, ಪ್ರಿಯಾಂಕಾ ರಾಜೀನಾಮೆ ಸಾಧ್ಯತೆ, ಕಾಂಗ್ರೆಸ್ ಗರಂ!
ಪಂಚ ರಾಜ್ಯಗಳ ಚುನಾವಣೆಯಲ್ಲಿ(Five State Election 2022) ಬಿಜೆಪಿ ನಾಲ್ಕು ರಾಜ್ಯ ಗೆದ್ದುಕೊಂಡರೆ, ಆಮ್ ಆದ್ಮಿ ಪಾರ್ಟಿ ಹೊಸದಾಗಿ ಮತ್ತೊಂದು ರಾಜ್ಯಕ್ಕೆ ವಿಸ್ತರಣೆಯಾಗಿದೆ. ಆದರ ಕಾಂಗ್ರೆಸ್(Congress) ಇದ್ದ ಅಧಿಕಾರವನ್ನೂ ಕಳೆದುಕೊಂಡಿತು, ಇನ್ನುಳಿದ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತಾಯಿತು. ಈ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕರು ನಾಳೆ(ಮಾ.13) ಸಭೆ ಸೇರಿ ಸೋಲಿನ ಕುರಿತು ಮಹತ್ವದ ಚರ್ಚೆ ನಡೆಸಲು ನಿರ್ಧರಿಸಿದೆ. ಪಂಚ ರಾಜ್ಯಗಳ ಸೋಲಿನ ಹೊಣೆ ಹೊತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿದೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ.
ಮಾರ್ಚ್ 13ರ ಸಂಜೆ 4 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಕಾಂಗ್ರೆಸ್ ಹಿರಿಯ ನಾಯಕರನ್ನೊಳಗೊಂಡ ಸಮಿತಿ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi), ನಾಯಕ ರಾಹುಲ್ ಗಾಂಧಿ(Rahul Gandhi) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಕೂಡ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2019ರಲ್ಲಿ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಸೋಲಿನ ಹೊಣೆ ಹಾಗೂ ಗಾಂಧಿ ನಾಯಕತ್ವ ವಿರುದ್ಧ ಅಸಮಾಧಾನ ಕಾರಣ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂದಿ ರಾಜೀನಾಮೆ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಊಹಾಪೋಹಗಳನ್ನು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ನಿರಾಕರಿಸಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ರಾಜೀನಾಮೆ ಸುದ್ದಿ ಆಧಾರ ರಹಿತವಾಗಿದೆ. ಈ ರೀತಿ ಯಾವುದೇ ನಿರ್ಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವ್ಯಕ್ತಿಯ ವಿಶಿಷ್ಠ ಶಪಥ: ಯೋಗಿ ಮತ್ತೆ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಗಡ್ಡಕ್ಕೆ ಕತ್ತರಿ
ಪಂಚ ರಾಜ್ಯಗಳ ಚುನಾವಣೆಗಳ ಸೋಲಿನ ಕಾರಣ, ಅದರಲ್ಲೂ ಮುಖ್ಯವಾಗಿ ಪಂಜಾಬ್ ಕಳೆದುಕೊಳ್ಳಲು ಕಾರಣವನ್ನು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ರಾಜಕೀಯ ಪಂಡೀತರು, ಜನಸಾಮಾನ್ಯರು ಸೇರಿದಂತೆ ಬಹುತೇಕರು ಕಾಂಗ್ರೆಸ್ ನಾಯಕತ್ವ ಕೊರತೆ ಎದುರಿಸುತ್ತಿದೆ ಎಂದಿದ್ದಾರೆ. ಹೀಗಾಗಿ ಮುಂಬರವು ಚುನಾವಣೆಗಳಲ್ಲಿ ಕಾಂಗ್ರೆಸ್ ಎದರಿಸಲು ಸೂಕ್ತ ನಾಯಕತ್ವ ನೀಡುವ ಕುರಿತು ಚರ್ಚೆಯಾಗಲಿದೆ.
ಉತ್ತರ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದ ಪ್ರಿಯಾಂಕಾ ವಾದ್ರಾ 403 ಸ್ಥಾನಗಳ ಪೈಕಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಶೇಕಡಾ 2.4 ರಷ್ಟು ಮತಗಳಿಕೆ ಪಡೆದಿದೆ. ಈ ಎಲ್ಲಾ ಅಂಶಗಳನ್ನು ಕಾಂಗ್ರೆಸ್ ಚರ್ಚಿಸಲಿದೆ. ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ಹಿರಿಯ ನಾಯಕರ ಗುಂಪು ಮತ್ತೆ ನಾಯಕತ್ವ ಬದಲಾವಣೆಗೆ ಸೂಚನೆ ನೀಡಿದೆ. ಹೀಗಾಗಿ ಗಾಂಧಿ ಪರಿವಾರ ಹೊರತು ಮತ್ತೊಬ್ಬ ಸೂಕ್ತ ನಾಯಕನಿಗೆ ಪಟ್ಟ ಕಟ್ಟುವ ಕುರಿತು ಕಾಂಗ್ರೆಸ್ ಚರ್ಚೆ ನಡೆಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