ಸಂಸತ್‌ನಲ್ಲಿ ಪ್ರಶ್ನೆಗಾಗಿ ಲಂಚ: ಮಹುವಾ ಸಂಸತ್ ಐಡಿ ಬಳಸಿ ದುಬೈನಿಂದ 47 ಬಾರಿ ಲಾಗಿನ್

By Kannadaprabha News  |  First Published Nov 2, 2023, 11:07 AM IST

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ವಿಚಾರಣೆಗೆ ಲೋಕಸಭೆಯ ನೈತಿಕ ಸಮಿತಿ ಮುಂದೆ ಇಂದು ಹಾಜರಾಗಲಿದ್ದಾರೆ. ಇದರ ನಡುವೆ ಅವರ ವಿರುದ್ಧ ಆರೋಪಗಳ ಸರಣಿ ಮುಂದುವರಿದಿದೆ. 


ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ವಿಚಾರಣೆಗೆ ಲೋಕಸಭೆಯ ನೈತಿಕ ಸಮಿತಿ ಮುಂದೆ ಇಂದು ಹಾಜರಾಗಲಿದ್ದಾರೆ. ಇದರ ನಡುವೆ ಅವರ ವಿರುದ್ಧ ಆರೋಪಗಳ ಸರಣಿ ಮುಂದುವರಿದಿದ್ದು, ದುಬೈನಿಂದ ಮಹುವಾ ಅವರ ಸಂಸದೀಯ ಇ-ಮೇಲ್ ಖಾತೆಗೆ (parliamentary e-mail account) 47 ಬಾರಿ ಲಾಗ್ ಇನ್ ಆಗಿವೆ ಎಂದು ಮೂಲಗಳು ಹೇಳಿವೆ.

ಉದ್ಯಮಿ ದರ್ಶನ್ ಹೀರಾನಂದಾನಿ ಅವರು ' ಇತ್ತೀಚೆಗೆ ತಾವು ಮಹುವಾ ಅವರ ಸಂಸದೀಯ ಇ-ಮೇಲ್ ಐಡಿ (E-mail) ಬಳಸಿ, ಮೋದಿ ಸರ್ಕಾರವನ್ನು ಹಾಗೂ ಉದ್ಯಮಿ ಗೌತಮ್ ಅದಾನಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳನ್ನು ಕೇಳಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮಹುವಾ ಭಾರತದಲ್ಲಿದ್ದರೂ ಅವರ ಇ-ಮೇಲ್ ಐಡಿ ಬಳಸಿ ದುಬೈನಿಂದ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಪ್ರಕರಣ ಬಯಲಿಗೆ ಎಳೆದಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಆರೋಪಿಸಿದ್ದರು.

ಸರ್ಕಾರಿ ಪ್ರಾಯೋಜಿತ ದಾಳಿ ಸಂದೇಶ ವಿವಾದ: ಸಂಸತ್ತಿನ ಐಟಿ ಸಮಿತಿಯಿಂದ ಆ್ಯಪಲ್‌ ಕಂಪನಿಗೆ ಸಮನ್ಸ್‌ ಸಾಧ್ಯತೆ

Tap to resize

Latest Videos

ಈ ನಡುವೆ ಬುಧವಾರ ಮಾತನಾಡಿದ ದುಬೆ, 47 ಸಲ ಮಹುವಾ ಅವರ ಐಡಿ ದುಬೈನಿಂದ ಲಾಗಿನ್ ಆಗಿದ್ದೇ ನಿಜವಾದರೆ ಭಾರತದ ಎಲ್ಲ ಸಂಸದರು ಅವರ ವಿರುದ್ಧ ಸಿಡಿದೇಳಬೇಕು ಎಂದು ಕರೆ ನೀಡಿದ್ದಾರೆ.

ಸ್ಟೈಲಿಶ್ ಲುಕ್ ಫುಲ್ ಗಿಮಿಕ್: ಮೋದಿ ವಿರುದ್ಧ ಸದಾ ಕಿಡಿಕಾರ್ತಿದ್ದ ಟಿಎಂಸಿ ಸಂಸದೆ ಬಣ್ಣ ಬಯಲು ಮಾಡಿದ್ರಾ ಉದ್ಯಮಿ...!

ಈ ನಡುವೆ ಮಹುವಾ ಮೊಯಿತ್ರಾ, ತಾವು ಇಂದು ನೈತಿಕ ಸಮಿತಿ ಮುಂದೆ ನೀಡುವ ಹೇಳಿಕೆಯನ್ನು ಬುಧವಾರವೇ ಬಿಡುಗಡೆ ಮಾಡಿದ್ದು, ನಾನು ಈ ಪ್ರಕರಣದಲ್ಲಿ ಕೆಲವು ಕ್ರಿಮಿನಲ್ ಆರೋಪಗಳನ್ನು ಮಾಡಿದ್ದೇನೆ. ಅದರ ವಿಚಾರಣೆ ಅಧಿಕಾರ ನೈತಿಕ ಸಮಿತಿಗೆ ಇಲ್ಲ ಎಂದಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಆರೋಪ ಮಾಡಿರುವ ಉದ್ಯಮಿ ಹೀರಾನಂದಾನಿಯ ಪಾಟೀ ಸವಾಲಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಶ್ನೆಗಾಗಿ ಲಂಚ ಕೇಸ್‌: ಉದ್ಯಮಿಗೆ ಪಾಸ್‌ವರ್ಡ್‌ ನೀಡಿದ್ದು ನಿಜವೆಂದು ಒಪ್ಪಿಕೊಂಡ ಟಿಎಂಸಿ ಸಂಸದೆ

ಇಂದು ವಿಚಾರಣೆ: ಪ್ರಕರಣ ಸಂಬಂಧ ನ.2ರಂದು ವಿಚಾರಣೆಗೆ ಹಾಜರಾಗುವಂತೆ ಮಹುವಾಗೆ ಸಂಸತ್ತಿನ ಶಿಸ್ತು ಸಮಿತಿ ನೋಟಿಸ್‌ ಜಾರಿ ಮಾಡಿದೆ.  ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಮಹುವಾ ಖಚಿತಪಡಿಸಿದ್ದಾರೆ.

click me!