ಕೆನಡಾ ಸರ್ಕಾರದಿಂದ ವಜಾ ಆದ ಪವನ್‌ ಕುಮಾರ್ ರಾಯ್ ಯಾರು?

By Kannadaprabha News  |  First Published Sep 21, 2023, 7:38 AM IST

ಕೆನಡಾದಿಂದ ವಜಾಗೊಂಡ ರಾಯ್‌, ಪಂಜಾಬ್ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದು, ಜಲಂಧರ್‌ನ ಎಸ್‌ಎಸ್‌ಪಿಯಾಗಿ(SSP Jalandhar), ಪಂಜಾಬ್‌ನ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು.


ನವದೆಹಲಿ: ಕೆನಡಾ ಸರ್ಕಾರದಿಂದ ವಜಾ ಆದ ಭಾರತೀಯ ರಾಯಭಾರ ಸಿಬ್ಬಂದಿಯನ್ನು ಪವನ್‌ ಕುಮಾರ್ ರಾಯ್‌ ಎಂದು ಗುರುತಿಸಲಾಗಿದೆ. ಇವರು ಕೆನಡಾದ ಒಟ್ಟಾವದಲ್ಲಿ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ‘ರಾ’ ಏಜೆಂಟ್‌ ಆಗಿದ್ದರು ಎಂಬುದು ಕೆನಡಾ ಆರೋಪ. ರಾಯ್‌, ಪಂಜಾಬ್ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದು, ಜಲಂಧರ್‌ನ ಎಸ್‌ಎಸ್‌ಪಿಯಾಗಿ(SSP Jalandhar), ಪಂಜಾಬ್‌ನ ಎಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಕರ್ತವ್ಯದ ವೇಳೆ ಪಂಜಾಬ್‌ನಲ್ಲಿನ ಮಾದಕ ವಸ್ತು (drug mafia) ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದಶಕಗಳ ಹಿಂದೆ ರಾ ಮುಖ್ಯಸ್ಥರಾಗಿದ್ದ ಸಂಪತ್‌ ಕುಮಾರ್‌ ಗೋಯಲ್‌ (Sampath Kumar Goyal) ಸಂಪರ್ಕಕ್ಕೆ ಬಂದ ರಾಯ್‌, ಬಳಿಕ ಕೇಂದ್ರ ಸೇವೆಗೆ ನಿಯೋಜನೆಗೊಂಡು 2018ರಲ್ಲಿ ಕೆನಡಾ ರಾಯಭಾರಿ ಕಚೇರಿ ಅಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು.

ಒಟ್ಟಾವ: ಜಿ-20 ಶೃಂಗಸಭೆಗೆ ಬಂದ ವೇಳೆ ಖಲಿಸ್ತಾನಿಗಳನ್ನು ಮಟ್ಟ ಹಾಕಲಾಗದು, ಅವರ ಪ್ರತಿಭಟನೆಯನ್ನು ನಿಲ್ಲಿಸಲಾಗದು ಎಂದು ಭಾರತಕ್ಕೆ ಬಂದಿದ್ದ ವೇಳೆ ಹೇಳಿಕೆ ನೀಡಿದ್ದ ಜಸ್ಟೀನ್ ಟ್ರುಡೋ ಅವರ ಸರ್ಕಾರ ಕಳೆದ ಸೋಮವಾರ ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿರುವ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ವಜಾ ಮಾಡಿತ್ತು. ಭಾರತದ ಮೋಸ್ಟ್ ವಾಂಟೆಂಡ್ ಲಿಸ್ಟ್‌ನಲ್ಲಿದ್ದ ಖಲಿಸ್ತಾನ್ ಉಗ್ರ ಹರ್‌ದೀಪ್‌ ಸಿಂಗ್ ನಿಜ್ಜರ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.

