ದೆಹಲಿ ಮೇಯರ್ ಚುನಾವಣೆ ರಣಾಂಗಣವಾಗಿದೆ. ಇದರ ನಡುವೆ ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಪ್‌ಗೆ ಹಿನ್ನಡೆಯಾಗಿದೆ. ಚಂಡಿಘಡ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕೇವಲ 1 ಮತದ ಅಂತರದಿಂದ ಆಪ್ ಮಣಿಸಿದ ಬಿಜೆಪಿ ಮೇಯರ್ ಸ್ಥಾನ ವಶಪಡಿಸಿಕೊಂಡಿದೆ.
ಚಂಡೀಘಡ(ಜ.17): ದೆಹಲಿ ಮೇಯರ್ ಸ್ಥಾನಕ್ಕಾಗಿ ಆಪ್ ಹಾಗೂ ಬಿಜೆಪಿ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಈಗಾಗಲೇ ಪಾಲಿಕೆ ರಣಾಂಗಣಕ್ಕೂ ಸಾಕ್ಷಿಯಾಗಿದೆ. ಇದರ ನಡುವೆ ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿಗೆ ಹಿನ್ನಡೆಯಾಗಿದೆ. ಚಂಡೀಘಡ ಪಾಲಿಕೆ ಚುನಾವಣೆಯಲ್ಲಿ ಕೇವಲ 1 ಮತಗಳ ಅಂತರದಿಂದ ಮೇಯರ್ ಸ್ಥಾನವನ್ನು ಆಪ್ ಕಳೆದುಕೊಂಡಿದೆ. ಬಿಜೆಪಿ ಗೆಲುವಿನ ಮೂಲಕ ಚಂಡೀಘಡ ಪಾಲಿಕೆ ಗೆದ್ದುಕೊಂಡಿದೆ. ಬಿಜೆಪಿ 15 ಸ್ಥಾನ ಗೆದ್ದುಕೊಂಡರೆ, ಆಪ್ 14 ಸ್ಥಾನ ಗೆದ್ದುಕೊಂಡಿದೆ. ಚಂಡೀಘಡದಲ್ಲಿ ಬಿಜೆಪಿಯ ಅನೂಪ್ ಗುಪ್ತ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಆಪ್ ಅಭ್ಯರ್ಥಿ ಜಸ್ಬೀರ್ ಸಿಂಗ್ ಮಣಿಸಿದ ಅನೂಪ್ ಸಿಂಗ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಚಂಡೀಘಡ ಪಾಲಿಕೆಯ ಮೇಯರ್, ಹಿರಿಯ ಉಪಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿತ್ತು. 5 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 2022ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು.
Narendra Modi: ಪ್ರಧಾನಿ ಸ್ವಾಗತಿಸುವುದನ್ನು ಮರೆತ ಮೇಯರ್; ಸಾರ್ವಜನಿಕರಿಂದ ಟೀಕೆ
ಪಂಜಾಬ್‌ನಲ್ಲಿ ಭಗವಂತ್ ಮಾನ್ ಸಿಂಗ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ ಚಂಡೀಘಡ ಮೇಯರ್ ಆಡಳಿತದ ಮೇಯರ್ ಸ್ಥಾನ ಅಲಂಕರಿಸುವುದು ಪ್ರತಿಷ್ಠೆಯಾಗಿತ್ತು. ಆದರೆ ಈ ಬಾರಿಯೂ ಆಮ್ ಆದ್ಮಿ ಪಾರ್ಟಿಗೆ ಮೇಯರ್ ಸ್ಥಾನ ಒಲಿದು ಬಂದಿಲ್ಲ.
