ಶಿವಸೇನೆ ಸರ್ಕಾರ ಕೆಳಗಿಳಿಸ್ತೀವಿ, ಮಹಾರಾಷ್ಟ್ರದಲ್ಲಿ ಶೀಘ್ರ ಬಿಜೆಪಿ ಸರ್ಕಾರ ರಚನೆ: ನಡ್ಡಾ

By Suvarna NewsFirst Published Oct 9, 2020, 11:02 AM IST
Highlights

ಶಿವಸೇನೆ ಸರ್ಕಾರ ಕೆಳಗಿಳಿಸ್ತೀವಿ ಎಂದ ನಡ್ಡಾ | ಶೀಘ್ರ ಬಿಜೆಪಿ ಅಧಿಕಾರಕ್ಕೆ 

ಮುಂಬೈ(ಅ.09): ಶಿವಸೇನೆ ನೇತೃತ್ವದ ಕಾಂಗ್ರೆಸ್‌, ಎನ್‌ಸಿಪಿ ಸರ್ಕಾರ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ. ಈಗ ಆಡಳಿತದಲ್ಲಿರುವ ಮೂರೂ ಪಕ್ಷಗಳು ವಿಪಕ್ಷ ಸ್ಥಾನದಲ್ಲಿ ಕೂರಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ.

ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಜನಾದೇಶ ಬಂದಿತ್ತು. ಆದರೆ ನಮಗೆ ಮೋಸ ಮಾಡಲಾಯಿತು. ಈ ಸರ್ಕಾರವನ್ನು ಕೆಳಗಿಳಿಸುತ್ತೇವೆ.

ಮಾಜಿ ಡಿಜಿಪಿಯನ್ನೇ ಮಣಿಸಿ ಬಿಹಾರ ಟಿಕೆಟ್‌ ಪಡೆದ ಮಾಜಿ ಕಾನ್‌ಸ್ಟೇಬಲ್‌!

ಸದ್ಯ ನಾವು ಮಹಾರಾಷ್ಟ್ರದಲ್ಲಿ ಪ್ರತಿಪಕ್ಷದಲ್ಲಿದ್ದೇವೆ. ಶೀಘ್ರದಲ್ಲೇ ಆಡಳಿತ ಪಕ್ಷವಾಗುತ್ತೇವೆ. ಹಲವು ಜನರು ದೇವೇಂದ್ರ ಫಡ್ನವೀಸ್‌ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಿದ್ದಾರೆ ಎಂದರು.

2019ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಯಾಗಿ ಸ್ಪರ್ಧಿಸಿತ್ತು. ಆದರೆ ಫಲಿತಾಂಶದ ನಂತರ ಶಿವಸೇನೆ ಬಿಜೆಪಿಗೆ ಕೈಕೊಟ್ಟು ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜೊತೆ ಕೈಜೋಡಿಸಿತ್ತು.

click me!