ಭಾರತೀಯ ರೈಲು ಸೇವೆಗೆ ಬ್ರಿಟಿಷ್ ಯೂಟ್ಯೂಬರ್ ಮೆಚ್ಚುಗೆ, ವಿಡಿಯೋ ವೈರಲ್

Published : Apr 12, 2025, 03:44 PM ISTUpdated : Apr 12, 2025, 04:35 PM IST
ಭಾರತೀಯ ರೈಲು ಸೇವೆಗೆ ಬ್ರಿಟಿಷ್ ಯೂಟ್ಯೂಬರ್ ಮೆಚ್ಚುಗೆ, ವಿಡಿಯೋ ವೈರಲ್

ಸಾರಾಂಶ

ಭಾರತದ ರೈಲು ಸೇವೆ, ರೈಲು ಪ್ರಯಾಣದ ಅನುಭವ, ರೈಲಿನಲ್ಲಿ ಫುಡ್ ಆರ್ಡರ್ ಸೇರಿದಂತೆ ಹಲವು ವಿಚಾರಗಳ ಕುರಿತು ಬ್ರಿಟಿಷ್ ಯೂಟ್ಯೂಬರ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಭಾರತದ ರೈಲ್ವೇ ಸೇವೆಯಿಂದ ಯುಕೆ ಕೆಲ ವಿಚಾರಗಳನ್ನು ಕಲಿಯಬೇಕಿದೆ ಎಂದಿದ್ದಾನೆ. ಈತನ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ನವದೆಹಲಿ(ಏ.12) ವಿಶ್ವದ ಅತೀ ದೊಡ್ಡ ರೈಲು ಸಂಪರ್ಕ ಸಾರಿಗೆಯಲ್ಲಿ ಭಾರತೀಯ ರೈಲ್ವೇ ಕೂಡ ಸ್ಥಾನ ಪಡೆದಿದೆ. ಇತರ ಎಲ್ಲಾ ದೇಶಗಳಿಗಿಂತ ಭಾರತದಲ್ಲಿ ರೈಲು ಸಂಪರ್ಕ, ರೈಲು ಸೇವೆ ಅತ್ಯಂತ ಸವಾಲು. ಆದರೂ ಭಾರತೀಯ ರೈಲ್ವೇ ಅತ್ಯುತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ. ಭಾರತೀಯ ರೈಲ್ವೇ  ಆಧುನೀಕರಣಗೊಂಡಿದೆ. ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ತಂತ್ರಜ್ಞಾನ ಬಳಸಿಕೊಂಡು ಸೇವೆ ನೀಡಲಾಗುತ್ತಿದೆ. ಆ್ಯಪ್ ಆಧಾರಿತ, ಎಐ ಆಧಾರಿತ ತಂತ್ರಜ್ಞಾನಗಳು ಹೆಚ್ಚು ಬಳಕೆಯಾಗುತ್ತಿದೆ.ಇದೀಗ ಹಲವು ಸವಾಲುಗಳ ನಡುವ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಭಾರತೀಯ ರೈಲ್ವೇಗೆ ಬ್ರಿಟಿಷ್ ಯಟ್ಯೂಬರ್ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಭಾರತೀಯ ರೈಲ್ವೇಯಿಂದ ಯುಕೆ ಕಲಿಯಬೇಕಿದೆ ಎಂದಿದ್ದಾನೆ.