ದೆಹಲಿ ಮೇಯರ್ ಚುನಾವಣೆ ಮುಂದೂಡಿಕೆ
ನವದೆಹಲಿ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆಗಾಗಿ ನಿಗದಿಯಾಗಿದ್ದ ಸಭೆ, ಭಾರೀ ಗದ್ದಲದ ಕಾರಣ ಮುಂದೂಡಲ್ಪಟ್ಟಿದೆ. ಸಭೆ ವೇಳೆ ಬಿಜೆಪಿ ಮತ್ತು ಆಪ್ ಸದಸ್ಯರ ನಡುವೆ ಭಾರೀ ವಾಕ್ಸಮರ, ತಳ್ಳಾಟ ನಡೆದಿತ್ತು. ಆಪ್ ಸದಸ್ಯರು ನಡೆಸಿದ ದಾಳಿಯಲ್ಲಿ ತನ್ನ ಪಕ್ಷದ ನಾಲ್ವರಿಗೆ ಗಾಯಗಳಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
Mikey Hothi: ಕ್ಯಾಲಿರ್ಫೋನಿಯಾ ಮೊದಲ ಸಿಖ್ ಮೇಯರ್ ಆಗಿ ಭಾರತೀಯ ಮಿಕಿ ಹೋಥಿ ನೇಮಕ
ಮೇಯರ್, ಉಪಚುನಾವಣೆಗೂ ಮುನ್ನ ಉಪರಾಜ್ಯಪಾಲ ಸಕ್ಸೇನಾ ತಮ್ಮ ಅಧಿಕಾರ ಬಳಸಿ 10 ಸದಸ್ಯರನ್ನು ಪಾಲಿಕೆಗೆ ನಾಮನಿರ್ದೇಶನ ಮಾಡಿದ್ದರು. ಹೀಗಾಗಿ ಅವರಿಗೆ ಮೊದಲು ಪ್ರಮಾಣ ವಚನ ಬೋಧಿಸಲು ಚುನಾವಣೆ ಉಸ್ತುವಾರಿ ಹೊತ್ತಿದ್ದ ಬಿಜೆಪಿಯ ಸತ್ಯ ಶರ್ಮಾ ಮುಂದಾದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಪ್ ಸದಸ್ಯರು, ಬಿಜೆಪಿ ಪರೋಕ್ಷವಾಗಿ ಅಧಿಕಾರಿ ಹಿಡಿಯಲು ಸಂಚು ರೂಪಿಸಿದೆ ಎಂದು ಆರೋಪಿಸಿ ನಾಮ ನಿರ್ದೇಶಿತ ಸದಸ್ಯರ ಪ್ರಮಾಣ ವಚನಕ್ಕೆ ಅಡ್ಡಿ ಮಾಡಿತು. ಟೇಬಲ್ ಏರಿ ಘೋಷಣೆ ಕೂಗಿ, ಸಭೆ ನಡೆಯದಂತೆ ನೋಡಿಕೊಂಡರು. ಈ ವೇಳೆ ಬಿಜೆಪಿ- ಆಪ್ ಶಾಸಕರ ನಡುವೆ ಮಾತಿನ ಸಮರ, ತಳ್ಳಾಟ, ನೂಕಾಟ ನಡೆದು ಹಲವರು ಗಾಯಗೊಂಡಿದ್ದರು.
250 ಸದಸ್ಯ ಬಲದ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆ ವೇಳೆ, ಆಪ್ 134, ಬಿಜೆಪಿ 104 ಸ್ಥಾನ ಗೆದ್ದುಕೊಂಡಿವೆ. ಮೇಯರ್ ಚುನಾವಣೆಯಲ್ಲಿ ಪಾಲಿಕೆಗೆ ಆಯ್ಕೆಯಾದ ಸದಸ್ಯರ ಜೊತೆಗೆ, ದೆಹಲಿ ವ್ಯಾಪಿಯ 7 ಲೋಕಸಭಾ, 3 ರಾಜ್ಯಸಭಾ, 14 ಶಾಸಕರು, ದೆಹಲಿ ವಿಧಾನಸಭೆಯ ಸ್ಪೀಕರ್, ಆಪ್‌ನ 13 ಮತ್ತು ಬಿಜೆಪಿಯ ಓರ್ವ ಸದಸ್ಯರು ಕೂಡಾ ಮತ ಚಲಾವಣೆ ಹಕ್ಕು ಹೊಂದಿರುತ್ತಾರೆ.