ಭಾರತದ ಇಲ್ಲಿ ಮನೆ ಖರೀದಿಸಿದರೆ ನಿಮಗೆ 4 ಕೋಟಿ ರೂ ಲ್ಯಾಂಬೋರ್ಗಿನಿ ಕಾರು ಉಚಿತ!

By Chethan Kumar  |  First Published Oct 29, 2024, 5:22 PM IST

ಖರೀದಿ ವೇಳೆ ಉಡುಗೊರೆ, ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಕೊಡುಗೆಗಳು ಭಾರತದಲ್ಲಿ ಹೊಸದೇನಲ್ಲ. ಪ್ರತಿ ಖರೀದಿಯಲ್ಲೂ ಡಿಸ್ಕೌಂಟ್ ಅಥವಾ ಗಿಫ್ಟ್ ಕೇಳುವುದು ಇಲ್ಲಿಯ ಸಂಪ್ರದಾಯ. ಆದರೆ ಡೆವಲಪ್ಪರ್ ನೀಡಿದ ಆಫರ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಕಾರಣ ಇಲ್ಲಿ ಮನೆ ಖರೀದಿಸಿದರೆ ನಿಮಗೆ 4 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಕಾರು ಉಚಿತವಾಗಿ ಸಿಗಲಿದೆ.


ನವದೆಹಲಿ(ಅ.29)  ದೀಪಾವಳಿ ಆಫರ್, ಹೊಸ ವರ್ಷದ ಆಫರ್, ಯುಗಾದ ಆಫರ್, ಹೀಗೆ ಭಾರತದಲ್ಲಿ ಆಫರ್ , ಮೆಘಾ ಸೇಲ್ ಮಾರ್ಕೆಟಿಂಗ್‌ನ ಅವಿಭಾಜ್ಯ ಅಂಗವಾಗಿದೆ. ನೀವು ಶಾಪ್‌ಗೆ ತೆರಳಿ ಅಥವಾ ಆನ್‌ಲೈನ್ ಇರಲಿ, ಡಿಸ್ಕೌಂಟ್, ಗಿಫ್ಟ್, ಕ್ಯಾಶ್‌ಬ್ಯಾಕ್ ಇಲ್ಲದಿದ್ದರೆ ಮಾರಾಟ ಡಲ್.  ದೊಡ್ಡ ಮೊತ್ತದ ವಸ್ತುಗಳ ಖರೀದಿಸಿದಾಗ ಸಣ್ಣ ಸಣ್ಣ ಉಡುಗೊರೆ ನೀಡುವುದು ಸಾಮಾನ್ಯ. ಆದರೆ ನೋಯ್ಡಾದ ಡೆವಲಪ್ಪರ್ ವಿಶೇಷ ಹಾಗೂ ಯಾರೂ ಊಹಿಸದ ಆಫರ್ ನೀಡಿದ್ದಾರೆ. ಈ ಡೆವಲಪ್ಪರ್ ಬಳಿಯಿಂದ ಮನೆ ಖರೀದಿಸುವವರಿಗೆ 4 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಉಚಿತವಾಗಿ ಸಿಗಲಿದೆ.

ಇದು ತಮಾಷೆಯಲ್ಲಿ, ನೀವು ಮನೆ ಖರೀದಿಸಿದರೆ ಸಾಕು. ನಿಮಗೆ ಲ್ಯಾಂಬೋರ್ಗಿನಿ ಕಾರು ಉಚಿತವಾಗಿ ಸಿಗಲಿದೆ. ಮನೆ ನೋಂದಣಿ ವೇಳೆ ಯಾವ ಕಲರ್ ಅನ್ನೋದು ತಿಳಿಸಿದರೆ ಸಾಕು. ಮನೆ ಜೊತೆ ನಿಮಗೆ ಲಕ್ಷುರಿ ಲ್ಯಾಂಬೋರ್ಗಿನಿ ಉರುಸ್ ಕಾರು ಕೈಸೇರಲಿದೆ. ಜೈಪಿ ಗ್ರೀನ್ಸ್ ರಿಯಲ್ ಎಸ್ಟೇಟ್ ಬಿಲ್ಡರ್ಸ್ ನೋಯ್ಡಾದಲ್ಲಿ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದೆ. ಇಲ್ಲಿ ವಿಲ್ಲಾ ಖರೀದಿಸುವ ಪ್ರತಿಯೊಬ್ಬರಿಗೂ ಕಾರು ಸಿಗಲಿದೆ. ಒಂದು ಮನೆಗೆ ಒಂದು ಉಚಿತ ಲ್ಯಾಂಬೋರ್ಗಿನಿ ಕಾರು ಉಡುಗೊರೆಯಾಗಿ ಸಿಗಲಿದೆ.

Tap to resize

Latest Videos

undefined

ತಿಂಗಳಿಗೆ 1.35 ಲಕ್ಷ ರೂ ಬಾಡಿಗೆ,5 ಲಕ್ಷ ಅಡ್ವಾನ್ಸ್; ಫೋಟೋದಲ್ಲೇ ಮನೆ ಸಮಸ್ಯೆ ಪತ್ತೆ ಹಚ್ಚಿದ ನೆಟ್ಟಿಗರು!