ಬ್ರಿಟಿಷ್ ಖ್ಯಾತ ಯೂಟ್ಯೂಬರ್ ಜಾರ್ಜ್ ಬಕ್ಲೇ ಭಾರತ ಪ್ರವಾಸ ಮಾಡಿದ್ದಾನೆ. ಭಾರತದ ಜನಪ್ರಿಯ ಹಾಗೂ ಕೆಲ ವಿಶೇಷ ತಾಣಗಳನ್ನು ಸಂದರ್ಶಿಸಲು ಇಚ್ಚಿಸಿದ್ದಾನೆ. ಅದರಲ್ಲೂ ಪ್ರಮುಖವಾಗಿ ಕಾಶಿಗೆ ರೈಲಿನ ಮೂಲಕ ಭೇಟಿ ನೀಡಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಎಸಿ ಕೋಚ್ ರೈಲು ಬುಕ್ ಮಾಡಿ ಪ್ರಯಾಣ ಆರಂಭಿಸಿದ್ದಾನೆ.ಆ್ಯಪ್ ಮೂಲಕ ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆ, ರೈಲು ಪ್ರಯಾಣ ಸೇರಿದಂತೆ ಎಲ್ಲ ಸೌಲಭ್ಯಗಳಿಂದ ಇಂಪ್ರೆಸ್ ಆಗಿದ್ದ ಜಾರ್ಜ್ ಬಕ್ಲೆ ಪ್ರಯಾಣದ ನಡುವೆ ಆಹಾರ ಸೇವಿಸಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಆ್ಯಪ್ ಮೂಲಕ ಫುಡ್ ಆರ್ಡರ್ ಮಾಡಲು ಜಾರ್ಜ್ ಮುಂದಾಗಿದ್ದಾನೆ. ಈ ಕುರಿತು ವಿಡಿಯೋವನ್ನು ಜಾರ್ಜ್ ಹಂಚಿಕೊಂಡಿದ್ದಾನೆ.

ಪಂಬನ್ ಸೇತುವೆ ಮೂಲಕ ರಾಮೇಶ್ವರಂಗೆ ಪ್ರಯಾಣಿಸುವ ಪ್ಲಾನ್ ಇದೆಯಾ? ಇಲ್ಲಿಗೆ ಟ್ರೈನ್ ಲಿಸ್ಟ್

ಭಾರತೀಯ ರೈಲ್ವೇಯಲ್ಲಿ ಫುಡ್ ಆರ್ಡರ್ ಮಾಡಿ ಜಾರ್ಜ್ ಚಕಿತಗೊಂಡಿದ್ದಾನೆ. ಕಾರಣ ಕಾನ್ಪುರ ರೈಲು ನಿಲ್ದಾಣದಲ್ಲಿ ಕೇವಲ 5 ನಿಮಿಷ ಮಾತ್ರ ನಿಲುಗಡೆ ಇದೆ. ಈ ವೇಳೆ ಫುಡ್ ಆರ್ಡರ್ ಮಾಡಲು ಈತ ಮುಂದಾಗಿದ್ದಾನೆ. ಆದರೆ ಈ ಐದು ನಿಮಿಷದಲ್ಲಿ ತಾನಿರುವ ರೈಲಿನ ಸೀಟಿಗೆ ಆಹಾರ ಹೇಗೆ ಡೆಲಿವರಿ ಮಾಡಲು ಸಾಧ್ಯವಾಗುತ್ತದೆ ಅನ್ನೋ ಕುತೂಹಲವೂ ಈ ಜಾರ್ಜ್‌ಗಿತ್ತು. 

 

 

