
ನವದೆಹಲಿ (ಮೇ 30, 2023): ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳಿಗೆ ತನ್ನ ಕಂಪನಿಯ ಹಾಕ್ 115 ತರಬೇತಿ ಯುದ್ಧ ವಿಮಾನಗಳ ಪೂರೈಕೆ ಗುತ್ತಿಗೆ ಪಡೆಯಲು ಲಂಚ ನೀಡಿದ ಆರೋಪದ ಪ್ರಕರಣದಲ್ಲಿ ಬ್ರಿಟನ್ ಮೂಲದ ರೋಲ್ಸ್‌ರಾಯ್ಸ್‌ನ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. 2017ರಲ್ಲಿ ಬ್ರಿಟನ್‌ನ ನ್ಯಾಯಾಲಯ ಗುತ್ತಿಗೆಯಲ್ಲಿ ಹಣ ಕೈಬದಲಾಗಿರುವುದನ್ನು ಪ್ರಸ್ತಾಪಿಸಿದ ಬಳಿಕ 6 ವರ್ಷ ತನಿಖೆ ನಡೆಸಿದ್ದ ಸಿಬಿಐ ಇದೀಗ ಎಫ್‌ಐಆರ್ ದಾಖಲಿಸಿದೆ.
ಏನಿದು ಪ್ರಕರಣ?:
2003ರಲ್ಲಿ ಭಾರತೀಯ ವಾಯುಪಡೆ ಮತ್ತು ನೌಕಾಪಡೆಗೆ 24 ಹಾಕ್ ತರಬೇತಿ ವಿಮಾನ ಖರೀದಿಗೆ ರೋಲ್ಸ್‌ರಾಯ್ಸ್ ಜೊತೆ 5633 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜೊತೆಗೆ ಭಾರತದಲ್ಲೇ ಎಚ್‌ಎಎಲ್ ಮುಲಕ 42 ವಿಮಾನ ನಿರ್ಮಾಣ ಮಾಡಲು ಅಗತ್ಯ ಲೈಸೆನ್ಸ್‌ಗಾಗಿ 1944 ಕೋಟಿ ರೂ. ನೀಡಲು ಸಮ್ಮತಿಸಲಾಗಿತ್ತು.
ಇದರಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಲಂಚ ನೀಡುವಂತಿಲ್ಲ ಎಂದು ಒಪ್ಪಂದದಲ್ಲಿ ಹೇಳಲಾಗಿತ್ತು. ಇದರ ಹೊರತಾಗಿಯೂ ಬ್ರಿಟನ್‌ನ ಕಂಪನಿ, ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ್ದ ವಿಷಯ 2012ರಲ್ಲಿ ಬೆಳಕಿಗೆ ಬಂದು ಆ ಕುರಿತು ಬ್ರಿಟನ್‌ನಲ್ಲಿ ತನಿಖೆ ನಡೆದಿತ್ತು. ಈ ವೇಳೆ 2006ರಲ್ಲಿ ಭಾರತದಲ್ಲಿ ಮಧ್ಯವರ್ತಿಗಳಿಗೆ ಲಂಚ ನೀಡಿದ್ದು ದಾಖಲೆಗಳಲ್ಲಿ ಪತ್ತೆಯಾಗಿತ್ತು. ಅಲ್ಲದೆ ಈ ಕುರಿತು ಭಾರತದಲ್ಲಿ ತನಿಖೆ ನಡೆಸದಂತೆ ತೆರಿಗೆ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳಿಗೆ ಲಂಚ ನೀಡಿದ್ದೂ ಕಂಡುಬಂದಿತ್ತು.
ಇದನ್ನು ಓದಿ: Breaking ಡಿಕೆಶಿ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರವೀಣ್ ಸೂದ್ ಈಗ ಸಿಬಿಐ ನಿರ್ದೇಶಕರು: 2 ವರ್ಷಗಳ ಕಾಲ ನೇಮಕ
ಈ ಹಿನ್ನೆಲೆಯಲ್ಲಿ 6 ವರ್ಷಗಳ ಹಿಂದೆ ಪ್ರಕರಣ ದಾಖಲಿಸಿದ್ದ ಸಿಬಿಐ, ಇದೀಗ ರೋಲ್ಸ್‌ರಾಯ್ಸ್ ಭಾರತ ಘಟಕದ ನಿರ್ದೇಶಕ ಟಿಮ್ ಜೋನ್ಸ್, ಮಧ್ಯವರ್ತಿಗಳಾದ ಸುಧೀರ್ ಮತ್ತು ಭಾನು ಚೌಧರಿ ವಿರುದ್ಧ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ಮುಂದಿನ ಸಿಬಿಐ ನಿರ್ದೇಶಕರಾಗಿ ಕ್ರಿಕೆಟಿಗ ಮಯಾಂಕ್ ಅಗರ್‌ವಾಲ್ ಮಾವ ಪ್ರವೀಣ್ ಸೂದ್ ಆಯ್ಕೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