ನಿಜ್ಜರ್‌ ಹತ್ಯೆ ಸಾಕ್ಷ್ಯ ಎಲ್ಲಿ? ಮತ್ತೆ ಕೆನಡಾಕ್ಕೆ ಭಾರತ ಪ್ರಶ್ನೆ

By Kannadaprabha News  |  First Published Nov 6, 2023, 9:50 AM IST

ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬುದಕ್ಕೆ ಸಾಕ್ಷ್ಯ ಎಲ್ಲಿದೆ ಎಂದು ಮತ್ತೊಮ್ಮೆ ಕೆನಡಾವನ್ನು ಭಾರತ ಸರ್ಕಾರ ಪ್ರಶ್ನಿಸಿದೆ. ಅಲ್ಲದೆ, ಈ ಹತ್ಯೆಯ ತನಿಖೆ ಈಗಾಗಲೇ ಕಳಂಕಿತವಾಗಿದೆ ಎಂದೂ ಜರೆದಿದೆ.


ಒಟ್ಟಾವಾ/ನವದೆಹಲಿ: ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬುದಕ್ಕೆ ಸಾಕ್ಷ್ಯ ಎಲ್ಲಿದೆ ಎಂದು ಮತ್ತೊಮ್ಮೆ ಕೆನಡಾವನ್ನು ಭಾರತ ಸರ್ಕಾರ ಪ್ರಶ್ನಿಸಿದೆ. ಅಲ್ಲದೆ, ಈ ಹತ್ಯೆಯ ತನಿಖೆ ಈಗಾಗಲೇ ಕಳಂಕಿತವಾಗಿದೆ ಎಂದೂ ಜರೆದಿದೆ.

ಈ ಕುರಿತು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಕೆನಡಾದಲ್ಲಿನ ಭಾರತೀಯ ಹೈಕಮಿಷನರ್‌ ಸಂಜಯ್‌ ಕುಮಾರ್‌ ವರ್ಮಾ(Sanjay Kumar Verma), ‘ತನಿಖೆಯಲ್ಲಿ ಸಹಕರಿಸಲು ಈ ವಿಷಯದಲ್ಲಿ ಕೆನಡಾ ನಮಗೆ ಯಾವುದೇ ಸಮರ್ಪಕ ಅಥವಾ ನಿರ್ದಿಷ್ಟ ಮಾಹಿತಿ ನೀಡಿಲ್ಲ. ಸಾಕ್ಷ್ಯ ಎಲ್ಲಿದೆ? ತನಿಖೆಯ ಸಾರಾಂಶ ಎಲ್ಲಿದೆ? ನಾನೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ತನಿಖೆ ಈಗಾಗಲೇ ಕಳಂಕಿತವಾಗಿದೆ ಎಂದು ಹೇಳುತ್ತೇನೆ’ ಎಂದು ಹೇಳಿದ್ದಾರೆ.

Tap to resize

Latest Videos

ಅಯೋಧ್ಯೆ ರಾಮಮಂದಿರದಲ್ಲಿ ಅಕ್ಷತೆ ಪೂಜೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

‘ನಿಜ್ಜರ್‌ ಹತ್ಯೆಯಲ್ಲಿ ಭಾರತ ಅಥವಾ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಹೇಳುವಂತೆ ಉನ್ನತ ಮಟ್ಟದಿಂದಲೇ ಅವರಿಗೆ (ತನಿಖಾ ತಂಡಕ್ಕೆ) ಸೂಚನೆ ಬಂದಿದೆ’ ಎಂದೂ ಅವರು ಆಪಾದಿಸಿದ್ದಾರೆ. ಆದರೆ ಆ ಉನ್ನತ ವ್ಯಕ್ತಿ ಯಾರೆಂದು ಹೇಳಲಿಲ್ಲ. ಖಲಿಸ್ತಾನಿ ಉಗ್ರ ಹರದೀಪ್‌ ಸಿಂಗ್‌ ನಿಜ್ಜರ್‌ (hardeep singh nijjar)ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು. ಬಳಿಕ ಉಭಯ ದೇಶಗಳ ಸಂಬಂಧ ಹದಗೆಟ್ಟಿತ್ತು.

