
ಪುದುಚೇರಿ(ಸೆ.10): ಕೇರಳ ಮೂಲದ ಪಿ.ಜೆ.ಬಿಜು ಎಂಬುವವರು ಪುದುಚೇರಿಯ ರಸ್ತೆಯೊಂದರ ಕಿರಿದಾದ ಜಾಗದಲ್ಲಿ ದೊಡ್ಡ ಕಾರನ್ನು ಅತ್ಯಂತ ನಾಜೂಕಾಗಿ ಪಾರ್ಕ್ ಮಾಡುವ ಮತ್ತು ಕಾರನ್ನು ತೆಗೆಯುವ ವಿಡಿಯೋವೊಂದು ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಬಳಿಕ ಪುದುಚೇರಿಯ ಮಾಹೆ ರೈಲ್ವೆ ನಿಲ್ದಾಣದ ರಸ್ತೆಯಲಿ ಬಿಜು ಕಾರು ಪಾರ್ಕಿಂಗ್ ಸರ್ಕಸ್ ಮಾಡಿದ ಸ್ಥಳವೀಗ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.
ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಆ ಸ್ಥಳಕ್ಕೆ ಆಗಮಿಸಿ ಕಾರು ನಿಲ್ಲಿಸಿದ ಜಾಗ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನೊಂದಿಷ್ಟುಜನ ತಾವೂ ಇಂಥದ್ದೊಂದು ಸಾಹಸ ಮಾಡಿ ವಿಫಲರಾಗುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