ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸ್ತಿದ್ದ ಜಡ್ಜ್ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

By Suvarna NewsFirst Published Jul 29, 2021, 3:05 PM IST
Highlights

* ಜಾರ್ಖಂಡ್‌ನ ಧನ್ಬಾದ್ ಜಿಲ್ಲೆಯಲ್ಲಿ, ದುಷ್ಕರ್ಮಿಗಳ ಅಟ್ಟಹಾಸ

* ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸ್ತಿದ್ದ ಜಡ್ಜ್ ಕೊಲೆ

* ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಕೊಲೆ

* ಸುಪ್ರೀಂ ಕೋರ್ಟ್‌ನಲ್ಲೂ ಸದ್ದು ಮಾಡಿದ ಪ್ರಕರಣ

ರಾಂಚಿ(ಜು.29) ಜಾರ್ಖಂಡ್‌ನ ಧನ್ಬಾದ್ ಜಿಲ್ಲೆಯಲ್ಲಿ, ದುಷ್ಕರ್ಮಿಗಳ ಅಟ್ಟಹಾಸ ಅದೆಷ್ಟು ಹೆಚ್ಚಿದೆ ಎಂದರೆ ಹಾಡಹಗಲೇ ಕೊಲೆಗಳಾಗಲಾರಂಭಿಸಿವೆ. ಸದ್ಯ ಇಲ್ಲಿಂದ ಜಿಲ್ಲಾ ನ್ಯಾಯಾಧೀಶ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಕೊಂದು ಪರಾರಿಯಾಗಿದ್ದಾರೆ. ಈ ವಿಚಾರ ದೆಹಲಿಯ ಸುಪ್ರೀಂ ಕೋರ್ಟ್‌ ತಲುಪಿದ್ದು, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕಾಸ್ ಸಿಂಗ್, ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ತನಿಖೆ ನಡೆಸಬೇಕೆಂದು ಹೈಕೋರ್ಟ್‌ಗೆ ಒತ್ತಾಯಿಸಿದ್ದಾರೆ.

ಪ್ಲಾನ್‌ ಮಾಡಿ ಆಟೋ ತಾಗಿಸಿ ಕೊಲೆ

ವಾಸ್ತವವಾಗಿ, ನ್ಯಾಯಾಧೀಶ ಉತ್ತಮ್ ಆನಂದ್ ಅವರು ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಧನ್ಬಾದ್‌ನ ರಣಧೀರ್ ವರ್ಮಾ ಚೌಕ್‌ನಲ್ಲಿ ವಾಕ್ ಮಾಡಲು ತೆರಳಿದ್ದರು. ಅಷ್ಟರಲ್ಲಿ ಮುಂಭಾಗದಿಂದ ಬರುತ್ತಿದ್ದ ಆಟೋ ಆನಂದ್‌ಗೆ ಬಡಿದು ಹೋಗೊದೆ. ಇದೇ ವೇಳೆ ಈ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಅಪಘಾತವಲ್ಲ, ಪೂರ್ವನಿಯೋಜಿತ ಕೃತ್ಯ ಎಂಬುವುದು ಸಾಬೀತಾಗಿದೆ. ಸದ್ಯ ತನಿಖೆ ಆರಂಭಿಸಿರುವ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. 

40ರ ಪತ್ನಿಯ 45ರ ಬಾಯ್ ಫ್ರೆಂಡ್ ಮರ್ಮಾಂಗಕ್ಕೆ ಶೂಟ್ ಮಾಡಿದ 46ರ ಪತಿರಾಯ!

ಅನೇಕ ಹೈಪ್ರೊಫೈಲ್ ಪ್ರಕರಣಗಳ ವಿಚಾರಣೆ

ನ್ಯಾಯಾಧೀಶ ಉತ್ತಮ್ ಆನಂದ್ ಹಲವಾರು ಉನ್ನತ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದರೆಂಬುವುದು ಉಲ್ಲೇಖನೀಯ. ಇತ್ತೀಚೆಗಷ್ಟೇ ಮಾಜಿ ಶಾಸಕರ ಆಪ್ತರಾಗಿದ್ದ ರಂಜಯ್ ಕೊಲೆ ಪ್ರಕರಣದಂತಹ ಹಲವಾರು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಅಲ್ಲದೇ ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದರು. ಹೀಗಿರುವಾಗಲೇ ಈ ಘಟನೆ ಸಂಭವಿಸಿದ್ದು, ಆಟೋ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ ಎಂದು ಮೃತ ನ್ಯಾಯಾಧೀಶರ ತಂದೆ ಸದಾನಂದ್ ಪ್ರಸಾದ್ ಹೇಳಿದ್ದಾರೆ.

 ಕೆಲವು ದಿನಗಳ ಹಿಂದೆ ನನ್ನ ಮಗನಿಗೆ ಓರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ, ಬಹುಶಃ ಅವರೇ ನನ್ನ ಮಗನ ಹಿಂದೆ ಹೋಗಿದ್ದಾರೆ ಎಂದೂ ಅವರ ತಂದೆ ಆರೋಪಿಸಿದ್ದಾರೆ. ಮತ್ತೊಂದೆಡೆ, ಆನಂದ್ ಅವರ ಸಹೋದರ ಸುಮನ್ ಶಂಭು ಶಿಕ್ಷೆಗೀಡಾಗಿದ್ದ ಆರೋಪಿಗಳು ಖುನ್ನಾಸ್ ಅಡಿಯಲ್ಲಿ ಸಹೋದರನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಏಕೆಂದರೆ ಈ ಎರಡು ಪ್ರಕರಣಗಳಲ್ಲಿ ಇಬ್ಬರು ಸಹೋದರರು ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಸದ್ಯ ಆನಂದ್‌ರವರ ಕುಟುಂಬ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ.

ಅತ್ಯಾಚಾರದ ದೂರು ಕೊಡಲು ಬಂದ ಬಾಲಕಿಗೆ ಪೊಲೀಸ್ ಠಾಣೆಯಲ್ಲೇ ಹೆರಿಗೆ

ಕದ್ದ ಆಟೋ ಬಳಸಿ ಕುಕೃತ್ಯ

ಪೊಲೀಸರು ಸೂಕ್ಷ್ಮವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನ್ಯಾಯಾಧೀಶರಿಗೆ ಡಿಕ್ಕಿ ಹೊಡೆದುಕೊಲೆಗೈದ ಆಟೋ ಕದ್ದ ಆಟೋ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಆಟೋವನ್ನು ಪಥಾರ್ದಿಹ್ ನಿವಾಸಿ ಸುಗ್ನಿ ದೇವಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಪೊಲೀಸರು ಆತನೊಂದಿಗೆ ಮಾತನಾಡಿದಾಗ, ಒಂದು ದಿನದ ಹಿಂದೆ ಆತನ ಆಟೋ ಕಳವಾಗಿದೆ ಎಂದು ಹೇಳಿದ್ದಾರೆ. ಜಿಲ್ಲೆಯ ಎಲ್ಲ ದರೋಡೆಕೋರರು ಮತ್ತು ದುಷ್ಕರ್ಮಿಗಳನ್ನು ಪೊಲೀಸರು ಕಟ್ಟುನಿಟ್ಟಾಗಿ ವಿಚಾರಣೆ ನಡೆಸುತ್ತಿದ್ದಾರೆ

click me!