ಹಳೇ ನಿಯಮದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ; ಪರೋಕ್ಷ ಸೂಚನೆ ನೀಡಿದ ಮೋದಿ!

Published : Dec 07, 2020, 10:09 PM IST
ಹಳೇ ನಿಯಮದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ; ಪರೋಕ್ಷ ಸೂಚನೆ ನೀಡಿದ ಮೋದಿ!

ಸಾರಾಂಶ

ರೈತರ ಪ್ರತಿಭಟನೆ ಭಾರತ ಮಾತ್ರವಲ್ಲ, ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿದೇಶಗಳಲ್ಲಿನ ಹೈಕಮಿಶನ್  ಮುಂದೆಯೂ ಪ್ರತಿಭಟನೆ ನಡೆಯುತ್ತಿದೆ. ರೈತರ ಪ್ರತಭಟನೆ ಇದೀಗ ಭಾರತ್ ಬಂದ್ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನಾ ನಿರತರಿಗೆ ಪರೋಕ್ಷ ಸೂಚನೆ ನೀಡಿದ್ದಾರೆ.

ನವದೆಹಲಿ(ಡಿ.07):  ರೈತರ ಪ್ರತಿಭಟನೆ ಕಿಚ್ಚು ದೇಶವ್ಯಾಪಿ ಹಬ್ಬಿದೆ. ಡಿ.08ರಂದು ಭಾರತ್ ಬಂದ್ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲು ರೈತ ಸಂಘಟನೆಗಳು ಮುಂದಾಗಿದೆ. ರೈತರ ಪ್ರತಿಭಟನೆ ಹಿಂಪಡೆಯಲು ಕೇಂದ್ರ ಸರ್ಕಾರ ಹಲವು ಸುತ್ತಿನ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದೆ. ಆದರೆ ರೈತರ ತಮ್ಮ ಪಟ್ಟು ಬಿಟ್ಟಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಸೂಚನೆ ನೀಡಿದ್ದಾರೆ. 

ಭಾರತ್ ಬಂದ್: ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ಜಾರಿ!

ಆಗ್ರಾ ಮೆಟ್ರೋ ರೈಲು ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಪರೋಕ್ಷವಾಗಿ ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಭಾರತ್ ಬಂದ್‌ ಕುರಿತು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಹಳೇ ನಿಯಮ, ನೀತಿಗಳಿಂದ ಹೊಸ ಶತಮಾನ ನಿರ್ಮಾಣ ಸಾಧ್ಯವಿಲ್ಲ. ಹಳೇ ನಿಯಮಳು ಆಧುನಿಕ ಕಾಲಕ್ಕೆ ಸರಿಹೊಂದದೇ ಹೋಗಬಹುದು ಎಂದು ಕೃಷಿ ಮಸೂದೆಗಳನ್ನು ಮೋದಿ ಪರೋಕ್ಷವಾಗಿ ಸಮರ್ಥಿಸಿದ್ದಾರೆ.

ಭಾರತದ ಅಭಿವೃದ್ಧಿ, ಸುಧಾರಣೆಗಾಗಿ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು, ಮಸೂದೆಗಳನ್ನು ತರುತ್ತಿದೆ. ಪ್ರಯತ್ನದಲ್ಲಿ ಹಲವು ತಜ್ಞರಿಂದ ಮಾಹಿತಿ ಪಡೆದು ಹೊಸ ನೀತಿಗಳನ್ನು ತರಲಾಗುತ್ತಿದೆ. ಜಾರಿಯಾಗುವ ಹೊಸ ನಿಯಮಗಳ ಸರಿಯಾದ ಮಾಹಿತಿ ಪಡೆದು ಮುಂದೆ ಚಲಿಸಿದರೆ ಸಮಸ್ಯೆ ಎದುರಾಗುವುದಿಲ್ಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!