ನಾನು ರಾಜಾ ಮಾನ್ ಸಿಂಗ್, ಕಳೆದ ಜನ್ಮದ ಕತೆ ಹೇಳಿ ಆಭರಣ ಬಚ್ಚಿಟ್ಟ ಸ್ಥಳ ಹೇಳಿದ ಬಾಲಕ

Published : Apr 26, 2026, 09:51 PM IST
Raja Man Singh Suite

ಸಾರಾಂಶ

ನಾನು ರಾಜಾ ಮಾನ್ ಸಿಂಗ್, ಕಳೆದ ಜನ್ಮದ ಕತೆ ಹೇಳಿ ಆಭರಣ ಬಚ್ಚಿಟ್ಟ ಸ್ಥಳ ಹೇಳಿದ ಬಾಲಕ, ಹಳದಿಘಾಟ್‌ನಲ್ಲಿ ನಡೆದ ಯುದ್ದದಲ್ಲಿ ನಾನು ಸೋತೆ. ಅಮೆರ್ ಕೋಟೆ ನಿರ್ಮಿಸಿದ್ದೇನೆ. ಅಲ್ಲಿ ನಿಧಿ ಬಚ್ಚಿಟ್ಟ ಜಾಗದ ಸ್ಥಳವನ್ನೂ ಹೇಳಿದ್ದಾನೆ.

ಜೈಪುರ್ (ಏ.26) ಹೋದ ಜನ್ಮದಲ್ಲಿ ಏನಾಗಿದ್ದೆ ಅನ್ನೋದು ತಿಳಿದುಕೊಳ್ಳಲು ಹಲವರು ಆಸಕ್ತಿ ತೋರುತ್ತಾರೆ. ಕೆಲ ವರ್ಷಗಳ ಹಿಂದೆ ಇದೇ ಪರಿಕಲ್ಪನೆಯಲ್ಲಿ ಟಿವಿ ಕಾರ್ಯಕ್ರಮಗಳು ಪ್ರಸಾರವಾಗಿತ್ತು. ಇದೀಗ ಬಾಲಕನೊಬ್ಬ ತಾನು ಕಳೆದ ಜನ್ಮದಲ್ಲಿ ರಜಪೂತ ರಾಜ ಮಾನ್ ಸಿಂಗ್ ಆಗಿದ್ದೆ ಎಂದು ಹೇಳಿದ್ದಾನೆ. ರಾಜಸ್ಥಾನದ ಟೋಂಕ್ ಜಿಲ್ಲೆಯ ಜೆಕ್ಮಾಬಾದ್ ಗ್ರಾಮದ 5ನೇ ತರಗತಿ ಬಾಲಕ ಕನ್ಹರಾಮ್ ಭೈರ್ವಾ ಇದೀಗ ರಾಜಾ ಮಾನ್ ಸಿಂಗ್ ಕುರಿತು ಇತಿಹಾಸ ಹೇಳುತ್ತಿದ್ದಾನೆ. ಕೋಟೆ ಕಟ್ಟಿದ್ದೇನೆ, ಹಳದಿಘಾಟ್ ಯುದ್ಧದಲ್ಲಿ ಸೋತಿದ್ದೇನೆ. ಅಮೆರ್ ಕೊಟೆಯಲ್ಲಿ ನಿಧಿ ಬಚ್ಚಿಟ್ಟಿದ್ದೇನೆ ಎಂದು ಹಿಂದಿನ ಜನ್ಮದ ಹಲವು ಕತೆ ಹೇಳಿದ್ದಾನೆ. ಇದೀಗ ಈ ಬಾಲಕನ ಮಾತನಾಡಿಸಲು ಭಾರಿ ಜನರು ಆಗಮಿಸುತ್ತಿದ್ದಾರೆ.

ಕನ್ಹಾರಾಮ್ ಬಾಲಕ ಭೈರ್ವಾ ಕುಟುಂಬದಲ್ಲಿ ಜನಿಸಿದ್ದಾನೆ. ಆದರೆ ಬಾಲಕ ತಾನು ಭೈರ್ವಾ ಅಲ್ಲ ರಜಪೂತ ಎಂದು ತಾಯಿಗೆ ಪದೇ ಪದೇ ಹೇಳುತ್ತಿದ್ದ ಎಂದು ತಾಯಿ ಗ್ಯಾರ್ಸಿ ದೇವಿ ಹೇಳಿದ್ದಾರೆ. ಮನೆಯಲ್ಲಿ ಮಾಡಿದ ಅಡುಗೆ ಮುಟ್ಟುತ್ತಿಲ್ಲ. ತಾನು ರಜಪೂಜ ರಾಜ ಎಂದು ಹೇಳುತ್ತಾನೆ. ಶೀಲಾ ದೇವಿ ದೇವಸ್ಥಾನವನ್ನು ಹಿಂದಿನ ಜನ್ಮದಲ್ಲಿ ಕಟ್ಟಿಸಿದ್ದೇನೆ. ಶೀಲಾ ದೇವಿ ಮೂರ್ತಿಯನ್ನು ಪಶ್ಚಿಮ ಬಂಗಾಳದಿಂದ ತರಲಾಗಿತ್ತು. ಈ ದೇವಸ್ಥಾನದ ಹಲವು ಭಾಗದಲ್ಲಿ ನಿಧಿಗಳನ್ನು ಬಚ್ಚಿಡಲಾಗಿದೆ ಎಂದಿದ್ದಾನೆ.

