
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಲು, ಲೈಕ್ಸ್ ಗಳಿಸಲು ಈಚೆಗೆ ಕೇರಳದಲ್ಲಿ, ಶಿಮ್ಜಿತಾ ಮುಸ್ತಫಾ ಎಂಬಾಕೆ ಅನ್ಯಾಯವಾಗಿ ದೀಪಕ್ ಎನ್ನುವವರ ಪ್ರಾಣವನ್ನೇ ಬಲಿ ಪಡೆದ ಘಟನೆ ಇಡೀ ಪುರುಷ ವರ್ಗವನ್ನೇ ತಲ್ಲಣಗೊಳಿಸಿದೆ. ಬಸ್ಗಳಲ್ಲಿ, ರಶ್ ಇದ್ದಾಗ ಅದನ್ನೇ ತಮ್ಮ ತೇವಲಿಗೆ ಬಳಸಿಕೊಳ್ಳುವ ಪುರುಷರೂ ಇದ್ದಾರೆ. ಮಹಿಳೆಯರಿಗೆ ಇದರ ಅನುಭವ ಸಾಕಷ್ಟು ಆಗಿರುತ್ತದೆ. ಆದರೆ, ಕೇವಲ ಲೈಕ್ಗೋಸ್ಕರ ಬಸ್ನಲ್ಲಿ ತಾನೇ ಹಿಂದೆ ಮುಂದೆ ಸರಿದು, ದೀಪಕ್ ಅವರೇ ತಮ್ಮ ಖಾಸಗಿ ಅಂಗ ಮುಟ್ಟಿದಂತೆ ತೋರಿಸಿದ ಐನಾತಿ ಈ ಶಿಮ್ಜಿತಾ ಮುಸ್ತಫಾ. ಬಳಿಕ ಈಕೆ ವಿಡಿಯೋ ಎಡಿಟ್ ಮಾಡಿರುವುದು ಪೊಲೀಸ್ ತನಿಖೆಯಿಂದಲೂ ತಿಳಿದುಬಂದಿದೆ. ಎಡಿಟ್ ಮಾಡಿರುವ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಾಕಿ 2 ಮಿಲಿಯನ್ ವ್ಯೂವ್ಸ್ ಪಡೆದ ಕಿರಾತಕಿ ಇವಳು. ಇದು ವೈರಲ್ ಆಗುತ್ತಿದ್ದಂತೆಯೇ ಮನನೊಂದ ದೀಪಕ್ ಅವರು ಸಾವಿನ ಹಾದಿಯನ್ನೇ ತುಳಿದುಬಿಟ್ಟರು.
ಕೊಂದ ಕಿರಾತಕಿ!
ಸದ್ಯ ಶಿಮ್ಜಿತಾ ಮುಸ್ತಫಾ, ತಪ್ಪಿಸಿಕೊಂಡು ಓಡಿಹೋಗಿದ್ದಳು. ಆದರೆ ಸಂಬಂಧಿಕರ ಮನೆಯಿಂದ ಆಕೆಯನ್ನು ಅರೆಸ್ಟ್ ಮಾಡಲಾಗಿದೆ. ಶಿಕ್ಷೆ ಆಗತ್ತೋ, ಬಿಡತ್ತೋ. ಆದರೆ ಒಬ್ಬನೇ ಮಗನನ್ನು ಕಳೆದುಕೊಂಡ ದೀಪಕ್ ಅವರ ಪಾಲಕರ ಕಣ್ಣೀರಂತೂ ನೋಡಲು ಆಗುತ್ತಿಲ್ಲ. 'ಸಾಯಬೇಕಿತ್ತು ಏಕೆ, ಎದುರಿಸಬೇಕಿತ್ತು' ಎಂದೆಲ್ಲಾ ಮಾತನಾಡುವವರೂ ಇದ್ದಾರೆ. ಆದರೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ, ಕಂಡಕಂಡವರೆಲ್ಲರೂ ಪ್ರಶ್ನೆ ಮಾಡುವಾಗ ನಾನು ಹಾಗೆ ಮಾಡಿಲ್ಲ, ಹಾಗೆ ಮಾಡಿಲ್ಲ ಎಂದು ಉತ್ತರ ಕೊಡುತ್ತಾ ಇರುವ ಬದಲು (ಬಹುಶಃ ಹಾಗೊಂದು ವೇಳೆ ಹೇಳಿದ್ದರೂ, ಈಕೆ ಮಾಡಿರುವ ವಿಡಿಯೋ ನೋಡಿ ನಂಬುತ್ತಲೂ ಇರಲಿಲ್ಲ ಅನ್ನಿ) ಸಾಯುವುದೇ ಮೇಲು ಎಂದು ಅವರು ಸಾವಿನ ಹಾದಿ ತುಳಿದರು.
