
ಕೋಲ್ಕತಾ (ಫೆ.27) ಸಿಟಿ ಆಫ್ ಜಾಯ್ ಎಂದೇ ಖ್ಯಾತಿಗೊಂಡಿರುವ ಕೋಲ್ಕಾತ ನಗರದಲ್ಲಿ ಜನರು ಇಂದು ಅಕ್ಷರಶಃ ಆಂತಕಗೊಂಡಿದ್ದಾರೆ. ಇವರ ಆತಂಕ ಇನ್ನು ತಗ್ಗಿಲ್ಲ. ಕಾರಣ ಕೋಲ್ಕತಾದಲ್ಲಿ ಇಂದು 4.9ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಮೊದಲು ಬಾಂಗ್ಲಾದೇಶದಲ್ಲಿ ಭೂಕಂಪನವಾಗಿತ್ತು. ಇದರ ಕಂಪನ ಕೋಲ್ಕತಾದಲ್ಲೂ ಆಗಿದೆ. ರಿಕ್ಟರ್ ಮಾಪನದಲ್ಲಿ 4.9ರ ತೀವ್ರತೆ ದಾಖಲಾಗಿದೆ. ಭೂಮಿ ಕಂಪಿಸುತ್ತಿದ್ದಂತೆ ಕೋಲ್ಕಾತಾ ನಗರದ ಜನರು ಕಟ್ಟಡಗಳು, ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ಹೊರಬದಿದ್ದಾರೆ. ಇತ್ತ ಕೋಲ್ಕತಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸುಕಾಂತ ಮಜುಮ್ದಾರ್ ಭಾಷಣ ಮಾಡುತ್ತಿದ್ದಂತೆ ಭೂಕಂಪನವಾಗಿದೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕೋಲ್ಕತಾದಲ್ಲಿ ಕೇಂದ್ರದ ರಾಜ್ಯ ಖಾತೆ ಸಚಿವ ಸುಕಾಂತ ಮುಜುಮ್ದಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ಕಾರ್ಯಕ್ರಮಗಳಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಉದ್ಘಾಟನೆ, ಪ್ರಾಸ್ತಾವಿಕ ಮಾತುಗಳು ಮುಗಿದ ಬಳಿಕ ಸುಕಾಂತ ಮಜುಮ್ದಾರ್ ಭಾಷಣ ಮಾಡಲು ಆರಂಭಿಸಿದ್ದರು. ಆದರೆ ಸುಕಾಂತ ಮುಜುಮ್ದಾರ್ ಭಾಷಣ ಮಾಡುತ್ತಿದ್ದಂತೆ ಭೂಕಂಪನವಾಗಿದೆ. ಭೂಮಿ ಕಂಪಿಸಿದೆ. ವೇದಿಕೆ ಅಲುಗಾಡಿದೆ. ನೆರೆದಿದ್ದ ಜನತೆ, ಪತ್ರಕರ್ತರು, ಗಣ್ಯರು ಆತಂಕಗೊಂಡಿದ್ದಾರೆ. ಭೂಕಂಪನ ಅನುಭವಾಗುತ್ತಿದೆ ಎಂದು ನೆರೆದಿದ್ದವರು ಸೂಚಿಸಿದ್ದಾರೆ.
ಭೂಮಿ ಕಂಪಿಸುತ್ತಿದೆ ಎಂದು ಹಲವರು ಆತಂಕಗೊಂಡಿದ್ದಾರೆ. ಇದೇ ವೇಳೆ ಸುಕಾಂತ ಮಜುಮ್ದಾರ್ ನಾನು ಭಾಷಣ ನಿಲ್ಲಿಸಲೇ ಎಂದು ಕೇಳಿದ್ದಾರೆ. ದಯವಿಟ್ಟು ಭಾಷಣ ನಿಲ್ಲಿಸಿ ಎಂದು ಕೆಲವರು ಹೇಳಿದ್ದಾರೆ. ವೇದಿಕೆ ಸುತ್ತ ಇದ್ದ ಕ್ಯಾಮೆರಾಗಳು ಅಲುಗಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ. ಇತ್ತ ಇಡೀ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೆಲ ಹೊತ್ತಿನಲ್ಲೇ ಎಚ್ಚರಿಕೆ ಸಂದೇಶವೂ ಬಂದಿತ್ತು.
ಹಲವು ಕಟ್ಟಡಗಳು ಅಲುಗಾಡಿದೆ. ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಲಘು ಭೂಕಂಪನ ಆತಂಕ ಹೆಚ್ಚಿಸಿದೆ. ಇತ್ತೀಚೆಗೆ ಅಸ್ಸಾಂನಲ್ಲೂ ಲಘು ಭೂಕಂಪನವಾಗಿತ್ತು. ಬಾಂಗ್ಲಾದೇಶದಲ್ಲೂ ಲಘು ಭೂಕಂಪನವಾಗಿದೆ. ಹೀಗಾಗಿ ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಭೂಕಂಪನ ಅನುಭವ ಹಾಗೂ ಆತಂಕ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