Bipin Rawat Funeral: ಒಂದೇ ಚಿತೆಯಲ್ಲಿಟ್ಟು ರಾವತ್‌ ದಂಪತಿ ಅಂತ್ಯಸಂಸ್ಕಾರ: ಚಿತೆಗೆ ಪುತ್ರಿಯರಿಂದ ಅಗ್ನಿಸ್ಪರ್ಶ

By Manjunath Nayak  |  First Published Dec 11, 2021, 7:31 AM IST

*ಅಗಲಿದ ರಾವತ್‌, ಪತ್ನಿ, ಲಿಡ್ಡರ್‌ಗೆ ಭಾವುಕ ವಿದಾಯ
*17 ಗನ್‌ ಸಲ್ಯೂಟ್‌:  ಸಂಪೂರ್ಣ ಸೇನಾ ಗೌರವ ಸಮರ್ಪಣೆ
*ಅಂತ್ಯಸಂಸ್ಕಾರದಲ್ಲಿ 800 ಯೋಧರು ಭಾಗಿ
*ಸೂರ್ಯಚಂದ್ರ ಇರುವವರಗೆ ರಾವತ್‌ ಹೆಸರು
*ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಜನರಿಂದ ಉದ್ಘೋಷ‌
 


ನವದೆಹಲಿ(ಡಿ. 11) : ತಮಿಳುನಾಡಿನಲ್ಲಿ ನಡೆದ ಕಾಪ್ಟರ್‌ ದುರಂತದಲ್ಲಿ (IAF Chopper Crash) ಸಾವನ್ನಪ್ಪಿದ ಬಿಪಿನ್‌ ರಾವತ್‌ ದಂಪತಿಯ (General Bipin Rawat) ಪಾರ್ಥಿವ ಶರೀರಗಳನ್ನು ಒಂದೇ ಚಿತೆಯ ಮೇಲಿಟ್ಟು ಅಂತ್ಯಸಂಸ್ಕಾರ ಮಾಡಲಾಯಿತು. ದುರಂತದಲ್ಲಿ ಬಿಪಿನ್‌ ರಾವತ್‌ ಹಾಗೂ ಅವರ ಪತ್ನಿ ಮಧುಲಿಕಾ ರಾವತ್‌ (Madhulika Rawat) ಸೇರಿದಂತೆ 13 ಜನರು ಮರಣಹೊಂದಿದ್ದರು. ದೆಹಲಿಯ ಬ್ರಾರ್‌ ಚೌಕದಲ್ಲಿರುವ (Brar Square) ಚಿತಾಗಾರಲ್ಲಿ ರಾವತ್‌ ಅವರ ಪುತ್ರಿಯರು ಅಂತಿಮ ವಿಧಿವಿಧಾನವನ್ನು ಪೂರೈಸಿದರು. ಬಿಪಿನ್‌ ರಾವತ್‌ ಅವರು ದೇಶದ ಮೊದಲ ಸಿಡಿಎಸ್‌ (CDS) ಆಗಿದ್ದು ಅವರ ಅಂತ್ಯ ಸಂಸ್ಕಾರವನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಯಿತು.

ರಾವತ್‌, ಪತ್ನಿ ಚಿತೆಗೆ ಪುತ್ರಿಯರಿಂದ ಅಗ್ನಿಸ್ಪರ್ಶ

Tap to resize

Latest Videos

ತಮಿಳುನಾಡಿನಲ್ಲಿ ಕಾಪ್ಟರ್‌ ಅಪಘಾತದಲ್ಲಿ ಸಾವನ್ನಪ್ಪಿದ ಸಶಸ್ತ್ರಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ರಾವತ್‌ ಅವರ ಅಂತ್ಯಕ್ರಿಯೆಯನ್ನು ಅವರ ಇಬ್ಬರು ಪುತ್ರಿಯರೇ ನೆರವೇರಿಸಿದರು. ಬ್ರಾರ್‌ ಸ್ಕ್ವೇರ್ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ವಿಧಿಗಳು ಪೂರ್ಣಗೊಂಡ ಬಳಿಕ ಪುತ್ರಿಯರಾದ ಕೃತ್ತಿಕಾ ಮತ್ತು ತಾರಿಣಿ ಮತ್ತು ಪೋಷಕರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಚಿತೆಯ ಸುತ್ತ ಪ್ರದಕ್ಷಿಣೆ ಹಾಕಿ ತುಪ್ಪ ಸುರಿದು ಅಗ್ನಿಸ್ಪರ್ಶ ಮಾಡಿದ ಅವರು ಸಂಪ್ರದಾಯ ಪಾಲಿಸಿದರು. ಈ ವೇಳೆ ನೆರೆದವರ ಕಣ್ಣಲ್ಲಿ ನೀರು ಬಂತು. ಭಾವುಕ ಜನರು ರಾವತ್‌ ಪರ ಜೈಘೋಷ ಹಾಕಿದರು.ಶನಿವಾರ ಅಸ್ಥಿಗಳನ್ನು ಸಂಗ್ರಹಿಸಿ ಹರಿದ್ವಾರದ ಗಂಗಾನದಿಯಲ್ಲಿ ವಿಸರ್ಜಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಅಗಲಿದ ರಾವತ್‌, ಪತ್ನಿ, ಲಿಡ್ಡರ್‌ಗೆ ಭಾವುಕ ವಿದಾಯ