ಇದಾದ ಬಳಿಕ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಗಳು, ಇದೇ ವಿಷಯವನ್ನು ಇಟ್ಟುಕೊಂಡು ಹಾಸ್ಯದ ರೀತಿಯಲ್ಲಿ ವಿಡಿಯೋ ಮಾಡುತ್ತಿದ್ದಾರೆ. ಹುಡುಗಿ, ಯುವತಿ ಕಂಡಾಕ್ಷಣ ಓಡಿ ಹೋಗುವುದು, ರಟ್ಟನ್ನು ತಂದು ಯುವತಿಯ ಮಧ್ಯೆ ಇಡುವುದು, ಯುವತಿ ಇರುವ ಸೀಟು ಕಂಡು ಹೌಹಾರಿ ಹೋಗುವುದು... ಹೀಗೆ ಹಲವಾರು ರೀತಿಯ ವಿಡಿಯೋ ಮಾಡುತ್ತಿದ್ದಾರೆ. ಈ ವಿಡಿಯೋ ಹಾಸ್ಯದ ರೀತಿಯಲ್ಲಿ ಪ್ರಸೆಂಟ್ ಮಾಡಲಾಗುತ್ತಿದೆ. ಆದರೆ, ರಿಯಲ್ ಆಗಿ ದೀಪಕ್ ಅವರ ಕಥೆ ಕೇಳಿದರೆ ಮಾತ್ರ ಎಂಥವರ ಕಣ್ಣಲ್ಲೂ ನೀರು ಬರುವುದು ಇದೆ.
ಇದೀಗ ಮಹಿಳೆಯರಿಂದ ರಕ್ಷಣೆ ಮಾಡಿಕೊಳ್ಳಲು ಕೆಲವು ಪುರುಷರು ತಮ್ಮನ್ನು ರಟ್ಟಿನ ಬಾಕ್ಸ್ ಒಳಗೆ ತೂರಿಸಿಕೊಂಡು ಬಸ್ನಲ್ಲಿ ಹತ್ತುತ್ತಿದ್ದಾರೆ.ಇದರ ವಿಡಿಯೋಗಳು ವೈರಲ್ ಆಗುತ್ತಿವೆ. ಇಂಥದ್ದೊಂದು ಟ್ರೆಂಡ್ ಈಗ ಕೇರಳದ ಬಸ್ಗಳಲ್ಲಿ ಶುರುವಾಗಿದೆ. ದೀಪಕ್ ಅವರ ಸಾವಿಗೆ ನ್ಯಾಯ ಕೊಡಿಸುವ ಸಲುವಾಗಿ ಪ್ರತಿಭಟನಾರ್ಥವಾಗಿ ಕೆಲವು ಪುರುಷರು ಹೀಗೆ ಮಾಡುತ್ತಿದ್ದಾರೆ. ಕೆಲವರು ಇದನ್ನು ಕೂಡ ವೈರಲ್ಗೋಸ್ಕರ ಮಾಡುತ್ತಿದ್ದಾರೆ ಎನ್ನಿ. ಆದರೆ ಹೆಣ್ಣುಮಕ್ಕಳ ಬಗ್ಗೆ ಅದ್ಯಾವ ರೀತಿಯಲ್ಲಿ ಅಸಹ್ಯ ಭಾವನೆ ಮೂಡುತ್ತಿದೆ, ಇಡೀ ಮಹಿಳಾ ಸಮುದಾಯವನ್ನು ಪುರುಷರು ಯಾರ ಮಟ್ಟಿಗೆ ನೋಡುವ ಸ್ಥಿತಿ ಉಂಟಾಗಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