ಭಾರತೀಯ ಸೇನೆಗೆ ಫೆಬ್ರವರಿಯಲ್ಲಿ ಅಪಾಚೆ ಕಾಪ್ಟರ್‌ ಸೇರ್ಪಡೆ

ನವದೆಹಲಿ: ಅಮೆರಿಕದ ಭಾರಿ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡ ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು (American Apache combat helicopters) ಭಾರತೀಯ ಸೇನೆ (Indian Army) ಮುಂದಿನ ವರ್ಷದ ಫೆಬ್ರವರಿಯಲ್ಲಿ ಪಡೆದುಕೊಳ್ಳಲಿದೆ ಎಂದು ಮೂಲಗಳು ಹೇಳಿವೆ. 2020ರ ಫೆಬ್ರವರಿಯಲ್ಲಿ ನಡೆದ ಈ ಒಪ್ಪಂದದಲ್ಲಿ ಭಾರತ ಸರ್ಕಾರ ಅಮೆರಿಕದ ಬೋಯಿಂಗ್‌ ಕಂಪನಿಯೊಂದಿಗೆ 5,691 ಕೋಟಿ ರು. ಒಪ್ಪಂದ ಮಾಡಿಕೊಂಡಿತ್ತು. ಇದರನ್ವಯ ಮೊದಲ ಆರು ಹೆಲಿಕಾಪ್ಟರ್‌ಗಳು ಫೆಬ್ರವರಿಯಲ್ಲಿ ಸೇನೆಗೆ ಸೇರ್ಪಡೆಗೊಳ್ಳಲಿದೆ.

ಕರ್ನಾಟಕ ಸೇರಿ ದೇಶವ್ಯಾಪಿ ದಾಳಿಗೆ ಸಂಚು: 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

ಈ ಎಎಚ್‌-64ಇ ಕಾಪ್ಟರ್‌ (AH-64E copter) ಸಣ್ಣ ಮಿಸೈಲ್‌ಗಳನ್ನು, ಬಾಂಬುಗಳನ್ನು ಗುರಿಯಿಟ್ಟು ದಾಳಿ ಮಾಡುವ ಸಾಮರ್ಥ್ಯ ಇದೆ. ಜೊತೆಗೆ 70 ಎಂಎಂ ಹೈಡ್ರಾ ರಾಕೆಟ್‌ಗಳನ್ನು ಸಿಡಿಸುತ್ತದೆ. ಇದಲ್ಲದೇ 1200 ಬಾರಿ ಶೂಟ್‌ ಮಾಡಬಲ್ಲ 30 ಎಂಎಂ ಗನ್‌ ಇದರಲ್ಲಿರಲಿದೆ. ಇದರಲ್ಲಿ 360 ಡಿಗ್ರಿ ಸಾಮರ್ಥ್ಯದ ಅಗ್ನಿ ಸೂಚಕ ರಡಾರ್‌ಗಳು ಇದ್ದು, ಕಾಪ್ಟರ್‌ನ ಎದುರಲ್ಲಿ ಎದುರಾಳಿಯ ಗುರಿಯಿಡುವ ಸಾಧನ ಇರಲಿದೆ. ಇದರ ಬೆಲೆ 35ರಿಂದ 50 ಮಿಲಿಯನ್‌ ಡಾಲರ್‌ ಇದೆ ಎನ್ನಲಾಗಿದೆ.

ಮಗಳನ್ನು ಬಿಡಲು ಬಂದ ಅಪ್ಪ ಚಲಿಸುವ ರೈಲಿನಿಂದ ಇಳಿಯುವಾಗ ಕೆಳಗೆ ಬಿದ್ದು ಸಾವು: ದೃಶ್ಯ ಸಿಸಿಯಲ್ಲಿ ಸೆರೆ

click me!