ಉತ್ತರ ಪ್ರದೇಶದ ಮೊರಾದಾಬಾದ್‌ನ ನವ ದಂಪತಿ ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ವಿಜಯದ ಸಂಭ್ರಮದ ಜತೆ ತಮ್ಮ ಮದುವೆ ಮಾಡಿಕೊಂಡಿದ್ದಾರೆ.
ನವದೆಹಲಿ (ನವೆಂಬರ್ 6, 2023): ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಭಾರತ - ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಈ ವಿಜಯಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಸಂಭ್ರಮ ಮನೆ ಮಾಡಿದೆ. ಇದೇ ರೀತಿ, ಮದುವೆಯಲ್ಲೂ ನೂತನ ದಂಪತಿ ಭಾರತದ ವಿಜಯವನ್ನು ಸಂಭ್ರಮಿಸಿದ್ದಾರೆ. ಮದುವೆಯ ಸ್ಟೇಜ್ ಮೇಲೆ ವಧು - ವರರು, ಕುಟುಂಬಸ್ಥರು ಹಾಗೂ ಗೆಳೆಯರು ಭಾರತದ ವಿಜಯವನ್ನು ಹಾಗೂ ವಿರಾಟ್ ಕೊಹ್ಲಿ 49ನೇ ಶತಕವನ್ನು ಸಂಭ್ರಮಿಸಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್‌ನ ನವ ದಂಪತಿ ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ವಿಜಯದ ಸಂಭ್ರಮದ ಜತೆ ತಮ್ಮ ಮದುವೆ ಮಾಡಿಕೊಂಡಿದ್ದಾರೆ. ಈ ವೇಳೆ ಮದುವೆಯ ಸ್ಟೇಜ್ ಮೇಲೆ ಇಂಡಿಯಾ ಗೆಲುವಿಗೆ ಸಂಭ್ರಮಾಚರಿಸಲಾಗಿದೆ. 2023 ರ ವಿಶ್ವಕಪ್‌ನ 37 ನೇ ಪಂದ್ಯವು ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ಅದ್ಭುತ ವಿಜಯಕ್ಕೆ ಸಾಕ್ಷಿಯಾಯಿತು ಮತ್ತು ಈ ಹೃದಯಸ್ಪರ್ಶಿ ಘಟನೆಯ ಜತೆ ಈ ನವದಂಪತಿಯ ಮದುವೆಯ ಸಂಭ್ರಮವೂ ಏರ್ಪಟ್ಟಿತ್ತು.
ಇದನ್ನು ಓದಿ: ದಿನ ಜಿಮ್‌ಗೆ ಹೋಗ್ತೀಯಾ; ಚೀಲ ಎತ್ತೋಕ್ಕಾಗಲ್ವಾ: ಮಗಳ ತರಾಟೆಗೆ ತಗೊಂಡ ತಾಯಿಯ ವಿಡಿಯೋ ವೈರಲ್!
ಸುದ್ದಿ ಸಂಸ್ಥೆ ANI ಈ ಡಬಲ್ ಸಂಭ್ರಮವನ್ನು ಸೆರೆಹಿಡಿಯುವ ವಿಡಿಯೋವನ್ನು ಹಂಚಿಕೊಂಡಿದೆ. ಮದುವೆಯಲ್ಲಿ ಅತಿಥಿಗಳು, ಸ್ನೇಹಿತರು ಮತ್ತು ನವವಿವಾಹಿತರ ಕುಟುಂಬ, ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿಯ ಫೋಟೋಗಳನ್ನು ಪ್ರದರ್ಶಿಸುವುದನ್ನು ಸಹ ಗಮನಿಸಬಹುದು. ಅಲ್ಲದೆ, ಪಟಾಕಿ ಸಿಡಿಸುವುದನ್ನು ಸಹ ವಿಡಿಯೋದಲ್ಲಿ ನೋಡಬಹುದಾಗಿದೆ.