Tap to resize

Latest Videos

ಕಳೆದ ಜೂನ್‌ನಲ್ಲಿ  ಖಲಿಸ್ತಾನಿ ಉಗ್ರ ಖಲಿಸ್ತಾನ್ ಉಗ್ರ ಹರ್‌ದೀಪ್‌ ಸಿಂಗ್ ನಜ್ಜರ್‌ನ ಹತ್ಯೆಯಾಗಿದ್ದು, ಈ ಹತ್ಯೆಯಲ್ಲಿ ಭಾರತದ ಪ್ರಮುಖ ಪಾತ್ರವಿದೆ ಎಂದು ಕೆನಡಾ ಆರೋಪಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಒಟ್ಟವಾದಲ್ಲಿರುವ ಭಾರತದ ಗುಪ್ತಚರ ಇಲಾಖೆ ಮುಖ್ಯಸ್ಥನ್ನು ತೆಗೆದು ಹಾಕಿತ್ತು.  ಜಿ-20 ಶೃಂಗಸಭೆಯ ನಂತರ ಕೆನಡಾ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಈ ಮಧ್ಯೆ ಕೆನಡಾದ ಈ ನಿರ್ಧಾರ ಈಗ ಈ ಸಂಬಂಧವನ್ನು ಮತ್ತಷ್ಟು ಕೆಡಿಸಿದೆ.

ಕೆಣಕಿದವರ ಸುಮ್ಮನೆ ಬಿಡಲ್ಲ, 5 ದಿನದಲ್ಲಿ ದೇಶ ಬಿಟ್ಟು ಹೋಗಿ: ಕೆನಡಾ ಏಟಿಗೆ ಭಾರತದ ಎದಿರೇಟು

ಕಳೆದ ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ (Khalistani terrorist) ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar)ಹತ್ಯೆ ನಡೆದಿತ್ತು. ಈ ಹತ್ಯೆಗೂ ಭಾರತೀಯ ಏಜೆಂಟರಿಗೆ ಸಂಬಂಧವಿದೆ ಎಂದು ತಮ್ಮ ಸರ್ಕಾರವು ವಿಶ್ವಾಸಾರ್ಹ ಮೂಲಗಳಿಂದ ಆರೋಪಗಳನ್ನು ಹೊಂದಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾ ಸಂಸತ್ತಿನ ವಿರೋಧ ಪಕ್ಷದ ತುರ್ತು ಅಧಿವೇಶನದಲ್ಲಿ ಹೇಳಿದ್ದರು. ಆದರೆ ಭಾರತ ಈ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕರಿಸಿದೆ.

ಇತ್ತ ಜೂನ್‌ನಲ್ಲಿ ಹತ್ಯೆಯಾದ ಖಲಿಸ್ತಾನ್ ಉಗ್ರ ಹರ್‌ದೀಪ್‌ ಸಿಂಗ್ ನಿಜ್ಜರ್‌ನನ್ನು ಭಾರತವೂ ಮೋಸ್ಟ್ ವಾಂಟೆಡ್‌ ಭಯೋತ್ಪಾದಕ (Most wanted terrorist) ಎಂದು ಘೋಷಿಸಿತ್ತು.  ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪ್ರಮುಖ ಸಿಖ್ ಸಮುದಾಯದ (Sikh community) ನೆಲೆಯಾಗಿರುವ ವ್ಯಾಂಕೋವರ್‌ನ ( Vancouver) ಉಪನಗರವಾದ ಸರ್ರೆಯಲ್ಲಿ ಜೂನ್‌ 18 ರಂದು ಈತನ ಹತ್ಯೆ ನಡೆದಿತ್ತು. ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪ ಈತನ ಮೇಲಿದೆ.

ಖಲಿಸ್ತಾನ್ ಉಗ್ರ ನಿಜ್ಜರ್‌ ಹತ್ಯೆ : ಭಾರತದ ವಿರುದ್ಧ ಸೇಡು ತೀರಿಸಲು ಮುಂದಾದ ಕೆನಡಾ ಪ್ರಧಾನಿ

click me!