ತಮಿಳುನಾಡಿನ ಕೂನೂರು ಬಳಿ ಡಿ.8ರಂದು ಹೆಲಿಕಾಪ್ಟರ್‌ ಅಪಘಾತದಲ್ಲಿ ಸಾವನ್ನಪ್ಪಿದ ಸಶಸ್ತ್ರಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಖಾ ರಾವತ್‌ ಅವರ ಅಂತಿಮ ಸಂಸ್ಕಾರ ವಿಧಿಗಳು ಶುಕ್ರವಾರ  ಸಕಲ ಸೇನಾ ಗೌರವಗಳೊಂದಿಗೆ ನಡೆಯಿತು. ಬ್ರಾರ್‌ ಸ್ಕ್ವೇರ್ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ವಿಧಿಗಳು ಪೂರ್ಣಗೊಂಡ ಬಳಿಕ ಪುತ್ರಿಯರಾದ ಕೃತ್ತಿಕಾ ಮತ್ತು ತಾರಿಣಿ ಮತ್ತು ಪೋಷಕರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದಕ್ಕೂ ಮುನ್ನ ಬೆಳಗ್ಗೆ ರಾವತ್‌ ಅವರ ಸಲಹೆಗಾರರಾಗಿದ್ದ ಬ್ರಿಗೇಡಿಯರ್‌ ಲಿಡ್ಡರ್‌ ಅವರ ಅಂತ್ಯಕ್ರಿಯೆ ಕೂಡ ಶೋಕತಪ್ತ ವಾತಾವರಣದಲ್ಲಿ ನೆರವೇರಿತು.

IAF Chopper Crash: ಸಾವು ಸಂಭ್ರಮಿಸಿ ಬೇಕಾಬಿಟ್ಟಿಪೋಸ್ಟ್‌ ಹಾಕಿದವರಿಗೆ ಸಿಎಂ ಖಡಕ್‌ ಎಚ್ಚರಿಕೆ

ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಕೇಂದ್ರ ಸಚಿವರಾದ ಕಿರಣ್‌ ರಿಜಿಜು, ಫ್ರಾನ್ಸ್‌, ಬ್ರಿಟನ್‌ ರಾಯಭಾರಿಗಳು ಮತ್ತು ಹಲವು ದೇಶಗಳು ರಕ್ಷಣಾ ಅಧಿಕಾರಿಗಳು ಜ.ರಾವತ್‌ ಮತ್ತು ಮಧುಲಿಕಾಗೆ ಅಂತಿಮ ನಮನ ಸಲ್ಲಿಸಿದರು. ಚಿತೆಗೆ ಅಗ್ನಿಸ್ಪರ್ಶಕ್ಕೂ ಮುನ್ನ 17 ಗನ್‌ ಸಲ್ಯೂಟ್‌ ಮೂಲಕ ಸೇನಾ ಗೌರವ ಸಲ್ಲಿಸಲಾಯ್ತು. ಜೊತೆಗೆ ಜ.ರಾವತ್‌ ಮನೆಯಿಂದ ಬ್ರಾರ್‌ ಸ್ಕ್ವೇರ  ಚಿತಾಗಾರದವರೆಗೆ ನಡೆದ ಮೆರವಣಿಗೆ ವೇಳೆ 800 ಸೇನಾ ಸಿಬ್ಬಂದಿಗಳು ಭಾಗಿಯಾಗುವ ಮೂಲಕ ದೇಶ ಕಂಡ ಅಪ್ರತಿಮ ಯೋಧನಿಗೆ ವಿಶೇಷ ಗೌರವ ಸಲ್ಲಿಸಿದರು. ಅಂತಿಮ ಯಾತ್ರೆ ನಡೆದ ದಾರಿಯುದ್ದಕ್ಕೂ ಎಲ್ಲಿಯವರೆಗೆ ಸೂರ್ಯಚಂದ್ರ ಇರುವರೋ ಅಲ್ಲಿಯವರೆಗೂ ರಾವತ್‌ ಹೆಸರು ಇರಲಿದೆ ಎಂಬ ಘೋಷಣೆಗಳು ಮೊಳಗಿದವು.

ಮನೆಯಲ್ಲಿ ಅಂತಿಮ ದರ್ಶನ:

ಶುಕ್ರವಾರ ಬೆಳಗ್ಗೆ ಕಾಮರಾಜ್‌ ಮಾರ್ಗ್‌ನಲ್ಲಿರುವ ಮನೆಯಲ್ಲಿ ಜ.ರಾವತ್‌ ಮತ್ತು ಮಧುಲಿಕಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಾರ್ವಜನಿಕರು, ಗಣ್ಯರು ಅಂತಿಮ ದರ್ಶನ ಪಡೆದುಕೊಂಡರು. ಮನೆಯ ಬಳಿಯೂ ಭಾರತ್‌ ಮಾತಾ ಕೀ ಜೈ, ಜನರಲ್‌ ರಾವತ್‌ ಅಮರ್‌ ರಹೇ, ಉತ್ತರಾಖಂಡದ ವಜ್ರ ಅಮರವಾಗಿರಲಿ ಎಂಬ ಘೋಷಣೆಗಳು ಕೇಳಿಬಂದವು.

click me!