| Uttar Pradesh: A bride and groom, along with their relatives and friends, celebrate the victory of Team India against South Africa, in Moradabad
"It is a 'double dhamaka' for me as today is my wedding and India has also won today and Virat Kohli has equalled Sachin… pic.twitter.com/andXVGrEko
ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಅಸಂಖ್ಯಾತ ಕ್ರಿಕೆಟ್ ಉತ್ಸಾಹಿಗಳ ಮೆಚ್ಚುಗೆಗೂ ಸಾಕ್ಷಿಯಾಗಿದೆ. ವರ ಈ ಡಬಲ್ ಸಂಭ್ರಮದ ಬಗ್ಗೆ ಮಾತನಾಡಿದ್ದು, ವಿರಾಟ್ ಕೊಹ್ಲಿಯ ಹೆಚ್ಚುವರಿ ಬೋನಸ್‌ನೊಂದಿಗೆ ಸಚಿನ್ ತೆಂಡೂಲ್ಕರ್ ಅವರ ಏಕದಿನ ಅಂತಾರಾಷ್ಟ್ರೀಯ ಶತಕ ದಾಖಲೆಯನ್ನು ಸರಿಗಟ್ಟುವುದರೊಂದಿಗೆ ಆ ದಿನ ತನ್ನ ಮದುವೆ ಮತ್ತು ಭಾರತದ ಗೆಲುವು ಎರಡನ್ನೂ ಗುರುತಿಸಿದೆ ಎಂದು ಹೆಮ್ಮೆಯಿಂದ ಘೋಷಿಸಿದರು.
ಇದನ್ನು ಓದಿ: ಬಿಲಿಯನೇರ್ ಜಾರ್ಜ್ ಸೊರೋಸ್ ಮಾನವೀಯತೆಯನ್ನೇ ದ್ವೇಷಿಸುತ್ತಾರೆ: ಎಲಾನ್ ಮಸ್ಕ್ ಕಿಡಿ
ಇಂದು ನನ್ನ ಮದುವೆ ಹಾಗೂ ಭಾರತ ತಂಡ ಗೆದ್ದಿದ್ದು, ಜತೆಗೆ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ ಕಾರಣ ನನಗೆ ಇದು ಡಬಲ್ ಧಮಾಕಾ' ಎಂದು ವರ ಹೇಳಿದ್ದಾರೆ. ಈ ಸಂಭ್ರಮದ ಆಚರಣೆಯಿಂದ ವಧು ಸಹ ಹರ್ಷ ವ್ಯಕ್ತಪಡಿಸಿದ್ದು, "ಇದು ಅದ್ಭುತವಾಗಿದೆ. ನಾವು ಈ ದಿನವನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ" ಎಂದು ಹೇಳಿದರು.
ಈ ಗೆಲುವಿನೊಂದಿಗೆ, ಭಾರತವು 2023 ರ ವಿಶ್ವಕಪ್‌ನಲ್ಲಿ ಸತತ ಎಂಟನೇ ಗೆಲುವನ್ನು ಪಡೆದುಕೊಂಡಿದೆ. ಲೀಗ್ ಹಂತದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೇವಲ ಒಂದು ಪಂದ್ಯ ಬಾಕಿ ಉಳಿದಿದೆ. ಭಾರತ ಈಗ ಎಂಟು ಪಂದ್ಯಗಳಿಂದ 16 ಪಾಯಿಂಟ್‌ಗಳನ್ನು ಹೊಂದಿದೆ ಮತ್ತು ವಿಶ್ವಕಪ್ ಟೂರ್ನಿಯಲ್ಲಿ ಏಕೈಕ ಅಜೇಯ ತಂಡವಾಗಿದೆ.
ಇದನ್ನೂ ಓದಿ: ಸಾಕು ನಾಯಿ ಲಿಫ್ಟ್‌ನೊಳಗೆ ಕರೆದೊಯ್ಯಲು ಜಗಳ; ನಿವೃತ್ತ ಐಎಎಸ್ ಅಧಿಕಾರಿ - ಕುಟುಂಬದ ನಡುವೆ ಹೊಡೆದಾಟ: ವಿಡಿಯೋ ವೈರಲ್