ಡ್ರಿಂಕ್ ಅಂಡ್ ಡ್ರೈವ್ ಬಿಡಿ, ಕುಡಿದು ಸಿಕ್ಕಾಕಂಡ್ರೆ ಅಷ್ಟೆ ಕತೆ! ಇಲ್ಲಿ ನೋಡಿ

Published : Oct 18, 2019, 06:41 PM ISTUpdated : Oct 18, 2019, 06:44 PM IST
ಡ್ರಿಂಕ್ ಅಂಡ್ ಡ್ರೈವ್ ಬಿಡಿ, ಕುಡಿದು ಸಿಕ್ಕಾಕಂಡ್ರೆ ಅಷ್ಟೆ ಕತೆ! ಇಲ್ಲಿ ನೋಡಿ

ಸಾರಾಂಶ

ಈ ಗ್ರಾಮದಲ್ಲಿ ಕುಡಿದು ಸಿಕ್ಕಿಬಿದ್ದರೆ ಬಾಡೂಟ ಹಾಕಿಸಬೇಕು/ ಗುಜರಾತ್ ನ ಹಳ್ಳಿಯೊಂದರಲ್ಲಿ ಕಟ್ಟುನಿಟ್ಟಿನ ಕಾನೂನು/ ಕುಡಿತದ ದುಷ್ಪರಿಣಾಮ ಅರಿತ ಹಿರಿಯರು ಜಾರಿ ಮಾಡಿದ್ದ ಕಾನೂನು

ಅಹಮದಾಬಾದ್(ಅ.18)  ಈ ಗ್ರಾಮದಲ್ಲಿ ಒಂದು ವಿಶಿಷ್ಟ ಕಾನೂನು ಜಾರಿಯಲ್ಲಿದೆ. ಎಣ್ಣೆ ಹೊಡೆದು ಸಿಕ್ಕಿಹಾಕಿಕೊಂಡರೆ ಇಡೀ ಗ್ರಾಮಕ್ಕೆ ಮಟನ್ ಪಾರ್ಟಿ ಕೊಡಿಸಬೇಕು! ಅಲ್ಲದೇ ಸ್ಥಳದಲ್ಲಿಯೇ ಎರಡು ಸಾವಿರ ರೂ. ದಂಡವನ್ನು ತೆರಬೇಕಾಗುತ್ತದೆ. ಅಲ್ಲಿಗೆ ಮಟನ್ ಪಾರ್ಟಿಗೆ ಒಂದು 25 ಸಾವಿರ ಕೈ ಬಿಡುವುದು ನಿಶ್ಚಿತ!

ಗುಜರಾತ್ ಬನಾಸ್ ಕಂಥಾ ಜಿಲ್ಲೆಯ ಅಮಿರ್ ಘಡದ ಖಟಿಸಿಸ್ತಾರಾ ಗ್ರಾಮದಲ್ಲಿ ಇಂಥದ್ದೊಂದು ನಿಯಮ ಜಾರಿಯಲ್ಲಿದೆ. ಆಲ್ಕೋಹಾಲ್ ಗ್ರಾಮಕ್ಕೆ ಒಂದು ಪಿಡುಗಾಗಿ ಪರಿಣಮಿಸುತ್ತಿದ್ದುದ್ದನ್ನು ಮನಗಂಡ ಗ್ರಾಮದ ಹಿರಿಯರು 2013-14 ರಲ್ಲಿ ಮದ್ಯಸೇವನೆ ಮಾಡುವವರಿಗೆ ದಂಡ ಹಾಕುವ ಕಾನೂನು ಜಾರಿ ಮಾಡಿದರು. ಮದ್ಯದ ಅಮಲಿನಲ್ಲಿ ನಡೆದ ಗಲಾಟೆಗಳು, ಕೊಲೆ ಈ ಕಾನೂನು ಜಾರಿ ಮಾಡಲು ಕಾರಣವಾಯಿತು.

ಕುಡಿದು ಗಾಡಿ ಓಡಿಸಿದ್ರೆ ನಿಮ್ಮ ಕಚೇರಿಗೂ ನೋಟಿಸ್ ಬರುತ್ತೆ!

ಕುಡಿದವರಿಗೆ ಮೊದಲಿಗೆ ಎರಡು ಸಾವಿರ ರೂ. ದಂಡ ಹಾಕಲಾಗುತ್ತದೆ. ಕುಡಿತದ ಪ್ರಮಾಣ ಎಷ್ಟಿದೆ ಎಂಬುದರ ಮೇಲೆ ಈ ದಂಡ 5 ಸಾವಿರ ರೂ. ವರೆಗೂ ವಿಸ್ತಾರಗೊಳ್ಳಬಹುದು. ಇದರ ಜತೆಗೆ ಗ್ರಾಮದಲ್ಲಿ ವಾಸವಿರು 700-800 ಜನರಿಗೆ ಸಿಕ್ಕಿಹಾಕಿಕೊಂಡವ ಬಾಡೂಟ ಹಾಕಿಸಬೇಕಾಗುತ್ತದೆ.  ಈ ಕಾನೂನು ಜಕಾರಿಯಾದ ಮೇಲೆ ಕುಡುಕರ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಹಳ್ಳಿಯ ಸರಪಂಚ್ ಕಿಮ್ ಜಿ ದುಂಗಾಸೀಯಾ ಹೇಳುತ್ತಾರೆ.

2018ರಲ್ಲಿ ಸಿಕ್ಕಿಉಬಿದ್ದವ!

2018ರಲ್ಲಿ ಕೇವಲ ಒಬ್ಬನೇ ಒಬ್ಬ ವ್ಯಕ್ತಿ ಕುಡಿದು ಸಿಕ್ಕಿಬಿದ್ದಿದ್ದ. ಇದಕ್ಕೂ ಮೊದಲಿನ ವರ್ಷದಲ್ಲಿ ಮೂರರಿಂದ ನಾಲ್ಕು ಜನ ಸಿಕ್ಕಿಹಾಕಿಕೊಳ್ಳುತ್ತಿದ್ದರು.  ಈ ವರ್ಷದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ಕುಡಿದು ಗಲಾಟೆ ಮಾಡುತ್ತಿದ್ದ ನಾನ್ಜಿ ದುಂಗಾಸೀಯಾ ಕೊನೆಯದಾಗಿ ಸಿಕ್ಕಿಬಿದ್ದವ. ಆದರೆ ಈತ  ಈ ಗ್ರಾಮದ ವ್ಯಕ್ತಿ ಆಗಿರಲಿಲ್ಲ. 

ಈ ಗ್ರಾಮದ ಕಟ್ಟುನಿಟ್ಟಿನ ಕ್ರಮದ ನಂತರ ಪಕ್ಕದ ಉಪಾಲಾ ವಿಲೇಜ್ ಜನರು ಸಹ ಮದ್ಯ ಖರೀದಿ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!