
ಚೆನ್ನೈ(ಏ.10) : ತಮಿಳುನಾಡಿನ ಚೆನ್ನೈನ ಹೊರವಲಯದಲ್ಲಿ ಯುವಕರಿಗೆ ಮೈದಾನಲ್ಲಿ ಕ್ರಿಕೆಟ್ ಆಡುವಾಗ ನಿಷ್ಕ್ರಿಯ ಕ್ಷಿಪಣಿಯೊಂದು ಸಿಕ್ಕಿದ್ದೂ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಏಪ್ರಿಲ್ 7ರಂದು ಈ ಘಟನೆ ನಡೆದಿದ್ದು ಕ್ರಿಕೆಡ್ ಆಡುವಾಗ ಯುವಕರು ಸ್ಟಂಪ್ ಹಾಕಲು ಗುಂಡಿ ತೋಡುವಾಗ ಈ ಕ್ಷಿಪಣಿ ಸಿಕ್ಕಿದೆ.
ಕ್ಷಿಪಣಿ ಸಿಗುತ್ತಿದ್ದಂತೆಯೇ ಯುವಕರು ಅದನ್ನು ಒಡೆಯಲು ಪ್ರಯತ್ನಿಸಿದ್ದು ಸ್ಥಳಿಯರು ಅವರನ್ನು ತಡೆದಿದ್ದಾರೆ. ನಂತರ ಗ್ರಾಮಸ್ಥರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ಕ್ಷಿಪಣಿ ಸ್ಫೋಟಗೊಳ್ಳುವ ಸಾಧ್ಯತೆ ಇದ್ದಿದ್ದರಿಂದ ಪೋಲಿಸರು ಬಾಂಬ್ ನಿಷ್ಕ್ರಿಯ ದಳದವರಿಗೆ ಮಾಹಿತಿ ನೀಡಿದ್ದಾರೆ. ತನಿಖೆಯ ನಂತರ ಈ ಕ್ಷಿಪಣಿಯೂ ಸುಮಾರು 8 ಕೆಜಿ ತೂಕವಿದ್ದು ಒಂದು ಅಡಿ ಅಗಲವಿದೆ.
ಕ್ಷಿಪಣಿಯನ್ನು ಹಾರಿಸಿದಾಗ ಅದು ಸ್ಫೋಟಗೊಳ್ಳದೇ ಹಾಗೆಯೇ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಹಾಗಾಗಿ ಈ ಕ್ಷಿಪಣಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಈ ಕ್ಷಿಪಣಿಯನ್ನು ತಜ್ಞರ ತಂಡಕ್ಕೆ ಹಸ್ತಾಂತರಿಸಲಾಗಿದ್ದು ನಂತರ ಧ್ವಂಸ ಮಾಡಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