ಕೊರೋನಾ ರೋಗಿಗಳ ಕಾಡುತ್ತಿದೆ ಬ್ಲಾಕ್‌ ಫಂಗಸ್‌: ದೃಷ್ಟಿಹೀನತೆ, ಸಾವಿಗೂ ಕಾರಣ!

By Kannadaprabha NewsFirst Published May 9, 2021, 8:19 AM IST
Highlights

ಕೊರೋನಾ ರೋಗಿಗಳ ಕಾಡುತ್ತಿದೆ ಬ್ಲಾಕ್‌ ಫಂಗಸ್‌| ಇದು ದೃಷ್ಟಿಹೀನತೆ, ಸಾವಿಗೂ ಕಾರಣವಾಗಬಲ್ಲದು

ಮುಂಬೈ/ಅಹಮದಾಬಾದ್‌(ಮೇ.09): ಕೊರೋನಾ 2ನೇ ಅಲೆಯಿಂದ ದೇಶ ತತ್ತರಿಸಿರುವಾಗಲೇ, ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲಾಕ್‌ ಫಂಗಸ್‌ ಎಂದು ಕರೆಯಲ್ಪಡುವ ಶೀಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ದೆಹಲಿ, ಮುಂಬೈ ಹಾಗೂ ಗುಜರಾತ್‌ನಲ್ಲಿ ವರದಿ ಆಗಿವೆ. ಕಳೆದ ವರ್ಷ ಕೂಡ ಕೊರೋನಾದಿಂದ ಚೇತರಿಸಿಕೊಂಡರಿವರಲ್ಲಿ ಬ್ಲಾಕ್‌ ಫಂಗಸ್‌ಗಳು ಕಂಡುಬಂದಿದ್ದವು. ಈ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿಹೀನತೆಗೆ ಕಾರಣವಾಗಲಿದೆ. ಒಂದು ವೇಳೆ ಈ ಸೋಂಕು ಮೆದುಳಿಗೆ ವ್ಯಾಪಿಸಿದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಕೊರೋನಾ ಗೆದ್ದವರ ಮೇಲೆ ಈಗ ಡೆಡ್ಲಿ ಬ್ಲ್ಯಾಕ್ ಫಂಗಸ್ ಅಟ್ಯಾಕ್!

ಏನಿದು ಬ್ಲಾಕ್‌ ಫಂಗಸ್‌?

ರೋಗನಿರೋಧಕ ಶಿಕ್ಷ ಕಡಿಮೆ ಇದ್ದವರು. ಡಯಾಬಿಟಿಸ್‌ನಂತಹ ಕಾಯಿಲೆ ಉಳ್ಳವರರಲ್ಲಿ ಶಿಲೀಂದ್ರ ಸೊಂಕು ಕಾಣಿಸಿಕೊಳ್ಳುತ್ತಿದೆ. ಕೊರೋನಾದಿಂದ ಗುಣಮುರಾದ ರೋಗಿಗಳು ಮ್ಯೂಕೋರ್ಮೈಕೋಸಿಸ್‌ಗೆ ಕಾರಣವಾಗುವ ಫಂಗಸ್‌ಗಳಿಗೆ ತುತ್ತಾಗುವುದರಿಂದ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

"

ರೋಗ ಲಕ್ಷಣಗಳೇನು?

ಕಣ್ಣಿನಲ್ಲಿ ನೋವು, ಒಂದು ಕಡೆ ಮುಖ ಊದಿಕೊಳ್ಳುವಿಕೆ, ತಲೆ ನೋವು, ಜ್ವರ, ಮೂಗು ಕಟ್ಟುವಿಕೆ ಇವು ಸೋಂಕಿನ ಲಕ್ಷಣಗಳಾಗಿವೆ.

ಯಾರಲ್ಲಿ ಕಾಣಿಸಿಕೊಳ್ಳುತ್ತೆ?

ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ಬ್ಲಾಕ್‌ ಫಂಗಸ್‌ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೊರೋನಾದಿಂದ ಚೇತರಿಸಿಕೊಂಡ 2ರಿಂದ 3 ವಾರಗಳ ಬಳಿಕ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಕೋವಿಡ್‌ ಚಿಕಿತ್ಸೆಗಾಗಿ ಸ್ಟಿರಾಯ್ಡ್‌ ಪಡೆದುಕೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಈ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!