ಈರುಳ್ಳಿ ದರ ಏರಿಕೆ: ಸಚಿವ ಪಾಸ್ವಾನ್‌ ವಿರುದ್ಧ ಕೇಸ್‌!

By Web DeskFirst Published Dec 8, 2019, 8:54 AM IST
Highlights

ಈರುಳ್ಳಿ ದರ ಏರಿಕೆ: ಸಚಿವ ಪಾಸ್ವಾನ್‌ ವಿರುದ್ಧ ಕೇಸ್‌!| ಈರುಳ್ಳಿ ದರ ಏರಿಕೆಯ ಕುರಿತು ಜನರನ್ನು ದಾರಿತಪ್ಪಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ

ಮುಂಬೈ[ಡಿ.08]: ಈರುಳ್ಳಿ ದರ ಏರಿಕೆಯ ಕುರಿತು ಜನರನ್ನು ದಾರಿತಪ್ಪಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ವಿರುದ್ಧ ಬಿಹಾರದ ಮುಜಫ್ಫರ್‌ಪುರ ಸಿವಿಲ್‌ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣವೊಂದು ದಾಖಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಎಂ. ರಾಜು ನಯ್ಯರ್‌ ಎನ್ನುವವರು ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದು, ಡಿ.12ರಂದು ವಿಚಾರಣೆ ನಿಗದಿಯಾಗಿದೆ.

ಪಾಸ್ವಾನ್‌ ಅವರು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಸರಬರಾಜು ಸಚಿವರಾಗಿದ್ದ ಹೊರತಾಗಿಯೂ ಈರುಳ್ಳಿ ದರದ ಮೇಲೆ ನಿಗಾ ವಹಿಸಲು ವಿಫಲರಾಗಿದ್ದಾರೆ.

ಕಾಳ ಸಂತೆಯಿಂದಾಗಿ ತರಕಾರಿ ದರಗಳು ಏರಿಕೆ ಆಗಿವೆ ಎಂದು ಜನರನ್ನು ದಾರಿ ತಪ್ಪಿಸಿದ್ದಾರೆ ಎಂದು ಮುಜಫ್ಫರ್‌ಪುರ ನಿವಾಸಿಯಾಗಿರುವ ನಯ್ಯರ್‌ ದೂರಿನಲ್ಲಿ ಆರೋಪಿಸಿದ್ದಾರೆ.

click me!