ಈತನ ವಿಡಿಯೋ ಆರಂಭಗೊಳ್ಳುವುದೇ ಈ ಫುಡ್ ಆರ್ಡರ್ ಮೂಲಕ. ನನಗೆ ಈಗ ಆರ್ಡರ್ ಮಾಡಿದ ಫುಡ್ ಡೆಲವರಿ ಆಗಲಿದೆ.ನಿಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದಾದರೆ ಕೆಲ ನಿಮಿಷ ಈ ವಿಡಿಯೋ ವೀಕ್ಷಿಸಿ ಎಂದಿದ್ದಾನೆ. ರೈಲು ಆ್ಯಪ್ ಮೂಲಕ ಜಾರ್ಜ್, ಕಾನ್ಪುರ ರೈಲು ನಿಲ್ದಾಣದಲ್ಲಿ ಫುಡ್ ಆರ್ಡರ್ ಮಾಡಿದ್ದಾನೆ. ಸುಲಭವಾಗಿ ಸ್ಯಾಂಡ್‌ವಿಚ್ ಆರ್ಡರ್ ಮಾಡಿದ್ದಾನೆ. ಜೊತೆಗೆ ಇಲ್ಲಿ ರೈಲು ಕೇವಲ 5 ನಿಮಿಷ ಮಾತ್ರ ನಿಲುಗಡೆ ನೀಡಲಿದೆ ಎಂದು ಜಾರ್ಜ್ ಹೇಳಿದ್ದಾನೆ. ಇಷ್ಟೇ ಅಲ್ಲ ರೈಲು ಪ್ಲಾಟ್‌ಫಾರ್ಮ್ ಇರುವ ದೂರ, ತಾನು ಇರುವ ಕೋಚ್‌ನ್ನು ವಿಡಿಯೋ ಮೂಲಕ ತೋರಿಸಿದ್ದಾನೆ. 

ಆರ್ಡರ್ ಮಾಡಿದ ಬಳಿಕ 3 ರಿಂದ 4 ನಿಮಿಷದೊಳಗೆ ಫುಡ್ ಡೆಲಿವರಿ ಬಾಯ್ ಆಹಾರ ಪೊಟ್ಟಣ ಹಿಡಿದು ಜಾರ್ಜ್ ಸೀಟಿನ ಬಳಿ ಆಗಮಿಸಿದ್ದಾನೆ. ಬಳಿಕ ಆರ್ಡರ್ ಫುಡ್ ಡೆಲಿವರಿ ಮಾಡಿದ್ದಾನೆ. ಜಾರ್ಜ್ ಖುಷಿಯಿಂದ ಕುಪ್ಪಳಿಸಿದ್ದಾನೆ. ಜೊತೆಗೆ ಫುಡ್ ಡೆಲಿವರಿ ಬಾಯ್ ಕೂಡ ಈತನ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. 4 ನಿಮಿಷದೊಳಗೆ ಬಿಸಿ ಬಿಸಿ ಸ್ಯಾಂಡ್‌ವಿಚ್ ಆರ್ಡರ್ ಮಾಡಿದ ಸ್ಯಾಂಡ್‌ವಿಚ್ ಜಾರ್ಜ್ ಕೈಸೇರಿದೆ. ಇದೇ ವೇಳೆ ನೆರವು ನೀಡಿದ ಭಾರತೀಯ ಪ್ರಯಾಣಿಕನೊಬ್ಬನಿಗೂ ಜಾರ್ಜ್ ಧನ್ಯವಾದ ಹೇಳಿದ್ದಾನೆ. 

ಭಾರತೀಯ ರೈಲ್ವೇಯಲ್ಲಿನ ಆಹಾರ ವ್ಯವಸ್ಥೆ, ರೈಲು ನಿಲ್ಲುವ ನಿಲ್ದಾಣಗಳಲ್ಲಿ ಆರ್ಡರ್ ಮಾಡಿದ ಸ್ಥಳಕ್ಕೆ 3 ರಿಂದ 4 ನಿಮಿಷೊಳಗೆ ಫುಡ್ ಡೆಲಿವರಿ ಆಗವ ವ್ಯವಸ್ಥೆ ನೋಡಿ ಜಾರ್ಜ್ ಪುಳಕಿತನಾಗಿದ್ದಾನೆ. ಭಾರತೀಯ ರೈಲ್ವೇಯ ಈ ಸೇವೆಗಳನ್ನು ಯುಕೆ ಸೇರಿದಂತೆ ಇತರ ದೇಶಗಳು ಅನುಕರಿಸಬೇಕಿದೆ  ಎದು ಜಾರ್ಜ್ ಹೇಳಿದ್ದಾನೆ.

ವೇಟಿಂಗ್‌ ಟಿಕೆಟ್‌ ಹೊಂದಿರುವ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯ ಹೊಸ ನಿಯಮ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!