ಜೈಪೀ ಗ್ರೀನ್ ಡೆವಲಪ್ಪರ್ ಗೌರವ್ ಗುಪ್ತಾ ಅಧಿಕೃತವಾಗಿ ಈ ಘೋಷಣೆ ಮಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಗೌರವ್ ಗುಪ್ತಾ ಈ ಮಾಹಿತಿ ಹಂಚಿಕೊಂಡಿದ್ದರೆ. ಪ್ರತಿಯೊಂದು ವಿಲ್ಲಾ ಜೊತೆಗೆ ಲ್ಯಾಂಬೋರ್ಗಿನಿ ಕಾರು ಸಿಗಲಿದೆ ಎಂದು ಗುಪ್ತಾ ಹೇಳಿದ್ದಾರೆ. ಎಲ್ಲಾ ಸೌಲಭ್ಯಗಳನ್ನೊಳಗೊಂಡ ವಿಲ್ಲಾ ಇದಾಗಿದೆ.

ನೀವು ಉಚಿತ ಲ್ಯಾಂಬೋರ್ಗಿನಿ ಉರುಸ್ ಕಾರು ಪಡೆಯಲು ನೋಯ್ಡಾದಲ್ಲಿ ಮನೆ ಖರೀದಿಸಲು ಪ್ಲಾನ್ ಹಾಕಿದ್ದೀರಾ? ಇಲ್ಲಿ 3,4,5,6 ಬೆಡ್ ರೂಂ ಮನೆಗಳು ಲಭ್ಯವಿದೆ. ಇನ್ನು ಪಾರ್ಕಿಂಗ್, ಗಾರ್ಡನ್, ಜಿಮ್, ಪಾರ್ಕ್, ವಿಹಾರಕ್ಕಾಗಿ ಸ್ಥಳ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿವೆ. ಇನ್ನು ನಿಮಗೆ ಲ್ಯಾಂಬೋರ್ಗಿನಿ ಕಾರು ಉಚಿತವಾಗಿ ಪಡೆಯಬೇಕು ಎಂದಿದ್ದರೆ, 26 ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಬೇಕು. ಈ ಮನೆಗೆ ನಿಮಗೆ 4 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಉಚಿತವಾಗಿ ಸಿಗಲಿದೆ.

 

Noida’s got a new Villa Project coming up at 26 Cr that's offering 1 Lamborghini with each of those! 🙄 pic.twitter.com/gZqOC8hNdZ

— Gaurav Gupta | Realtor (@YourRealAsset)

 

26 ಕೋಟಿ ರೂಪಾಯಿ ಮೌಲ್ಯದ ವಿಲ್ಲಾದಲ್ಲಿ 7.5 ಲಕ್ಷ ರೂಪಾಯಿ ಕ್ಲಬ್ ಸದಸ್ಯತ್ವ ಕೂಡ ಸಿಗಲಿದೆ. ಇನ್ನು 7.5 ಲಕ್ಷ ರೂಪಾಯಿ ಮೌಲ್ಯದ ಪವರ್ ಬ್ಯಾಕ್ಅಪ್, 30 ಲಕ್ಷ ರೂಪಾಯಿ ಮೌಲ್ಯದ ಪಾರ್ಕಿಂಗ್ ಸ್ಥಳ ಒಳಗೊಂಡಿದೆ. ಇನ್ನು ಗಾಲ್ಫ್ ವೀಕ್ಷಣೆ ಬದಿಯ ವಿಲ್ಲಾಗಳು ಬೇಕಾದಲಲ್ಲಿ 50 ಲಕ್ಷ ರೂಪಾಯಿ ಹೆಚ್ಚುವರಿ ಪಾವತಿ ಮಾಡಬೇಕು. ಜೈಪೀ ಗ್ರೀನ್ಸ್ ಡೆವಲಪ್ಪರ್ಸ್ ಬಳಿ 51 ಲಕ್ಷ ರೂಪಾಯಿಯಿಂದ 30 ಕೋಟಿ ರೂಪಾಯಿ ವರೆಗಿನ ಮನೆಗಳು ಲಭ್ಯವಿದೆ.

ಹಲವರು ಈ ಆಫರ್‌ಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲರಿಗೂ ಒಂದೇ ಶೈಲಿಯ ವಿಲ್ಲಾಗಳು, ಎಲ್ಲರ ಮನೆ ಮುಂದೆ ಒಂದೇ ಮಾಡೆಲ್ ಲ್ಯಾಂಬೋರ್ಗಿನಿ ಉರುಸ್ ಕಾರು. ನೋಡಲು, ಅನುಭವಿಸಲು ಇದು ಬೋರ್ ಆಗಲಿದೆ ಎಂದಿದ್ದಾರೆ. ಈ ಆಫರ್ ಹಾಗೂ ಪ್ಲಾನ್ 15 ವರ್ಷದ ಹಿಂದೆ ದುಬೈನಲ್ಲಿ ಚಾಲ್ತಿಯಲ್ಲಿತ್ತು. ಇದೀಗ ಹಳೇ ಪ್ಲಾನ್ ನಕಲು ಮಾಡಲಾಗಿದೆ. ಏನಾದರು ಸ್ವಂತದ್ದು ಮಾಡಿ, ನೀವು ಕಟ್ಟಿದ ವಿಲ್ಲಾ ಕೂಡ ಸ್ವಂತದ್ದೇನಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ ಮಾರ್ಕೆಟಿಂಗ್ ವಿಧಾನವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಈ ಆಫರ್ ಬಳಿಕ ಎಷ್ಟು ಮನೆ ಖರೀದಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ.

ಮುಂಬೈನ ಒಂದು ವಾಣಿಜ್ಯ ಕಟ್ಟದಿಂದ ನಟಿ ತಮನ್ನಾ ಪಡೆಯುತ್ತಿರುವ ತಿಂಗಳ ಬಾಡಿಗೆ ಎಷ್ಟು?

click me!