ಅಮೆರ್ ಕೋಟೆಯಲ್ಲಿ ನಿಧಿ

ಅಮೆರ್ ಕೋಟೆಯಲ್ಲಿ ರಾಜ್ಯಭಾರ ಮಾಡುತ್ತಿದ್ದ ರಾಜಾ ಮಾನ್ ಸಿಂಗ್ ಹಲವು ನಿಧಿಗಳನ್ನು ಬಚ್ಚಡಲಾಗಿದೆ. ಸತತ ದಾಳಿ, ಯುದ್ಧಗಳ ಕಾರಣ ರಾಜ್ಯಭಾರ, ಸೇನೆ ನಿರ್ವಹಣೆಗೆ ಚಿನ್ನಾಭರಣಗಳ ನಿಧಿಯನ್ನು ಕೋಟೆಯಲ್ಲಿ ಇಢಲಾಗಿದೆ. ಮಹಾರಾಣಾ ಪ್ರತಾಪ್ ಜೊತೆಗಿನ ಹಳದಿ ಘಾಟ್ ಯುದ್ಧದಲ್ಲಿ ತಾನು ಸೋತೆ ಎಂದು ಬಾಲಕ ಹೇಳುತ್ತಿದ್ದಾನೆ.

ಬಾಲಕನ ಮಾಹಿತಿ ಹೊರಬೀಳುತ್ತಿದ್ದಂತೆ ಹಲವರು ಈತನ ಮಾತನಾಡಿಸಲು ತೆರಳುತ್ತಿದ್ದಾರೆ. ರಾಜಾ ಮಾನ್ ಸಿಂಗ್ ಕುರಿತು ಬಾಲಕನ ಬಳಿ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಸರಿಯಾದ ಉತ್ತರ ನೀಡಲು ಈತ ವಿಫಲನಾಗುತ್ತಿದ್ದಾನೆ. ಒಮ್ಮೊಮ್ಮೆ ತನ್ನ ಸೈನ್ಯದಲ್ಲಿರುವ ಸೇನಾಪತಿಗಳ ತನ್ನ ನೆಚ್ಚಿನ ವ್ಯಕ್ತಿಗಳು ಎಂದು ಹೇಳುತ್ತಾನೆ. ಮತ್ತೆ ಕೇಳಿದರೆ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ವ್ಯಕ್ತಿ ಎಂದು ಹೇಳುತ್ತಿದ್ದಾನೆ. ಸ್ಥಳೀಯರು ಹಾಗೂ ಕುಟುಂಬ ಈತ ದೈವಿಕ ಶಕ್ತಿಯ ಮಗ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಹಲವರು ಈತ ರಾಜಾ ಮಾನ್ ಸಿಂಗ್ ಇತಿಹಾಸವನ್ನು ಸ್ವಲ್ಪ ಓದಿಕೊಂಡಿದ್ದಾನೆ. ತನ್ನ ಸುತ್ತಮುತ್ತಲಿನ ಇತಿಹಾಸ ಈತನಿಗೆ ಪ್ರೇರಣೆ ನೀಡಿದೆ. ಆದರೆ ಅದೇ ಭ್ರಮೆಯಲ್ಲಿ ತಾನು ರಾಜಾ ಮಾನ್ ಸಿಂಗ್ ಎಂದು ಕತೆ ಹೇಳುತ್ತಿದ್ದಾನೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಂಸಾಹಾರ ಪ್ರಸಾದ ನೀಡುವ ಕಾಳಿಬಾರಿ ದೇವಸ್ಥಾನಕ್ಕೆ ಮೋದಿ ಭೇಟಿ, ಕಂಗಾಲಾದ ಟಿಎಂಸಿ
Viral Video: ಗಂಡನಿಗೆ ಜಾಮೀನು ಕೊಡಿಸೋಕೆ ಬಂದು ಜಗಳವಾಡಿದ ಹೆಂಡತಿಯರು; ಗಂಡ ಹೊರಗೆ, ಆ ಇಬ್ಬರೂ ಒಳಗೆ!