'ಪೋಸ್ ಕಡಿಮೆ ಕೊಡಿ, ಕೆಲ್ಸ  ಜಾಸ್ತಿ ಮಾಡಿ' ಮೋದಿಗೆ ಸಲಹೆ ಕೊಟ್ರು ನೋಡಿ!

By Web DeskFirst Published Oct 15, 2019, 5:30 PM IST
Highlights

ಪ್ರಧಾನಿ ನರೇಂದ್ರ ಮೋದಿಯವರೇ, ಪೋಟೋಗೆ ಪೋಸ್ ಕೊಡುವುದನ್ನು ಕಡಿಮೆ ಮಾಡಿ/ ಮೋದಿಗೆ ಸಲಹೆ ಕೊಟ್ಟ ಹಿರಿಯ ಕಾಂಗ್ರೆಸ್ ನಾಯಕ/ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಅವರ ಮಾತು ಮತ್ತೆ ನೆನಪಿಸಿದ ಕೈ ನಾಯಕ

ನವದೆಹಲಿ(ಅ. 15) 'ಪ್ರಧಾನಿ ನರೇಂದ್ರ ಮೋದಿಯವರೇ, ಪೋಟೋಗೆ ಪೋಸ್ ಕೊಡುವುದನ್ನು ಕಡಿಮೆ ಮಾಡಿ, ಕೆಲಸ ಮಾಡಿ'  ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಹಿರಿಯ ನಾಐಕ ಕಪಿಲ್ ಸಿಬಲ್ ಸಲಹೆ ನೀಡಿದ್ದಾರೆ.

ಭಾರತದ ಆರ್ಥಿಕತೆ ಸಂಪೂರ್ಣ ಕುಸಿದು ತಳ ಸೇರಿದೆ. ಈ ಬಗ್ಗೆ ನೊಬೆಲ್ ಪುರಸ್ಕಾರ ಪಡೆದ ತಜ್ಞ ಅಭಿಜಿತ್ ಭ್ಯಾನರ್ಜಿ ಅವರೆ ಮಾತನಾಡಿದ್ದಾರೆ ಎಂದು ಸಿಬಲ್ ಉಲ್ಲೇಖ ಮಾಡಿದ್ದಾರೆ.

ಅಭಿಜಿತ್ ಬ್ಯಾನರ್ಜಿ ಅವರ ಮಾತುಗಳನ್ನು ನರೇಂದ್ರ ಮೋದಿ ಕೇಳುತ್ತಿದ್ದಾರೆಯೇ?

ಮಹಾಬಲಿಪುರಂ ಬೀಚ್‌ ನಲ್ಲಿ ಕಸ ಆಯುವ ವೇಳೆ ಮೋದಿ ಕೈಯಲ್ಲಿ ಇದ್ದಿದ್ದು ಏನು?

* ಭಾರತದ ಆರ್ಥಿಕತೆ ಸಂಪೂರ್ಣ ಕುಸಿದಿದೆ
* ಅಂಕಿ ಅಂಶ ಸಂಗ್ರಹಿಸುವಲ್ಲಿಯೂ ರಾಜಕೀಯ ಪ್ರಭಾವ ಆರಂಭವಾಗಿದೆ
* ನಗರ ಮತ್ತು ಗ್ರಾಮೀಣರ ಖರೀದಿ ಶಕ್ರಿ ಎಪ್ಪತ್ತರ ದಶಕದ ನಂತರ ಅತಿ ಕೆಳ ಮಟ್ಟಕ್ಕೆ ಕುಸಿದಿದೆ.
* ನಾವೆಲ್ಲರೂ ಬಿಕ್ಕಟ್ಟು ಎದುರಿಸುತ್ತಿದ್ದೇವೆ...

ಪೋಟೋಗೆ ಪೋಸ್ ಕೊಡುವುದನ್ನು ಕಡಿಮೆ ಮಾಡಿ..ಕೆಲಸ ಮಾಡಿ ಎಂದು ಮೋದಿಗೆ ಸಿಬಲ್ ಸಲಹೆ ನೀಡಿದ್ದಾರೆ.  ಒಂದು ಕಡೆ ದೇಶದ ಜಿಡಿಪಿ ಕುಸಿದಿದೆ, ಜನರು ಮುಗ್ಗಟ್ಟಿಗೆ ಸಿಲುಕುತ್ತಿದ್ದಾರೆ ಎಂಬ ಕೂಗುಗಳು ಒಂದು ಕಡೆಯಿಂದ ಕೇಳಿಬರುತ್ತಲೆ ಇದೆ. ಇದೆಲ್ಲದರ ನಡುವೆ ತಮಿಳುನಾಡಿನ ಮಹಾಬಲಿಪುರಂಗೆ ಭೇಟಿ ನೀಡಿದ್ದ ಪ್ರಧಾನಿ ಮುಂಜಾನೆ ಬೀಚ್‌ ನಲ್ಲಿ ಜಾಗಿಂಗ್ ಮಾಡುತ್ತಲೇ ಕಸ ಆಯ್ದಿದ್ದರು. ಇದು ಪಕ್ಕಾ ಪೋಟೋ ಶೂಟ್ ಎಂಬ ಟೀಕೆಗಳು ಕೇಳಿಬಂದಿದ್ದವು. ನಂತರ ರಾಜಕಾರಣದ ತಿರುವುಗಳನ್ನು ಪಡೆದುಕೊಂಡಿತ್ತು.

 

Is Modiji listening ?

Abhijit Banerjee :

1) Indian economy on shaky ground
2) “ political interference “ in statistical data
3) Average urban and rural consumption gone down - hasn’t happened since the seventies
4) We in (India) are in crisis

Attend to work
Less photo-ops

— Kapil Sibal (@KapilSibal)
click me!